1) ಕರ್ನಾಟಕ ಬೈ ಎಲೆಕ್ಷನ್: ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ ರಾಜಕೀಯ ಗಣ್ಯರು!

ಸ್ಪೀಕರ್‌ ಹಾಗೂ ಸುಪ್ರೀಂಕೋರ್ಟಿನಿಂದ ಅನರ್ಹಗೊಂಡಿರುವ 17 ಪದಚ್ಯುತ ಶಾಸಕರ ಪೈಕಿ 13 ಮಂದಿಯ ಭವಿಷ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಹುಮತ ನಿರ್ಧರಿಸುವ ಅತಿ ನಿರೀಕ್ಷಿತ ರಾಜ್ಯ ವಿಧಾನಸಭಾ ಉಪಚುನಾವಣೆಯ ಮತದಾನ ನಡೆಯುತ್ತಿದೆ. ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದ ರಾಜಕೀಯ ಘಟಾನುಘಟಿಗಳ ಒಂದು ನೋಟ ಈ ಸ್ಟೋರಿಯಲ್ಲಿದೆ.

2) ಆಕೆಗೆ ಬೆಂಕಿ ಇಟ್ಟಾಗ ಜೀವ ಇತ್ತು: ರಾಕ್ಷಸನ ಹೇಳಿಕೆಗೆ ಮನಸ್ಸು ಕದಲಿತ್ತು!

ತೆಲಂಗಾಣದ ರಾಜಧಾನಿ ಹೈದರಾಬಾದ್ ನಲ್ಲಿ ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ರೇಪ್ ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿ ತಾವು ವೈದ್ಯೆಯನ್ನು ಸುಡಲು ಬೆಂಕಿ ಹಚ್ಚಿದ ವೇಳೆ ಆಕೆ ಜೀವಂತವಿದ್ದಳೆಂದು ತಿಳಿಸಿದ್ದಾನೆ.

3) ಮಹಿಳಾ ಸುರಕ್ಷತೆ: ಓಲಾ, ಉಬರ್ ಸೇರಿದಂತೆ ಎಲ್ಲಾ ಕ್ಯಾಬ್‌ಗಳಿಗೆ ಹೊಸ ರೂಲ್!

ಹೈದರಾಬಾದ್‌ನಲ್ಲಿ ಪಶು ವೈದ್ಯೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ  ಇದೀಗ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಕರ್ನಾಟಕ ಮುಂದಾಗಿದೆ. ಇದಕ್ಕಾಗಿ  ನಗರದ ಕ್ಯಾಬ್, ಟ್ಯಾಕ್ಸಿಗಳಿಗೆ ಹೊಸ ರೂಲ್ ಜಾರಿಗೆ ತಲರಾಗುತ್ತಿಜೆ. ಈ ಸಂಬಂಧ ಸಾರಿಗೆ ಇಲಾಖೆ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳ ಜತೆ ಸಭೆ ನಡೆಸಲಾಗಿದೆ.

4) 'ಕಾಫಿಗೆ ಕರ್ಕೊಂಡ್ ಹೋಗಿ ಬಿಜೆಪಿಗೆ ಸೇರಿಸಿಬಿಟ್ರು': ಕೈ ನಾಯಕ ಮರಳಿ ಗೂಡಿಗೆ

ಉಪಚುನಾವಣೆಗೆ ಇನ್ನೂ  2 ದಿನ ಬಾಕಿ ಇರುವಾಗಲೇ ಬಿಜೆಪಿ ಸೇರಿದ್ದ ಕಾಂಗ್ರೆಸ್ ನಾಯಕ ಈಗ ಮರಳಿ ಗೂಡಿಗೆ ಸೇರಿಕೊಂಡಿದ್ದಾರೆ. ಕಾಫಿಗೆ ಕರ್ಕೊಂಡ್ ಹೋಗಿ ಬಿಜೆಪಿಗೆ ಸೇರಿಸಿಬಿಟ್ರು ಎಂದು ಗಂಭೀರ ಆರೋಪ ಸಹ ಮಾಡಿದ್ದಾರೆ.

5) ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದೂರು ದಾಖಲು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಜಿ ದೇವರಾಜ್ ಎಫ್ ಎಸ್ ಟಿ ಮುಖ್ಯಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. 

