MSL 2019: ಐಪಿಎಲ್‌ಗೂ ಮುನ್ನ ಎಬಿಡಿ ಭರ್ಜರಿ ಫಾರ್ಮ್; 360 ಡಿಗ್ರಿ ಪರ್ಫಾಮೆನ್ಸ್!
MSL ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ 360 ಡಿಗ್ರಿ ಪ್ರದರ್ಶನ ನೀಡಿದ್ದಾರೆ. ಎಬಿಡಿ ಬ್ಯಾಟಿಂಗ್ ಶೈಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೋಹಾನ್ಸ್‌ಬರ್ಗ್(ಡಿ.06): ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಚುರುಕುಗೊಂಡಿದೆ. ಡಿಸೆಂಬರ್ 19 ರಂದು ಕೋಲ್ಕತಾದಲ್ಲಿ ನಡೆಯಲಿರುವ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸಲು ಫ್ರಾಂಚೈಸಿ ಮುಂದಾಗಿದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಇಂಜುರಿ ಸಮಸ್ಯೆ ಹಾಗೂ ಫಾರ್ಮ್ ಸಮಸ್ಸೆಯಿಂದ ಬಳಲಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್, ಇದೀಗ ಫಾರ್ಮ್‌ಗೆ ಮರಳಿದ್ದಾರೆ.
ಇದನ್ನೂ ಓದಿ: ಎಬಿಡಿ ನಿವೃತ್ತಿ ವಾಪಾಸ್ ವಿಚಾರ: ಕೊನೆಗೂ ಮೌನ ಮುರಿದ ಮಿ.360
ಸೌತ್ ಆಫ್ರಿಕಾದ ಎಂಎಸ್ಎಲ್ ಲೀಗ್ ಟೂರ್ನಿ ಆಡುತ್ತಿರುವ ಎಬಿ ಡಿವಿಲಿಯರ್ಸ್ ಶ್ವಾನೆ ಸ್ಪಾರ್ಟನ್ ತಂಡದ ಪರ ಆಡುತ್ತಿದ್ದಾರೆ. ನೆಲ್ಸನ್ ಮಂಡೇಲಾ ಬೇ ಗೈಂಟ್ಸ್ ತಂಡದ ವಿರುದ್ದ ಡಿವಿಲಿರ್ಸ್, 360 ಡಿಗ್ರಿ ಪ್ರದರ್ಸನ ನೀಡಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿ ಪ್ರದರ್ಶನವನ್ನು ನೆನಪಿಸಿದ್ದಾರೆ.
ಇದನ್ನೂ ಓದಿ: ಟಿ20 ಲೀಗ್; ಹೊಸ ತಂಡ ಸೇರಿಕೊಂಡ ಎಬಿ ಡಿವಿಲಿಯರ್ಸ್!
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಬಿ ಡಿವಿಲಿಯರ್ಸ್ 38 ಎಸೆತದಲ್ಲಿ 63 ರನ್ ಸಿಡಿಸಿದರು. 360 ಡಿಗ್ರಿ ಪ್ರದರ್ಶನದ ಮೂಲಕ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ. ಡಿವಿಲಿಯರ್ಸ್ ಅಬ್ಬರಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಬೆನ್ ಡಂಕ್ 54 ಎಸೆತದಲ್ಲಿ 99 ರನ್ ಸಿಡಿಸೋ ಮೂಲಕ ಎಬಿಡಿ ತಂಡ 6 ವಿಕೆಟ್ ಸೋಲು ಕಂಡಿತು.