ಹ್ಯಾಮಿಲ್ಟನ್(ಫೆ.03:) ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಯುವ ಕ್ರಿಕೆಟಿಗರಿಗೆ ರೋಲ್ ಮಾಡೆಲ್. ಧೋನಿ ನಾಯಕತ್ವದಲ್ಲಿ ಹಲವು ಕ್ರಿಕೆಟಿಗರು ಕರಿಯರ್ ರೂಪಿಸಿಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾದಲ್ಲಿ ಅವಕಾಶಗಿಟ್ಟಿಸಿಕೊಂಡ ರೋಹಿತ್ ಶರ್ಮಾ, ಕೊಹ್ಲಿ ನಾಯಕತ್ವದಲ್ಲಿ  ಸ್ಟಾರ್ ಆಟಗಾರನಾಗಿ ಬೆಳೆದಿದ್ದಾರೆ.

ಇದನ್ನೂ ಓದಿ: ಧೋನಿ ಸಾಟಿ ಇಲ್ಲದ ಬೆಂಝ್, ಪಾಂಡೆ ಅದೇ ಕಾರಿನ ಆಲ್ಟೋ ವರ್ಶನ್

ಧೋನಿ ಹಾಗೂ ಕೊಹ್ಲಿ ಇಬ್ಬರ ನಾಯಕತ್ವದಲ್ಲಿ ಆಡಿರುವ ರೋಹಿತ್ ಶರ್ಮಾ ಇದೀಗ ಬೆಸ್ಟ್ ನಾಯಕ ಯಾರು ಅನ್ನೋದನ್ನು ಹೆಸರಿಸಿದ್ದಾರೆ. ಎಂ.ಎಸ್.ಧೋನಿ ಭಾರತ ಕಂಡ  ಅತ್ಯಂತ ಶ್ರೇಷ್ಠ ಹಾಗೂ ಅತ್ಯುತ್ತಮ ನಾಯಕ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. 

ಇದನ್ನೂ ಓದಿ: ICC ಟಿ20 ರ‍್ಯಾಂಕಿಂಗ್ ಪ್ರಕಟ; ಕರಿಯರ್ ಬೆಸ್ಟ್ ಸ್ಥಾನ ಪಡೆದ ರಾಹುಲ್

ಇತರ ಎಲ್ಲಾ ನಾಯಕರಿಂದ ಧೋನಿ ಭಿನ್ನ. ಯಾವುದೇ ಪರಿಸ್ಥಿತಿಯಲ್ಲಿ ಧೋನಿ ತಾಳ್ಮೆ ಕಳೆದುಕೊಳ್ಳದೆ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಂದ್ಯವನ್ನು ಅರ್ಥಮಾಡಿಕೊಳ್ಳ ವಿಶೇಷ ಸಾಮರ್ಥ್ಯ ಧೋನಿಗಿದೆ. ನಾಯಕನಾಗಿ, ವಿಕೆಟ್ ಕೀಪರ್ ಆಗಿ, ಬ್ಯಾಟ್ಸ್‌ಮನ್ ಆಗಿ, ಫಿನೀಶರ್ ಆಗಿ ಯಶಸ್ಸುಗಳಿಸಿದ್ದಾರೆ ಎಂದು ಧೋನಿ ಹೇಳಿದ್ದಾರೆ.

ಧೋನಿ ನಾಯಕತ್ವದಡಿಯಲ್ಲಿ ಹಲವು ಯುವ ಕ್ರಿಕೆಟಿಗರು ಅವಕಾಶ ಪಡೆದಿದ್ದಾರೆ. ಕಳಪೆ ಫಾರ್ಮ್, ಒತ್ತಡದ ಸಂದರ್ಭದಲ್ಲಿ ಧೋನಿ ಮಾತುಗಳು ಹೊಸ ಹುರುಪು ಹಾಗೂ ಆತ್ಮವಿಶ್ವಾಸ ತುಂಬುತ್ತದೆ ಎಂದು ರೋಹಿತ್ ಹೇಳಿದ್ದಾರೆ. ಧೋನಿಗೆ ಸರಿಸಾಟಿಯಾಗಬಲ್ಲ ನಾಯಕನಿಲ್ಲ ಎಂದಿದ್ದಾರೆ.