ಮೌಂಟ್ ಮೌಂಗನುಯಿ(ಫೆ.03): ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ ಇದೀಗ ಏಕದಿನ ಸರಣಿಯತ್ತ ಚಿತ್ತ ಹರಿಸಿದೆ. ಏಕದಿನ ಸರಣಿಯಲ್ಲಿ ಭಾರತದ ಪರ ಮನೀಶ್ ಪಾಂಡೆ ಉತ್ತಮ ಪ್ರದರ್ಶನ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇಷ್ಟೇ ಅಲ್ಲ, ಎಂ.ಎಸ್.ಧೋನಿ ಬಳಿಕ ಪಂದ್ಯ ಫಿನೀಶ್ ಮಾಡಬಲ್ಲ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಧೋನಿ ರೀತಿ ಪಂದ್ಯ ಫಿನೀಶ್ ಮಾಡೋ ಸಾಮರ್ಥ್ಯ ಕನ್ನಡಿಗನಿಗಿದೆ; ಅಕ್ತರ್ ಹೇಳಿದ ಸತ್ಯ!

ಮಿಂಚಿನ ಪ್ರದರ್ಶನ ನೀಡಿ ಗಮನ ಸೆಳೆದಿರುವ ಮನೀಶ್ ಪಾಂಡೆಯನ್ನು ಎಂ.ಎಸ್.ಧೋನಿಗೆ ಹೋಲಿಸಲಾಗುತ್ತಿದೆ. ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಹೊಸ ಊದಾಹರಣೆ ಮೂಲಕ ವಿವರಿಸಿದ್ದಾರೆ. ಎಂ.ಎಸ್.ಧೋನಿ ಮರ್ಸಡೀಸ್ ಬೆಂಝ್ ಕಾರಾಗಿದ್ದಾರೆ, ಮನೀಶ್ ಪಾಂಡೆ ಬೆಂಝ್ ಕಾರಿನ ಅಲ್ಟೋ ವರ್ಶನ್ ಎಂದು ಹೇಳಿದ್ದಾರೆ. ಈ ಮೂಲಕ ಧೋನಿ ಹಾದಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ನೆರವಾದ ಕನ್ನಡಿಗರು; ಸ್ಫರ್ಧಾತ್ಮಕ ಮೊತ್ತ ಕಲೆಹಾಕಿದ ಭಾರತ.

ಧೋನಿ ಹಾಗೂ ಮನೀಶ್ ಪಾಂಡೆ ಆಡುವ ಶೈಲಿ ಒಂದೇ ರೀತಿ ಇದೆ. ಒತ್ತಡ ಪರಿಸ್ಥಿತಿಯನ್ನು ಮನೀಶ್ ಪಾಂಡೆ ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದು ಅಜಯ್ ಜಡೇಜಾ ಹೇಳಿದ್ದಾರೆ.  ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮನೀಶ್ ಪಾಂಡೆ ಆಡಿದ  4 ಇನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ.