ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 14ಕ್ಕೆ ನಿಗದಿಆಗಸ್ಟ್ 25ರಿಂದ ಟಿಕೆಟ್ ಮಾರಾಟ ಆರಂಭ

ನವದಹಲಿ(ಆ.10): ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಐಸಿಸಿ ಏಕದಿನ ವಿಶ್ವಕಪ್‌ನ ಬಹುನಿರೀಕ್ಷಿತ ಪಂದ್ಯ ಅ.14ರಂದು ಅಹಮದಾಬಾದ್‌ನಲ್ಲೇ ನಡೆಯುವುದು ಖಚಿತವಾಗಿದೆ. ಬುಧವಾರ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, ಭಾರತದ 2 ಪಂದ್ಯ ಸೇರಿ ಒಟ್ಟು 9 ಪಂದ್ಯಗಳ ದಿನಾಂಕ ಬದಲಾಗಿದೆ.

ಈ ಮೊದಲು ಭಾರತ-ಪಾಕ್‌ ಪಂದ್ಯ ಅಕ್ಟೋಬರ್ 15ಕ್ಕೆ ನಿಗದಿಯಾಗಿತ್ತು. ಆದರೆ ನವರಾತ್ರಿ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಪಂದ್ಯದ ದಿನಾಂಕ ಬದಲಾವಣೆ ಮಾಡಲಾಗಿದೆ. ಇನ್ನು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ.12ರಂದು ನಿಗದಿಯಾಗಿದ್ದ ಭಾರತ ಹಾಗೂ ನೆದರ್‌ಲೆಂಡ್ಸ್‌ ನಡುವಿನ ಪಂದ್ಯದ ದಿನಾಂಕವೂ ಬದಲಾವಣೆಗೊಂಡಿದ್ದು, ಒಂದು ದಿನ ಮುಂಚಿತವಾಗಿ ಅಂದರೆ ನ.11ಕ್ಕೆ ನಡೆಯಲಿರುವುದಾಗಿ ಐಸಿಸಿ ಘೋಷಿಸಿದೆ.

Asia Cup 2023: ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನ ಹೆಸರು..! ಇತಿಹಾಸದಲ್ಲೇ ಮೊದಲು, ಜೆರ್ಸಿ ಫೋಟೋ ವೈರಲ್

ಪಾಕ್‌ನ 3 ಪಂದ್ಯ ಮರುನಿಗದಿ: ಇದೇ ವೇಳೆ ಪಾಕ್‌ನ 3 ಪಂದ್ಯಗಳ ದಿನಾಂಕ ಬದಲಾವಣೆ ಮಾಡಲಾಗಿದೆ. ಲಂಕಾ ವಿರುದ್ಧದ ಪಂದ್ಯ ಹೈದರಾಬಾದ್‌ನಲ್ಲಿ ಅ.11ರ ಬದಲು ಅ.10ಕ್ಕೆ, ಇಂಗ್ಲೆಂಡ್‌ ಎದುರಿನ ಪಂದ್ಯ ನ.12ರ ಬದಲು ನ.11ಕ್ಕೆ ನಡೆಯಲಿದೆ. ಇದೇ ವೇಳೆ ಇಂಗ್ಲೆಂಡ್‌ನ 3, ಬಾಂಗ್ಲಾದ 3, ಆಸೀಸ್‌ನ 2 ಪಂದ್ಯಗಳೂ ಮರು ನಿಗದಿಯಾಗಿದೆ.

