Asianet Suvarna News Asianet Suvarna News

Covid-19 vaccine:ಲಸಿಕೆ ಪಡೆಯಲು ನಕಾರ, ಮುರಳಿ ವಿಜಯ್ ಕೈಬಿಟ್ಟ ಆಯ್ಕೆ ಸಮಿತಿ!

  • ಕೋವಿಡ್ ಲಸಿಕೆ ಪಡೆಯಲು ಟೆಸ್ಟ್ ಬ್ಯಾಟ್ಸ್‌ಮನ್ ಮುರಳಿ ವಿಜಯ್ ನಕಾರ
  • ಲಸಿಕೆ ಪಡೆಯದ ಕಾರಣ ಟೂರ್ನಿಗೆ ಪ್ರವೇಶ ನಿರಾಕರಣೆ
  • ತಂಡದ ಆಯ್ಕೆಯಿಂದ ಮುರಳಿ ವಿಜಯ್ ಕೈಬಿಟ್ಟ ಆಯ್ಕೆ ಸಮಿತಿ
Murali Vijay forced to stay away from cricket due to unwillingness to take Covid19 vaccine ckm
Author
Bengaluru, First Published Nov 13, 2021, 10:44 PM IST
  • Facebook
  • Twitter
  • Whatsapp

ಚೆನ್ನೈ(ನ.13): ಟೀಂ ಇಂಡಿಯಾ ಟೆಸ್ಟ್ ಬ್ಯಾಟ್ಸ್‌ಮನ್ ಮುರಳಿ ವಿಜಯ್(Murali Vijay) ಸದ್ಯ ಎಲ್ಲಾ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಕ್ರಿಕೆಟಿಗರು ಒಂದು ಅವಕಾಶಕ್ಕೆ ಕಾಯುತ್ತಿದ್ದಾರೆ. ಆದರೆ ಮುರಳಿ ವಿಜಯ್ ಅನಿವಾರ್ಯವಾಗಿ ಎಲ್ಲಾ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. ಇದಕ್ಕೆ ಕಾರಣ ಕೋವಿಡ್ ಲಸಿಕೆ(Covid19 Vaccine). ಹೌದು, ಮರುಳಿ ವಿಜಯ್ ಇದುವರೆಗೂ ಕೊರೋನಾ ಲಸಿಕೆ ಪಡೆದುಕೊಂಡಿಲ್ಲ. ಲಸಿಕೆ ಪಡೆಯಲು ಹಿಂಜರಿಯುತ್ತಿರುವ ಮರುಳಿ ವಿಜಯ್‌ಗೆ ಆಯ್ಕೆ ಸಮಿತಿ(Team Selection) ಕೂಡ ಶಾಕ್ ನೀಡಿದೆ.

ಕೊರೋನಾ ವೈರಸ್(Coronavirus) ಕಾರಣ ಆಟಗಾರರಿಗೆ ಬಯೋಬಬಲ್ ಕಡ್ಡಾಯವಾಗಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರು ಎರಡೂ ಲಸಿಕೆ ಹಾಕಿಸಿರಬೇಕು.  ಆದರೆ ಕೋವಿಡ್ ಲಸಿಕೆ ಹಾಕಲು ಮುರಳಿ ವಿಜಯ್ ಹಿಂದೇಟು ಹಾಕುತ್ತಿದ್ದಾರೆ. ಇದವರೆಗೂ ಒಂದು ಡೋಸ್(Dose) ಕೂಡ ತೆಗೆದುಕೊಂಡಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಮಾತ್ರವಲ್ಲ, ದೇಶಿ ಟೂರ್ನಿಗಳಿಂದಲೂ ಹೊರಗುಳಿಯಬೇಕಾಗಿದೆ.

ಸಯ್ಯದ್ ಮುಷ್ತಾಕ್ ಆಲಿ ಟೂರ್ನಿಗೆ ತಮಿಳುನಾಡು(Tamil Nadu) ತಂಡದಲ್ಲಿ ಮುರಳಿ ವಿಜಯ್ ಇರಬೇಕಿತ್ತು. ಆದರೆ ಒಂದು ಡೋಸ್ ತೆಗೆಯದ ಮುರಳಿ ವಿಜಯ್‌ನ್ನು ಆಯ್ಕೆ ಸಮಿತಿ ಪರಿಗಣಿಸಿಲ್ಲ.  ದೇಸಿ ಟೂರ್ನಿಯಲ್ಲಿ ಸಾಮರ್ಥ್ಯ ಸಾಬೀತು ಪಡಿಸಲು ಲಸಿಕೆ ಅಡ್ಡಿಯಾಗುತ್ತಿರುವ ಕಾರಣ ಮುರಳಿ ವಿಜಯ್ ಟೀಂ ಇಂಡಿಯಾ(Team India) ಆಯ್ಕೆ ಕೂಡ ದೂರದ ಮಾತಾಗಿದೆ.

ಈ ಭಾರತೀಯ ಕ್ರಿಕೆಟಿಗರು ಹೈಲೀ ಕ್ವಾಲಿಫೈಡ್‌!

