Asianet Suvarna News Asianet Suvarna News

ನನ್ನ ಗರ್ಲ್‌ಫ್ರೆಂಡ್___!ಬ್ಯಾಚುಲರ್ ಹುಡುಗರಿಗೆ ಒಂದೇ ವಾಕ್ಯದಲ್ಲಿ ಪ್ರೀತಿ ಪಾಠ ಹೇಳಿದ ಧೋನಿ!

ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ಯುವ ಕ್ರಿಕೆಟಿಗರು ಎಂಎಸ್ ಧೋನಿ ಕ್ರಿಕೆಟ್ ಪಾಠ ಹೇಳಿಕೊಡುವುದನ್ನು ಗಮನಿಸಿರುತ್ತೀರಿ. ಈ ಬಾರಿ ಧೋನಿ ಬ್ಯಾಚುಲರ್ ಹುಡುಗರಿಗೆ ಪ್ರೀತಿ ಮಾಡುವಾಗ ಯಾವ ಎಚ್ಚರಿಕೆ ವಹಿಸಬೇಕು ಅನ್ನೋದನ್ನು ಒಂದೇ ವಾಕ್ಯದಲ್ಲಿ ಹೇಳಿದ್ದಾರೆ. 
 

MS Dhoni love and relationship advice for bachelors Viral on social media ckm
Author
First Published Oct 27, 2023, 4:04 PM IST

ಮುಂಬೈ(ಅ.27)  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಕೂಲ್ ಕ್ಯಾಪ್ಟನ್ ಎಂದೇ ಹೆಸರುವಾಸಿಯಾಗಿದ್ದಾರೆ. ಸೈಲೆಂಟ್ ಆಗಿ ಪಂದ್ಯದ ಗತಿಯನ್ನೇ ಬದಲಿಸುತ್ತಾರೆ. ಇತ್ತ ಸುದ್ದಿಗೋಷ್ಠಿಯಲ್ಲಿ ಧೋನಿ ನೀಡುವ ಉತ್ತರಗಳು ಅಷ್ಟೇ ಪರ್ಫೆಕ್ಟ್ ಹಾಗೂ ಫನ್ನಿ. ಟೀಂ ಇಂಡಿಯಾದಿಂದ ವಿದಾಯ ಹೇಳಿದ ಬಳಿಕ ಧೋನಿ ಐಪಿಎಲ್ ವೇಳೆ, ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯಲ್ಲಿ ಯುವ ಕ್ರಿಕೆಟಿಗರು, ಅಂತಾರಾಷ್ಟ್ರೀಯ ಕ್ರಿಕೆಟಿಗರು ಕ್ರಿಕೆಟ್ ಪಾಠ ಹೇಳಿಕೊಡುವ ವಿಡಿಯೋಗಳು ವೈರಲ್ ಆಗಿದೆ. ಇದೀಗ ಧೋನಿ ಪ್ರೀತಿಸುತ್ತಿರುವ ಹುಡುಗರಿಗೆ, ಗರ್ಲ್‌ಫ್ರೆಂಡ್ ಜೊತೆ ಸುತ್ತಾಡುವ ಬ್ಯಾಚುಲರ್ಸ್‌ಗೆ ಎಚ್ಚರಿಕೆ ಕಿವಿ ಮಾತು ಹೇಳಿದ್ದಾರೆ. 

ಇತ್ತೀಚೆಗೆ ಎಂಎಸ್ ಧೋನಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಧೋನಿ ಜೊತೆ ಸಂವಾದ ಕಾರ್ಯಕ್ರಮವೂ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಧೋನಿಗೆ ರಿಲೇಶನ್‌ಶಿಪ್ ಕುರಿತು ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಧೋನಿ ನೀಡಿದ ಉತ್ತರ ಇದೀಗ ಭಾರಿ ಸಂಚಲನ ಸೃಷ್ಟಿದೆ. ನಿಮಗೆ ಇಷ್ಟವಾದರು ಸಿಕ್ಕರೆ, ನೀವು ಅವರ ಜೊತೆ ನಿಜಕ್ಕೂ ಖುಷಿಯಿಂದ ಇದ್ದೀರಿ ಎಂದರೆ ಮದುವೆಯಾಗಿ ಎಂದು ಮೊದಲ ಸಲಹೆ ನೀಡಿದ್ದಾರೆ. ಧೋನಿ ನೀಡಿದ ಎರಡನೇ ಸಲಹೆಗೆ ಇಡೀ ಸಭೆ ಚಪ್ಪಾಳೆ, ಶಿಳ್ಳಿ ಹೊಡೆದಿದೆ.