6) ವಿಶ್ರಾಂತಿಯಲ್ಲಿರುವ ಧೋನಿಯಿಂದ ಆರ್ಕೆಸ್ಟ್ರಾ; ಬಾಲಿವುಡ್ ಹಾಡಿನ ಮೂಲಕ ಶೈನ್!

ಸದ್ಯ ಟೀಂ ಇಂಡಿಯಾದಿಂದ ದೂರ ಉಳಿದಿರುವ ಧೋನಿ ಬಾಲಿವುಡ್ ಹಾಡುಗಳನ್ನು ಹಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಆಪ್ತ ಗೆಳೆಯರ ಪಾರ್ಟಿಯಲ್ಲಿ ಕಾಣಿಸಿಕೊಂಡ ಧೋನಿ, ಆರ್ಕೆಸ್ಟ್ರಾ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಧೋನಿಯ ಹಿಂದಿ ಹಾಡುಗಳ ಆರ್ಕೆಸ್ಟ್ರಾ ವಿಡಿಯೋ ವೈರಲ್ ಆಗಿದೆ.

7) ಕೋಟಿ ಕೋಟಿ ಕೊಡ್ತೀನಿ ಅಂದ್ರೂ ಬೆತ್ತಲಾಗೋಕೆ ನೋ ಎಂದ ನಟಿ

ಬಾಲಿವುಡ್ ನಟಿ ನರ್ಗೀಸ್ ಫಕ್ರಿ ತಮ್ಮ ಮಾಡೆಲಿಂಗ್ ದಿನಗಳಲ್ಲಿ ಎದುರಿಸಿದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಬೆತ್ತಲಾಗೋಕೆ ನಿರಾಕರಿಸಿ ಕೋಟಿ ಕೋಟಿ ಆಫರ್ ನಿರಾಕರಿಸಿರುವುದಾಗಿ ಹೇಳಿದ್ದಾರೆ. 

8) ಏರ್‌ಟೆಲ್‌, ವೊಡಾಫೋನ್‌ ಬಳಿಕ ಜಿಯೋ ದರ ಏರಿಕೆ

ಏರ್‌ಟೆಲ್‌ ಮತ್ತು ವೊಡಾಫೋನ್‌ ಸಂಸ್ಥೆಗಳು ಕರೆ ಮತ್ತು ಡೇಟಾ ಪ್ಯಾಕ್‌ಗಳ ದರ ಏರಿಕೆ ಮಾಡಿದ ಬೆನ್ನಲ್ಲೇ, ರಿಲಯನ್ಸ್‌ ಜಿಯೋ ಸಹ ಡಿಸೆಂಬರ್‌ 6ರಿಂದ ಅನ್ವಯವಾಗುವಂತೆ ಮೊಬೈಲ್‌ ಕರೆ ಮತ್ತು ಇಂಟರ್‌ನೆಟ್‌ ಪ್ಯಾಕ್‌ಗಳ ದರವನ್ನು ಶೇ.39 ರಷ್ಟುಏರಿಕೆ ಮಾಡಲು ನಿರ್ಧರಿಸಿದೆ. 

9) 8, 7, 6.6 5.8, 5, 4.5: ಜೈಲಿನಿಂದ ಹೊರಬಂದು ಸಂಖ್ಯೆ ಎಣಿಸಿದ ಚಿದಂಬರಂ!

ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ದೇಶದ ಜಿಡಿಪಿ ಕುಂಠಿತಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


10) MG ಮೋಟಾರ್ಸ್‌ನಿಂದ ಹೆಕ್ಟರ್ ಬಳಿಕ ಹೊಸ ಎಲೆಕ್ಟ್ರಿಕ್ ಕಾರು ಅನಾವರಣ!

MG ಮೋಟಾರ್ಸ್ ಭಾರತದಲ್ಲಿ ಈಗಾಗಲೇ ಹೆಕ್ಟರ್ Suv ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಎಂಜಿ ಮೋಟೋರಾಸ್ ಭಾರತದಲ್ಲಿ ಎರಡನೇ ಕಾರು ಅನಾವರಣ ಮಾಡಿದೆ.  ಇದು ಎಲೆಕ್ಟ್ರಿಕ್ ಕಾರು ಅನ್ನೋದೇ ವಿಶೇಷ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ  MG ZS ಎಲೆಕ್ಟ್ರಿಕ್ ಕಾರನ್ನು ಎಂಜಿ ಅನಾವರಣ ಮಾಡಿದೆ. .