ಚೆನ್ನೈ[ಅ.05]: ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕರುಣ್ ನಾಯರ್ ಅಸಮಾಧಾನ ತೋರಿದ ಬೆನ್ನಲ್ಲೇ ಭಾರತ ತಂಡದ ಮತ್ತೊಬ್ಬ ಕ್ರಿಕೆಟಿಗ ಮುರಳಿ ವಿಜಯ್ ಸಹ ಆಯ್ಕೆ ಸಮಿತಿ ತಮ್ಮ ಜತೆ ಸರಿಯಾದ ಸಂವಹನ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. 

ಇಂಗ್ಲೆಂಡ್ ವಿರುದ್ಧ ಸರಣಿಯ ಕೊನೆ 2 ಟೆಸ್ಟ್‌ಗಳಿಗೆ ವಿಜಯ್‌ರನ್ನು ಕೈಬಿಡಲಾಗಿತ್ತು. ಈ ಸಂಬಂಧ ಬುಧವಾರ ವಿಜಯ್ ಹಜಾರೆ ಪಂದ್ಯದ ವೇಳೆ ಮಾತನಾಡಿದ ವಿಜಯ್, ‘ನನ್ನನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಆಯ್ಕೆಗಾರರು ಸೂಕ್ತ ಕಾರಣಗಳನ್ನು ನೀಡಿಲ್ಲ. ತಂಡದಿಂದ ಕೈಬಿಟ್ಟ ಬಳಿಕ ಈವರೆಗೂ ಯಾರೂ ನನ್ನನ್ನು ಸಂಪರ್ಕಿಸಿಲ್ಲ’ ಎಂದಿದ್ದಾರೆ. 

ಇದನ್ನು ಓದಿ: ಕರುಣ್ ನಾಯರ್‌ಗೆ ಕೊಕ್-ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

ವಿಜಯ್ ಹೇಳಿಕೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಅಚ್ಚರಿ ವ್ಯಕ್ತಪಡಿಸಿದ್ದು, ‘ಈ ಆರೋಪಗಳೆಲ್ಲಾ ಸುಳ್ಳು’ ಎಂದಿದ್ದಾರೆ. ವಿಜಯ್ ಆರೋಪಕ್ಕೆ ಬಿಸಿಸಿಐ ಅಧಿಕಾರಿಗಳು ಸಹ ಬೇಸರ ವ್ಯಕ್ತಪಡಿಸಿದ್ದಾರೆ.