ವಿಶ್ವಕಪ್‌ ಕ್ರಿಕೆಟ್‌ ಮ್ಯಾಚ್‌ ನಡುವೆಯೂ ಹೆಲ್ಮೆಟ್‌ ಧರಿಸಿ ಗಲ್ಲಿ ಸುತ್ತಲು ಹೊರಟ ಕ್ಯಾಪ್ಟನ್‌

ಎರಡನೇ ಸಲಹೆಯಾಗಿ ಧೋನಿ, ಇಲ್ಲಿ ನರೆದಿರುವ ಬ್ಯಾಚುಲರ್ಸ್‌, ನಿಮ್ಮಲ್ಲಿ ಯಾರಿಗೆಲ್ಲಾ ಗರ್ಲ್‌ಫ್ರೆಂಡ್ ಇದ್ದಾರೋ ಗಮನವಿಟ್ಟು ಕೇಳಿ. ನಿಮಗೊಂದು ತಪ್ಪು ಕಲ್ಪನೆ ಇರುತ್ತೆ. ಅದನ್ನು ಹೇಳಿತ್ತೇನೆ. ಯಾರೂ ಕೂಡ ನನ್ನ ಗರ್ಲ್‌ಫ್ರೆಂಡ್ ಇತರರಿಗಿಂತ ಭಿನ್ನ ಎಂದು ಯಾವತ್ತೂ ಅಂದುಕೊಳ್ಳಬೇಡಿ ಎಂದು ಧೋನಿ ಕಿವಿ ಮಾತು ಹೇಳಿದ್ದಾರೆ.

 

 

ಧೋನಿ ಕಿವಿ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಕ್ಷಣಾರ್ಧದಲ್ಲೇ ಲೈಕ್ಸ್, ಕಮೆಂಟ್ ಸುರಿಮಳೆಯಾಗಿದೆ. ಇದೇ ವೇಳೆ ಕೆಲ ಫನ್ನಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಥಲಾಗೆ ಎಲ್ಲಾವು ತಿಳಿದಿದೆ. ಥಲಾ ಕ್ರಿಕೆಟ್ ಚಾಣಾಕ್ಷ ಮಾತ್ರವಲ್ಲ, ಲವ್ ಗುರುವಾಗಿದ್ದಾರೆ ಅನ್ನೋ ಕಮೆಂಟ್‌ಗಳು ವ್ಯಕ್ತವಾಗಿದೆ. ಇದರ ಜೊತೆಗೆ ಧೋನಿ ಈ ಮಾತು ಹೇಳಿ ಮನೆಗೆ ಹಿಂತುರುಗಿದಾಗ, ಮನೆಯ ಬಾಗಿಲು ತೆರೆದುಕೊಂಡಿಲ್ಲ. ಒಂದು ರಾತ್ರಿಯಿಡಿ ಮನೆಯ ಹೊರಗಡೆ ಕಾಯಬೇಕಾಯಿತು. ಮರುದಿನ ಬೆಳಗ್ಗೆ ಧೋನಿಗೆ ಮನೆಯೊಳಗೆ ಪ್ರವೇಶ ದೊರಕಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿಸಿದ ಧೋನಿ ನ್ಯೂ ಲುಕ್..! ಯಾರಿದು ಹೀರೋ ಎಂದ ಫ್ಯಾನ್ಸ್

Follow Us:
Download App:
  • android
  • ios