ಲಸಿಕೆ ಮಾತ್ರವಲ್ಲ ಬಯೋಬಬಲ್‌ನಲ್ಲಿ ಇರಲು ಮುರಳಿ ವಿಜಯ್ ಇಷ್ಟಪಡುತ್ತಿಲ್ಲ. ಹೀಗಾಗಿ ಮುರಳಿ ವಿಜಯ್ ಕ್ರಿಕೆಟ್ ಕರಿಯರ್ ಇಲ್ಲಿಗೆ ಅಂತ್ಯವಾದಂತೆ ಕಾಣುತ್ತಿದೆ. ಕಾರಣ, ಎರಡು ಡೋಸ್ ಹಾಗೂ ಬಯೋಬಬಲ್ ಕ್ರಿಕೆಟಿಗರಿಗೆ ಕಡ್ಡಾಯವಾಗಿದೆ. ಕೊರೋನಾ ಸಂಪೂರ್ಣ ಮಯಾವಾದರೆ ಬಯೋಬಬಲ್ ನಿಯಮವನ್ನು ಬಿಸಿಸಿಐ ಹಾಗೂ ಇತರ ರಾಷ್ಟ್ರಗಳು ತೆಗೆದು ಹಾಕಬಹುದು. ಆದರೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿದೆ. ಹೀಗಾಗಿ ಮುರಳಿ ವಿಜಯ್ ದೇಶಿ ಕ್ರಿಕೆಟ್ ಆಡಲು ಅನುಮತಿ ಇಲ್ಲ. 

ಕೊರೋನಾ ವಕ್ಕರಿಸಿದ ಬಳಿಕ ಮುರಳಿ ವಿಜಯ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಸುದೀರ್ಘ ದಿನಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವ ಕಾರಣ ಎರಡು ಡೋಸ್ ಪೂರ್ಣಗೊಳಿಸಿ ಆಯ್ಕೆಗೆ ಲಭ್ಯವಾದರೂ ಮೊದಲು ಫಿಟ್ನೆಸ್ ಸಾಬೀತುಪಡಿಸಬೇಕಿದೆ. ಬಳಿಕ ದೇಶಿ ಟೂರ್ನಿಯಲ್ಲಿ ಮಿಂಚಿ, ಟೀಂ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆಗಳಿವೆ. ಆದರೆ ಲಸಿಕೆ ಪಡೆಯಲು ಸುತಾರಾಂ ಒಪ್ಪದ ಮುರಳಿ ವಿಜಯ್ ಕರಿಯರ್ ಬಹುತೇಕ ಅಂತ್ಯಗೊಂಡಿದೆ.

ಕರುಣ್ ಆಯ್ತು ಈಗ ವಿಜಯ್ ಸರದಿ: ಬಿಸಿಸಿಐನಲ್ಲಿ ಏನ್ ನಡೀತಿದೆ..?

37 ವರ್ಷದ ಮುರಳಿ ವಿಜಯ್ ಕೊನೆಯ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಂಡಿರುವುದು 2020ರ ಐಪಿಎಲ್ ಟೂರ್ನಿಯಲ್ಲಿ. ಚೆನ್ನೈ ಸೂಪರ್ ಪರ್ ಆಡಿದ್ದ ಮುರಳಿ ವಿಜಯ್ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. 2020ರಲ್ಲಿ ರಣಜಿ ಟೂರ್ನಿಯಲ್ಲಿ ತಮಿಳುನಾಡು ಪರ ಆಡಿದ್ದರು. ಇದಾದ ಬಳಿಕ ಕೊರೋನಾ ವಕ್ಕರಿಸಿ ಎಲ್ಲಾ ಟೂರ್ನಿಗಳು ಸ್ಥಗಿತಗೊಂಡಿತ್ತು. ಇದೀಗ ಟೂರ್ನಿ ಆರಂಭಗೊಂಡಲು ಲಸಿಕೆ ಕಾರಣದಿಂದ ಮುರಳಿ ವಿಜಯ್ ಮನೆಯಲ್ಲಿ ಇರಬೇಕಾಗಿದೆ.

ಟೀಂ ಇಂಡಿಯಾ ಪರ 61 ಟೆಸ್ಟ್ ಪಂದ್ಯ ಆಡಿರುವ ಮುರಳಿ ವಿಜಯ್ 3,982 ರನ್ ಕಲೆಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 12 ಶತಕ ಹಾಗೂ 15 ಅರ್ಧಶತಕ ಸಿಡಿಸಿದ್ದಾರೆ. 167 ವಿಜಯ್ ಬೆಸ್ಟ್ ಸ್ಕೋರ್. ಏಕದಿನದಲ್ಲಿ 17 ಪಂದ್ಯದಿಂದ 339 ರನ್ ಸಿಡಿಸಿದ್ದಾರೆ. ಇನ್ನು 9 ಟಿ20 ಪಂದ್ಯದಿಂದ 169 ರನ್ ಸಿಡಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 106 ಪಂದ್ಯಗಳಿಂದ 2,619 ರನ್ ಸಿಡಿಸಿದ್ದಾರೆ. 2 ಸೆಂಚುರಿಯನ್ನು ಭಾರಿಸಿದ್ದಾರೆ. 13 ಹಾಫ್ ಸೆಂಚುರಿ ಸಿಡಿಸಿದ್ದಾರೆ.

2008ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಮೂಲಕ ಮುರಳಿ ವಿಜಯ್ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಟೀಂ ಇಂಡಿಯಾ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು 2018ರಲ್ಲಿ. ಮರುಳಿ ವಿಜಯ್ ಟೀಂ ಇಂಡಿಯಾ ಜರ್ಸಿ ಹಾಕಿ 3 ವರ್ಷಗಳೇ ಉರುಳಿದೆ.

Follow Us:
Download App:
  • android
  • ios