Team India ಕೋಚ್ ಆಗಲು ಅನಿಲ್‌ ಕುಂಬ್ಳೆ ನಿರಾಸಕ್ತಿ..!

* ಮತ್ತೊಮ್ಮೆ ಟೀಂ ಇಂಡಿಯಾ ಕೋಚ್‌ ಹುದ್ದೆಗೇರಲು ಕುಂಬ್ಳೆ ನಕಾರ

* ಈ ಮೊದಲು ಟೀಂ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕುಂಬ್ಳೆ

* ಟಿ20 ವಿಶ್ವಕಪ್‌ ಬಳಿಕ ಭಾರತ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ರವಿಶಾಸ್ತ್ರಿ

Anil Kumble not keen on coaching Team India again Says Report kvn

ನವದೆಹಲಿ(ಸೆ.30): ರವಿಶಾಸ್ತ್ರಿ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ (Indian Cricket Team) ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲು ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ (Anil Kumble) ಆಸಕ್ತಿ ಹೊಂದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಲವು ವರ್ಷಗಳ ಬಳಿಕ ವಿದೇಶಿ ಕೋಚ್‌ರನ್ನು ನೇಮಿಸಲು ಬಿಸಿಸಿಐ (BCCI) ಎದುರು ನೋಡುತ್ತಿದೆ ಎಂದು ತಿಳಿದುಬಂದಿದೆ.

ಮುಂಬರುವ ಟಿ20 ವಿಶ್ವಕಪ್‌ (T20 World Cup) ಬಳಿಕ ರವಿ ಶಾಸ್ತ್ರಿ (Ravi Shastri) ಕೋಚ್‌ ಸ್ಥಾನದಿಂದ ಕೆಳಗಿಳಿಯುವುದು ಖಚಿತವಾಗಿದೆ. ಈ ನಡುವೆ ಮುಂದಿನ ಕೋಚ್‌ ಆಗುವಂತೆ ಕುಂಬ್ಳೆ ಅವರನ್ನು ಬಿಸಿಸಿಐ ಕೇಳಲಿದೆ ಎನ್ನಲಾಗಿತ್ತು. ಆದರೆ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಹೊರತುಪಡಿಸಿ ಬಿಸಿಸಿಐನಲ್ಲಿ ಇನ್ಯಾರಿಗೂ ಕುಂಬ್ಳೆ ಸೂಕ್ತ ಆಯ್ಕೆ ಎನಿಸುತ್ತಿಲ್ಲ. ಇನ್ನು ವಿವಿಎಸ್‌ ಲಕ್ಷ್ಮಣ್‌ರ (VVS Laxman) ಹೆಸರು ಸಹ ಚಾಲ್ತಿಯಲ್ಲಿದ್ದು, ಅವರ ನೇಮಕವೂ ಕಷ್ಟ. ವಿದೇಶಿ ಕೋಚ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

IPL 2021 RCB ತಂಡದ ಪರ ಅಪರೂಪದ ದಾಖಲೆ ಬರೆದ ಹರ್ಷಲ್‌ ಪಟೇಲ್..!

ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದ ಗ್ಯಾರಿ ಕರ್ಸ್ಟನ್‌ ಬಳಿಕ  2011ರಿಂದ 2015ರ ವರೆಗೂ ಜಿಂಬಾಬ್ವೆಯ ಡಂಕನ್‌ ಫ್ಲೆಚರ್‌ ಭಾರತ ತಂಡದ ಕೋಚ್‌ ಆಗಿದ್ದರು. ಇದಾದ ಬಳಿಕ ಭಾರತದವರೇ ಟೀಂ ಇಂಡಿಯಾ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಈ ಮೊದಲು ಅನಿಲ್ ಕುಂಬ್ಳೆ 2016 ರಿಂದ 2016ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ವರೆಗೆ ಭಾರತ ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು. ನಾಯಕ ವಿರಾಟ್ ಕೊಹ್ಲಿ ಜತೆಗಿನ ವೈಮನಸ್ಸಿನಿಂದಾಗಿ ಅನಿಲ್‌ ಕುಂಬ್ಳೆ ಟೀಂ ಇಂಡಿಯಾ ಹೆಡ್‌ ಕೋಚ್‌ ಹುದ್ದೆಯಿಂದ ಕೆಳಗಿಳಿದಿದ್ದರು. 

ಸದ್ಯ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಅದೇ ಹಳೆಯ ಆಟಗಾರರಿದ್ದು, ಅವರೊಂದಿಗೆ ಕೆಲಸ ಮಾಡಲು ಅನಿಲ್ ಕುಂಬ್ಳೆ ಆಸಕ್ತಿ ಹೊಂದಿಲ್ಲ. ಕುಂಬ್ಳೆಯವರನ್ನು ಕೋಚ್‌ ಮಾಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಆದರೆ ಬಿಸಿಸಿಐ ಇತರೆ ವರ್ಗ ಅಷ್ಟೊಂದು ಒಲವು ತೋರಿಲ್ಲ ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ ಅನಿಲ್‌ ಕುಂಬ್ಳೆ ಮಾರ್ಗದರ್ಶನದಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ತಂಡವು ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದೆ. ಸದ್ಯ ಪಂಜಾಬ್ ಕಿಂಗ್ಸ್‌ ತಂಡವು ಪ್ಲೇ ಆಫ್‌ಗೇರಲು ಪರದಾಡುತ್ತಿದೆ.
 

Latest Videos
Follow Us:
Download App:
  • android
  • ios