ದುಬೈ(ಫೆ.03): 2020ನೇ ವರ್ಷವನ್ನು ಗೆಲುವಿನೊಂದಿಗೆ ಆರಂಭಿಸಿದ ಟೀಂ ಇಂಡಿಯಾ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದೆ. ಕಿವೀಸ್ ವಿರುದ್ಧ 5-0 ಅಂತರದಲ್ಲಿ ಟಿ20 ಸರಣಿ ಗೆದ್ದುಕೊಂಡು ಇತಿಹಾಸ ರಚಿಸಿದೆ. ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ.

ಇದನ್ನೂ ಓದಿ: ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ ಕನ್ನಡಿಗ ರಾಹುಲ್ ಬರೆದ ಅಪರೂಪದ ದಾಖಲೆಗಳಿವು

ಕಿವೀಸ್ ವಿರುದ್ಧದ 5 ಟಿ20 ಪಂದ್ಯದ ಸರಣಿಯಲ್ಲಿ ರಾಹುಲ್ ಅದ್ಬುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. 823 ರೇಟಿಂಗ್ ಪಾಯಿಂಟ್ ಮೂಲಕ ರಾಹುಲ್ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಕೊನೆಯ ಟಿ20 ಪಂದ್ಯದಲ್ಲಿ ಬುಮ್ರಾ ನಿರ್ಮಿಸಿದ ವಿಶ್ವದಾಖಲೆ ಗಮನಿಸಿದ್ರಾ..?

ನಾಯಕ ವಿರಾಟ್ ಕೊಹ್ಲಿ 9 ಹಾಗೂ ರೋಹಿತ್ ಶರ್ಮಾ 10ನೇ ಸ್ಥಾನ ಅಲಂಕರಿಸಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಕೇವಲ ಮೂವರು ಭಾರತೀಯ ಕ್ರಿಕಟಿಗರು ಕಾಣಿಸಿಕೊಂಡಿದ್ದಾರೆ. ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯ ಮೊದಲ ಸ್ಥಾನವನ್ನು ಪಾಕಿಸ್ತಾನದ ಬಾಬರ್ ಅಜಮ್ ಅಲಂಕರಿಸಿದ್ದಾರೆ.

ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿ
1 ಬಾಬರ್ ಅಜಮ್
2 ಕೆಎಲ್ ರಾಹುಲ್
3 ಆ್ಯರೋನ್ ಫಿಂಚ್
4 ಕೊಲಿನ್ ಮುನ್ರೊ
5 ಡೇವಿಡ್ ಮಲನ್