ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಹಾಕಿದ ರಾಹುಲ್ ದ್ರಾವಿಡ್!
- ಟೀಂ ಇಂಡಿಯಾ ಮುಂದಿನ ಕೋಚ್ ರಾಹುಲ್ ದ್ರಾವಿಡ್?
- ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ್ದ ಬಿಸಿಸಿಐ, ದ್ರಾವಿಡ್ ಅರ್ಜಿ
- NCA ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್
ಮುಂಬೈ(ಅ.26): ಟೀಂ ಇಂಡಿಯಾ(Team India) ಮುಂದಿನ ಕೋಚ್ ಯಾರು? ಈ ಪ್ರಶ್ನೆ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಕುರಿತು ಚರ್ಚೆಗಳು ನಡೆಯುತ್ತಿದೆ. ಇತ್ತ ಬಿಸಿಸಿಐ(BCCI) ಕೋಚ್ ಸ್ಥಾನಕ್ಕೆ ಅರ್ಹರಿಂದ ಅರ್ಜಿ ಅಹ್ವಾನಿಸಿದೆ. ಇಷ್ಟು ದಿನ ಹಿಂದೇಟು ಹಾಕಿದ್ದ ಮಾಜಿ ನಾಯಕ, NCA ಮುಖ್ಸಸ್ಥ ರಾಹುಲ್ ದ್ರಾವಿಡ್(Rahul Dravid) ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಹಾಕಿದ್ದಾರೆ.
Team India ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ..!
ಟಿ20 ವಿಶ್ವಕಪ್ ಟೂರ್ನಿ ಬಳಿಕ ರವಿ ಶಾಸ್ತ್ರಿ ಕೋಚ್ ಅವದಿ ಮುಕ್ತಾಯವಾಗಲಿದೆ. ಹೀಗಾಗಿ ಬಿಸಿಸಿಐ ನೂತನ ಕೋಚ್(Head Coach) ಹುಡುಕಾಟದಲ್ಲಿದೆ. ರಾಹುಲ್ ದ್ರಾವಿಡ್ ಮುಂದಿನ ಕೋಚ್ ಆಗಬೇಕು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಅದು ನಿಜವಾಗುವ ಸಾಧ್ಯತೆ ಹೆಚ್ಚಾಗಿದೆ. ಇಂದು(ಅ.26) ಕನ್ನಡಿಗ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಹಾಕಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಹುಲ್ ದ್ರಾವಿಡ್ ಅರ್ಜಿ ಹಾಕಿರುವ ಕಾರಣ ಇತ್ತ ಬಿಸಿಸಿಐಗೆ ಮತ್ತೊಂದು ಆಯ್ಕೆ ಮುಂದಿಲ್ಲ. ಅಂಡರ್ 19, ಭಾರತ ಎ ತಂಡದ ಕೋಚ್ ಆಗಿ ಯಶಸ್ವಿಯಾಗಿರುವ ರಾಹುಲ್ ದ್ರಾವಿಡ್, ಟೀಂ ಇಂಡಿಯಾ ಕೋಚ್ ಆಗಬೇಕು ಅನ್ನೋದು ಬಿಸಿಸಿಐ ಒಲವು. ಇದೀಗ ರಾಹುಲ್ ದ್ರಾವಿಡ್ ಅರ್ಜಿ ಹಾಕಿರುವುದು ಬಿಸಿಸಿಐ ಸಂಭ್ರಮ ಡಬಲ್ ಮಾಡಿದೆ.
ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗುವ ಕುರಿತಂತೆ ಅಚ್ಚರಿಕೆಯ ಹೇಳಿಕೆ ನೀಡಿದ ಸೌರವ್ ಗಂಗೂಲಿ..!
ರಾಹುಲ್ ದ್ರಾವಿಡ್ ಟೀ ಇಂಡಿಯಾ ಕೋಚ್ ಆಗಿ ಆಯ್ಕೆಯಾದರೆ ನ್ಯಾಶಲ್ ಕ್ರಿಕೆಟ್ ಅಕಾಡೆಮಿ(NCA)ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ರಾಹುಲ್ ದ್ರಾವಿಡ್ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಮೊದಲ ಸುತ್ತಿನ ಮಾತುಕತೆಗಳು ನಡೆದಿದೆ.
ಕ್ರಿಕೆಟಿಗನಾಗಿ, ನಾಯಕನಾಗಿ, ಕೋಚ್ ಆಗಿ, ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ರಾಹುಲ್ ದ್ರಾವಿದ್ ಅದ್ವಿತೀಯ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾ ಏಕಕಾಗಲು ಎರಡು ತಂಡದ ವಿರುದ್ದ ಟೂರ್ನಿ ಆಡಿತ್ತು. ಶಿಖರ್ ಧವನ್ ನಾಯಕತ್ವದ ತಂಡ ಶ್ರೀಲಂಕಾ ಪ್ರವಾಸ ಮಾಡಿತ್ತು. ಈ ವೇಳೆ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚಿಂಗ್ ಮಾಡಿದ್ದರು.
T20 World Cup ಬಳಿಕ ಟೀಂ ಇಂಡಿಯಾ ಕೋಚ್ ಆಗಲು ಟಾಮ್ ಮೂಡಿ ಆಸಕ್ತಿ..!
ರಾಹುಲ್ ದ್ರಾವಿಡ್ ಕೋಚ್ ಜವಾಬ್ದಾರಿ ವಹಿಸಿಕೊಳ್ಳುವಂತೆ ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಜಯ್ ಶಾ ಮನವೊಲಿಸಿದ್ದರು. ಇದೀಗ ಬಿಸಿಸಿಐ ಕೋಚ್ ಹುದ್ದೆ ಅರ್ಜಿ ಆಹ್ವಾನಕ್ಕೂ ಮೊದಲು ಗಂಗೂಲಿ ಹಾಗೂ ಜಯ್ ಶಾ ರಾಹುಲ್ ದ್ರಾವಿಡ್ ಮನಒಲಿವು ಕೆಲಸ ಮಾಡಿದ್ದರು. ಆದರೆ ರಾಹುಲ್ ದ್ರಾವಿಡ್ ಮೌನಕ್ಕೆ ಜಾರಿದ್ದರು. ಇದೀಗ ಅರ್ಜಿ ಹಾಕುವ ಮೂಲಕ ಬಿಸಿಸಿಐ ಪ್ರಯತ್ನ ಕೈಗೂಡಿದೆ.
ಟಿ20 ವಿಶ್ವಕಪ್ ಟೂರ್ನಿ ಬಳಿಕ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಇತ್ತ ರವಿ ಶಾಸ್ತ್ರಿ ಅವಧಿಯೂ ಅಂತ್ಯಗೊಳ್ಳಲಿದೆ. ಹೀಗಾಗಿ ಟೀಂ ಇಂಡಿಯಾವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಸಮರ್ಥ ಕೋಚ್ ಅವಶ್ಯಕತೆ ಇದೆ. ಹೀಗಾಗಿ ರಾಹುಲ್ ದ್ರಾವಿಡ್ ಸೂಕ್ತ ಅನ್ನೋದು ಹಲವರ ಅಭಿಮತ.
Team India ಕೋಚ್ ಆಗಲು ಅನಿಲ್ ಕುಂಬ್ಳೆ ನಿರಾಸಕ್ತಿ..!
ಕ್ರಿಕೆಟ್ ಸಲಹಾ ಸಮಿತಿ ಟೀಂ ಇಂಡಿಯಾ ಕೋಚ್ ಆಯ್ಕೆ ಮಾಡಲಿದೆ. ರಾಹುಲ್ ದ್ರಾವಿಡ್ ಕಣದಲ್ಲಿದ್ದರೆ, ಆಯ್ಕೆ ಸಮಿತಿಗೆ ಹೆಚ್ಚಿನ ಸಮಸ್ಯೆ ಇಲ್ಲ. ನೇರವಾಗಿ ದ್ರಾವಿಡ್ ಆಯ್ಕೆ ಮಾಡಲಿದೆ. ಇತ್ತ ಬಿಸಿಸಿಐ ಕೂಡ ದ್ರಾವಿಡ್ ಕೋಚ್ ಸ್ಥಾನದಲ್ಲಿ ನೋಡಲು ಬಯಸುತ್ತಿದೆ.