ಚೆನ್ನೈ(ನ.26): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಧೋನಿ ಆಯ್ಕೆಯಾಗೋ ನಿರೀಕ್ಷೆ ಕೂಡ ಹುಸಿಯಾಗಿದ್ದು, ಧೋನಿ ಆಟಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಧೋನಿ ಮೈದಾನದಲ್ಲಿನ ಬೌಂಡರಿ ಸಿಕ್ಸರ್‌ಗೆ ಬ್ರೇಕ್ ಬಿದ್ದಿದೆ. ಆದರೆ ಮೈದಾನದ ಹೊರಗೆ ಮಾತಿನ ಮೂಲಕ ಧೋನಿ ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ.

ಇದನ್ನೂ ಓದಿ: ಟ್ವೀಟ್ ಮಾಡಿ ಧೋನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ವಿರಾಟ್ ಕೊಹ್ಲಿ!

ಚೆನ್ನೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಂ.ಎಸ್.ಧೋನಿ ತಾವು ಮಾದರಿ ಪತಿಗಿಂತ ಉತ್ತಮ ಎಂದು ವಿವರಿಸಿದರು. ಪತ್ನಿಗೆ ತನಗೆ ಇಷ್ಟಬಂದಂತೆ ಇರಲು ಅನುಮತಿ ನೀಡಿದ್ದೇನೆ. ಪತ್ನಿ ಸಂತೋಷವಾಗಿದ್ದರೆ ಪತಿ ಸಂತೋಷವಾಗಿರುತ್ತಾರೆ. ಪತ್ನಿ ಏನೇ ಕೇಳಿದರೂ ನಾನು ಗ್ರೀನ್ ಸಿಗ್ನಲ್ ನೀಡುತ್ತೇನೆ. ಪ್ರತಿಯೊಬ್ಬ ಪುರುಷರು ಸಿಂಹಗಳೇ, ಆದರೆ ಮದುವೆಯಾಗುವ ವರೆಗೆ ಮಾತ್ರ ಎಂದು ಧೋನಿ ಹೇಳಿದ್ದಾರೆ.

 

ಇದನ್ನೂ ಓದಿ: ಕೇದಾರ್‌ ಜತೆ ಗಾಲ್ಫ್ ಆಡಿದ ಧೋನಿ

ಧೋನಿ ಮಾತಿನ ಮೋಡಿಗೆ ನೆರೆದಿದ್ದವರಿಗೆ ನಗು ತಡೆಯಲಾಗಲಿಲ್ಲ. ಹಾಸ್ಯದ ಮೂಲಕ ಸಂಸಾರದ ಗುಟ್ಟು ಹೇಳಿದ ಧೋನಿಗೆ ಎಲ್ಲರೂ ಸಲಾಂ ಹೇಳಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ವೆಸ್ಟ್ ಇಂಡೀಸ್ ಪ್ರವಾಸ, ಸೌತ್ ಆಫ್ರಿಕಾ ವಿರುದ್ದದ ಸರಣಿ, ಬಾಂಗ್ಲಾ ಸರಣಿ ಹಾಗೂ ಡಿಸೆಂಬರ್ 6 ರಿಂದ ನಡಯಲಿರುವ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೂ ಆಯ್ಕೆಯಾಗಿಲ್ಲ.