Scroll to load tweet…

ಪರಿಷ್ಕೃತ ಪಂದ್ಯಗಳ ಪಟ್ಟಿ

ದಿನಾಂಕ ಪಂದ್ಯ ಸ್ಥಳ ಸಮಯ

ಅ.10 ಇಂಗ್ಲೆಂಡ್‌-ಬಾಂಗ್ಲಾ ಧರ್ಮಶಾಲಾ ಬೆ. 10.30

ಅ.10 ಪಾಕ್‌-ಲಂಕಾ ಹೈದ್ರಾಬಾದ್‌ ಮ. 2.00

ಅ.12 ಆಸೀಸ್‌-ದ.ಆಫ್ರಿಕಾ ಲಖನೌ ಮ. 2.00

ಅ.13 ಕಿವೀಸ್‌-ಬಾಂಗ್ಲಾ ಚೆನ್ನೈ ಮ. 2.00

ಅ.14 ಭಾರತ-ಪಾಕ್‌ ಅಹ್ಮದಾಬಾದ್‌ ಮ. 2.00

ಅ.15 ಇಂಗ್ಲೆಂಡ್‌-ಆಫ್ಘನ್‌ ಡೆಲ್ಲಿ ಮ. 2.00

ನ.11 ಆಸೀಸ್‌-ಬಾಂಗ್ಲಾ ಪುಣೆ ಬೆ. 10.30

ನ.11 ಇಂಗ್ಲೆಂಡ್‌-ಬಾಂಗ್ಲಾ ಕೋಲ್ಕತಾ ಮ. 2.30

ನ.12 ಭಾರತ-ನೆದರ್‌ಲೆಂಡ್ಸ್‌ ಬೆಂಗಳೂರು ಮ. 2.30

ಆಗಸ್ಟ್‌ 25ರಿಂದ ಟಿಕೆಟ್ ಸೇಲ್‌

ಟೂರ್ನಿಯ ಪಂದ್ಯಗಳ ಟಿಕೆಟ್‌ಗಳನ್ನು ಆ.25ರಿಂದ ಮಾರಾಟಕ್ಕೆ ಇಡಲಾಗುವುದು ಎಂದು ಐಸಿಸಿ ತಿಳಿಸಿದೆ. ಆ.15ರಿಂದಲೇ ಐಸಿಸಿ ವೆಬ್‌ಸೈಟ್‌ನಲ್ಲೇ ನೋಂದಣಿ ಆರಂಭಗೊಳ್ಳಲಿದೆ. ಹೀಗೆ ನೋಂದಾಯಿಸಿದವರಿಗೆ ಬೇಗನೇ ಟಿಕೆಟ್ ಮಾಹಿತಿ ಸಿಗಲಿದೆ. ಆ.25ರಿಂದ ಭಾರತ ಹೊರತುಪಡಿಸಿ ಇತರ ಅಭ್ಯಾಸ ಪಂದ್ಯಗಳ, ಆ.30ರಿಂದ ಭಾರತದ ಅಭ್ಯಾಸ ಪಂದ್ಯಗಳ ಟಿಕೆಟ್‌ ಮಾರಾಟಕ್ಕೆ ಲಭ್ಯವಿದೆ. ಭಾರತದ ಚೆನ್ನೈ, ಪುಣೆ, ಡೆಲ್ಲಿ ಪಂದ್ಯಗಳ ಟಿಕೆಟ್‌ ಆ.31ರಿಂದ, ಧರ್ಮಶಾಲಾ, ಲಖನೌ, ಮುಂಬೈ ಪಂದ್ಯಗಳ ಟಿಕೆಟ್‌ ಸೆ.1ರಿಂದ, ಬೆಂಗಳೂರು ಹಾಗೂ ಕೋಲ್ಕತಾ ಪಂದ್ಯಗಳ ಟಿಕೆಟ್‌ ಸೆ.2ರಿಂದ, ಪಾಕ್‌ ವಿರುದ್ಧದ ಆಹಮದಾಬಾದ್‌ ಪಂದ್ಯದ ಟಿಕೆಟ್‌ ಸೆ.3ರಿಂದ ಹಾಗೂ ಸೆಮಿಫೈನಲ್‌, ಫೈನಲ್‌ ಪಂದ್ಯದ ಟಿಕೆಟ್‌ ಸೆ.15ರಿಂದ ಪ್ರಾರಂಭಿಸುವುದಾಗಿ ತಿಳಿಸಿದೆ.

ಋತುರಾಜ್‌ ಗಾಯಕ್ವಾಡ್‌ ಮದುವೆಯಾಗಿದ್ದರಿಂದ ಕ್ರಿಕೆಟ್ ಬದುಕು ಹಾಳಾಗುತ್ತಾ..? ಉತ್ಕರ್ಷ ಪವಾರ್ ಹೇಳಿದ್ದೇನು?

ಹೋಟೆಲ್‌ ಬುಕ್‌ ಮಾಡಿದ್ದ ಅಭಿಮಾನಿಗಳಿಗೆ ಸಂಕಷ್ಟ!

ಈ ಮೊದಲು ಭಾರತ-ಪಾಕ್‌ ಪಂದ್ಯ ಅ.15ರಂದು ನಡೆಯಲಿದೆ ಎಂದು ಗೊತ್ತಾದಾಗ ಸಾವಿರಾರು ಪಂದ್ಯ ವಿಮಾನ ಟಿಕೆಟ್‌, ಅಹ್ಮದಾಬಾದ್‌ನಲ್ಲಿ ದುಬಾರಿ ಬೆಲೆಯ ಹೋಟೆಲ್‌ಗಳನ್ನು ಬುಕ್‌ ಮಾಡಿದ್ದರು. ಆದರೆ ಸದ್ಯ ಪಂದ್ಯ 1 ದಿನ ಮೊದಲೇ ನಡೆಯಲಿರುವ ಕಾರಣ ಅಭಿಮಾನಿಗಳಿಗೆ ಸಂಕಷ್ಟ ಎದುರಾಗಿದ್ದು, ಟಿಕೆಟ್‌ ಕ್ಯಾನ್ಸಲ್‌ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.