ರವೀಂದ್ರ ಜಡೇಜಾ 2023ರ ಜನವರಿಯಿಂದ ಮೇ ತಿಂಗಳ ವರೆಗೆ ಒಟ್ಟು 3 ಬಾರಿ ಪರೀಕ್ಷೆಒಟ್ಟಾರೆ ಭಾರತ ಪುರುಷ ಹಾಗೂ ಮಹಿಳಾ ತಂಡಗಳ ಒಟ್ಟು 55 ಕ್ರಿಕೆಟಿಗರ 58 ಮಾದರಿಯನ್ನು ಸಂಗ್ರಹಿಸಲಾಗಿತ್ತುಹರ್ಮನ್‌ಪ್ರೀತ್‌ ಕೌರ್, ಸ್ಮೃತಿ ಮಂಧನಾ ತಲಾ 1 ಬಾರಿ ಪರೀಕ್ಷೆಗೆ ಒಳಗಾಗಿದ್ದಾರೆ

ನವದೆಹಲಿ(ಆ.10): ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ ಈ ವರ್ಷ ಅತಿ ಹೆಚ್ಚು ಬಾರಿ ಡೋಪಿಂಗ್‌ ಪರೀಕ್ಷೆಗೆ ಒಳಗಾದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಬಗ್ಗೆ ಬುಧವಾರ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) ವರದಿ ಬಿಡುಗಡೆ ಮಾಡಿದೆ. ರವೀಂದ್ರ ಜಡೇಜಾ 2023ರ ಜನವರಿಯಿಂದ ಮೇ ತಿಂಗಳ ವರೆಗೆ ಒಟ್ಟು 3 ಬಾರಿ ಪರೀಕ್ಷೆಗೆ ಒಳಗಾಗಿದ್ದಾರೆ ಎಂದಿದೆ.

ಒಟ್ಟಾರೆ ಭಾರತ ಪುರುಷ ಹಾಗೂ ಮಹಿಳಾ ತಂಡಗಳ ಒಟ್ಟು 55 ಕ್ರಿಕೆಟಿಗರ 58 ಮಾದರಿಯನ್ನು ಸಂಗ್ರಹಿಸಲಾಗಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ ಅತಿ ಹೆಚ್ಚು. 2021ರಲ್ಲಿ ಕ್ರಿಕೆಟಿಗರಿಂದ ನಾಡ 54 ಸ್ಯಾಂಪಲ್‌ ಹಾಗೂ 2022ರಲ್ಲಿ ಒಟ್ಟು 60 ಸ್ಯಾಂಪಲ್‌ಗಳನ್ನು ಸಂಗ್ರಹಿಸಿತ್ತು. ಇದೇ ವೇಳೆ ಹಿರಿಯ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಯಾವುದೇ ಪರೀಕ್ಷೆಗೆ ಒಳಗಾಗಿಲ್ಲ. ರೋಹಿತ್‌ 2021, 2022ರಲ್ಲಿ ಅತಿ ಹೆಚ್ಚು ಬಾರಿ(03) ಪರೀಕ್ಷೆಗೊಳಗಾದ ಕ್ರಿಕೆಟಿಗ ಎನಿಸಿಕೊಂಡಿದ್ದರು. ಇದೇ ವೇಳೆ ಹಾರ್ದಿಕ್‌ ಪಾಂಡ್ಯ, ಹರ್ಮನ್‌ಪ್ರೀತ್‌ ಕೌರ್, ಸ್ಮೃತಿ ಮಂಧನಾ ತಲಾ 1 ಬಾರಿ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ನಾಡಾ ತಿಳಿಸಿದೆ.

ODI World Cup ಇಂಡೋ-ಪಾಕ್‌ ಮೆಗಾ ಫೈಟ್‌ ಅಕ್ಟೋಬರ್ 14ಕ್ಕೆ..! ವಿಶ್ವಕಪ್ ಟಿಕೆಟ್ ಖರೀದಿಗೂ ಡೇಟ್ ಫಿಕ್ಸ್‌

ಈ ವರ್ಷದ ಆರಂಭದ 5 ತಿಂಗಳಲ್ಲಿ ಭಾರತದ ಇಬ್ಬರು ಮಹಿಳಾ ಕ್ರಿಕೆಟಿಗರು ಮಾತ್ರ ಡೋಪಿಂಗ್‌ ಟೆಸ್ಟ್‌ಗೆ ಒಳಗಾಗಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಉಪನಾಯಕಿ ಸ್ಮೃತಿ ಮಂಧನಾ ಮಾತ್ರ ಒಮ್ಮೆ ಡೋಪಿಂಗ್‌ ಟೆಸ್ಟ್‌ಗೆ ಒಳಗಾಗಿದ್ದಾರೆ.

ಇಂಗ್ಲೆಂಡ್‌ ಒಂಡೇ ಕಪ್‌: ದ್ವಿಶತಕ ಸಿಡಿಸಿದಿ ಪೃಥ್ವಿ ಶಾ

ನಾರ್ಥಾಂಪ್ಟನ್‌: ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ ಇಂಗ್ಲೆಂಡ್‌ನ ಒಂಡೇ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಟೂರ್ನಿಯಲ್ಲಿ ನಾರ್ಥಾಂಪ್ಟನ್‌ಶೈರ್‌ ಪರ ಆಡುತ್ತಿರುವ 23 ವರ್ಷದ ಪೃಥ್ವಿ ಬುಧವಾರ ಸೋಮರ್‌ಸೆಟ್‌ ವಿರುದ್ಧ 153 ಎಸೆತಗಳಲ್ಲಿ 244 ರನ್‌ ಸಿಡಿಸಿದರು. 81 ಎಸೆತಗಳಲ್ಲಿ ಶತಕ ಪೂರೈಸಿದ ಅವರು ಬಳಿಕ ಸ್ಫೋಟಕ ಆಟಕ್ಕೆ ಒತ್ತುಕೊಟ್ಟು 129 ಎಸೆತಗಳಲ್ಲೇ 200ರ ಗಡಿ ದಾಟಿದರು.

Asia Cup 2023: ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನ ಹೆಸರು..! ಇತಿಹಾಸದಲ್ಲೇ ಮೊದಲು, ಜೆರ್ಸಿ ಫೋಟೋ ವೈರಲ್

ಅವರ ಇನ್ನಿಂಗ್ಸ್‌ನಲ್ಲಿ 24 ಬೌಂಡರಿ, 8 ಸಿಕ್ಸರ್‌ ಕೂಡಾ ಒಳಗೊಂಡಿವೆ. ಅವರ ಭರ್ಜರಿ ಆಟದಿಂದಾಗಿ ನಾರ್ಥಾಂಪ್ಟನ್‌ಶೈರ್‌ 8 ವಿಕೆಟ್‌ಗೆ 415 ರನ್‌ ಕಲೆ ಹಾಕಿತು. ಇದು ಪೃಥ್ವಿ ಲಿಸ್ಟ್‌ ‘ಎ’ ಕ್ರಿಕೆಟ್‌ನಲ್ಲಿ ಬಾರಿಸಿದ 2ನೇ ದ್ವಿಶತಕ. ಈ ಮೊದಲು ಮುಂಬೈ ಕ್ರಿಕೆಟಿಗ ಪೃಥ್ವಿ ವಿಜಯ್‌ ಹಜಾರೆ ಕ್ರಿಕೆಟ್‌ನಲ್ಲಿ ಪುದುಚೇರಿ ವಿರುದ್ಧ 227 ರನ್‌ ಗಳಿಸಿದ್ದರು.

ಏಕದಿನ ರ‍್ಯಾಂಕಿಂಗ್‌: 5ನೇ ಸ್ಥಾನಕ್ಕೆ ಜಿಗಿದ ಶುಭ್‌ಮನ್

ನವದೆಹಲಿ: ಭಾರತದ ತಾರಾ ಬ್ಯಾಟರ್‌ ಶುಭ್‌ಮನ್‌ ಗಿಲ್‌ ಐಸಿಸಿ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ 2 ಸ್ಥಾನ ಮೇಲಕ್ಕೇರಿದ್ದು, 743 ಅಂಕಗಳನ್ನು ಸಂಪಾದಿಸಿದ್ದಾರೆ. ಗಿಲ್‌ ಜೊತೆ ವಿರಾಟ್‌ ಕೊಹ್ಲಿ ಕೂಡಾ ಅಗ್ರ-10ರಲ್ಲಿದ್ದು, 9ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಮೊಹಮದ್‌ ಸಿರಾಜ್‌ 4, ಕುಲ್ದೀಪ್‌ ಯಾದವ್‌ 10ನೇ ಸ್ಥಾನದಲ್ಲಿದ್ದಾರೆ. 

ಇದೇ ವೇಳೆ ವಿಂಡೀಸ್‌ ಸರಣಿಯಲ್ಲಿ ಅಭೂತಪೂರ್ವ ಪ್ರದರ್ಶನ ತೋರುತ್ತಿರುವ ಯುವ ಬ್ಯಾಟರ್‌ ತಿಲಕ್‌ ವರ್ಮಾ 21 ಸ್ಥಾನ ಮೇಲೆರಿ 46ನೇ ಸ್ಥಾನ ತಲುಪಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ರೋಹಿತ್‌ ಶರ್ಮಾ ಅಗ್ರ-10ರಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದು, 10ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಆರ್‌.ಅಶ್ವಿನ್‌, ಆಲ್ರೌಂಡರ್‌ ಪಟ್ಟಿಯಲ್ಲಿ ಜಡೇಜಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.