ನಾನು ಧೋನಿ ಕ್ಲೋಸ್ ಫ್ರೆಂಡ್ಸ್ ಅಲ್ಲವೇ ಅಲ್ಲ : ಹೊಸ ಬಾಂಬ್ ಸಿಡಿಸಿದ ಯುವಿ..!

"ನಾನು ಹಾಗೂ ಧೋನಿ ದೇಶಕ್ಕಾಗಿ 100% ಗಿಂತಲೂ ಹೆಚ್ಚಿನದನ್ನು ನೀಡಬೇಕು ಎಂದುಕೊಂಡೇ ಮೈದಾನಕ್ಕಿಳಿಯುತ್ತಿದ್ದೆವು. ಅವರು ನಾಯಕರಾಗಿದ್ದರು, ನಾನು ಉಪನಾಯಕನಾಗಿದ್ದೆ. ಅವರು ಭಾರತ ತಂಡಕ್ಕೆ ಬಂದಾಗ, ಅವರು ನನಗಿಂತ 4 ವರ್ಷ ಜೂನಿಯರ್ ಆಗಿದ್ದರು" ಎಂದು ಯುವಿ ಹೇಳಿದ್ದಾರೆ.

MS Dhoni and I are not close friends Says Yuvraj Singh kvn

ನವದೆಹಲಿ(ನ.06): ತಮ್ಮ ದೀರ್ಘಕಾಲದ ಸಹ ಆಟಗಾರ, ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿ ಬಗ್ಗೆ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅಚ್ಚರಿಯೆ ಹೇಳಿಕೆ ನೀಡಿದ್ದು, ಧೋನಿ ಮತ್ತು ನಾನು ಆಪ್ತ ಸ್ನೇಹಿತರಲ್ಲ ಎಂದಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನಾನು-ಧೋನಿ ಕ್ರಿಕೆಟ್‌ನಿಂದಾಗಿ ಸ್ನೇಹಿತರಷ್ಟೇ. ನಮ್ಮಿಬ್ಬರ ಜೀವನಶೈಲಿ ವಿಭಿನ್ನ. ನಾವು ಆಡುವ ಎಲ್ಲರ ಜೊತೆಯೂ ಆಪ್ತತೆ ಬೆಳೆಸಿಕೊಳ್ಳಬೇಕು ಎಂದೇನಿಲ್ಲ’ ಎಂದಿದ್ದಾರೆ.

TRS podcast ನಲ್ಲಿ ಮಾತನಾಡುವಾಗ ಯುವರಾಜ್ ಸಿಂಗ್ ಬಳಿ ನಿಮ್ಮ ಹಾಗೂ ಧೋನಿ ಜತೆಗಿನ ಬಾಂಧವ್ಯದ ಕುರಿತಂತೆ ಕೇಳಿದಕ್ಕೆ ಮಾಜಿ ಆಲ್ರೌಂಡರ್, "ನಾನು ಹಾಗೂ ಧೋನಿ ನಿಜಕ್ಕೂ ಆಪ್ತ ಸ್ನೇಹಿತರಲ್ಲ. ನಾವು ಕ್ರಿಕೆಟ್‌ನಿಂದಾಗಿ ಫ್ರೆಂಡ್ಸ್‌ಗಳಾಗಿದ್ದೆವು. ನಾವು ಒಟ್ಟಿಗೆ ಆಡಿದ್ದೇವೆ. ನನ್ನ ಜೀವನಶೈಲಿ ಅವರ ಜೀವನಶೈಲಿಗಿಂತ ವಿಭಿನ್ನವಾಗಿದೆ. ಹೀಗಾಗಿಯೇ ನಾವು ಕ್ಲೋಸ್ ಅಲ್ಲ ಎಂದು ದ ರನ್ವೀರ್ ಶೋ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

ಅಂದು ತ್ರಿಮೂರ್ತಿಗಳನ್ನ ಟಿ20 ತಂಡದಿಂದ ಹೊರಹಾಕಿಸಿದ್ದ ಪಾಂಡ್ಯ, ಇಂದು ವಿಶ್ವಕಪ್‌ನಿಂದಲೇ ಕಿಕೌಟ್..!

"ನಾನು ಹಾಗೂ ಧೋನಿ ದೇಶಕ್ಕಾಗಿ 100% ಗಿಂತಲೂ ಹೆಚ್ಚಿನದನ್ನು ನೀಡಬೇಕು ಎಂದುಕೊಂಡೇ ಮೈದಾನಕ್ಕಿಳಿಯುತ್ತಿದ್ದೆವು. ಅವರು ನಾಯಕರಾಗಿದ್ದರು, ನಾನು ಉಪನಾಯಕನಾಗಿದ್ದೆ. ಅವರು ಭಾರತ ತಂಡಕ್ಕೆ ಬಂದಾಗ, ಅವರು ನನಗಿಂತ 4 ವರ್ಷ ಜೂನಿಯರ್ ಆಗಿದ್ದರು" ಎಂದು ಯುವಿ ಹೇಳಿದ್ದಾರೆ.

"ನಾಯಕ ಹಾಗೂ ಉಪನಾಯಕರ ನಡುವೆ ನಿರ್ಧಾರ ತೆಗೆದುಕೊಳ್ಳುವಾಗ ಕೆಲವೊಮ್ಮೆ ಇಬ್ಬರ ತೀರ್ಮಾನಗಳು ವಿಭಿನ್ನವಾಗಿರುತ್ತಿದ್ದವು. ಒಮ್ಮೆ ಧೋನಿ ತೆಗೆದುಕೊಳ್ಳುವ ತೀರ್ಮಾನಗಳು ನನಗೆ ಇಷ್ಟವಾಗುತ್ತಿರಲಿಲ್ಲ. ಅದೇ ರೀತಿ ನಾನು ತೆಗೆದುಕೊಳ್ಳುವ ನಿರ್ಧಾರಗಳು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಇದು ಬಹುತೇಕ ಎಲ್ಲಾ ತಂಡಗಳಲ್ಲೂ ಹೀಗೆ ಇರುತ್ತದೆ" ಎಂದು ಯುವರಾಜ್ ಸಿಂಗ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಭಾರತ ವಿರುದ್ದ ಹೀನಾಯ ಸೋಲಿಗೆ ತಲೆದಂಡ, ಸಂಪೂರ್ಣ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಜಾ!

'ನನ್ನ ವೃತ್ತಿಜೀವನದ ಕೊನೆಯಲ್ಲಿ, ನನಗೆ ಧೋನಿಯಿಂದ ಮಾತ್ರ ಸ್ಪಷ್ಟ ಚಿತ್ರಣ ದೊರೆಯಿತು ಎಂದು ಯುವಿ ಹೇಳಿದ್ದಾರೆ. ನಾನು ಅವರ ಬಳಿ ಹೋಗಿ ಸಲಹೆಯನ್ನು ಕೇಳಿದೆ. ಆಗ ಅವರು, ಸದ್ಯಕ್ಕೆ ಆಯ್ಕೆ ಸಮಿತಿಯು ನಿಮ್ಮತ್ತ ಗಮನ ಹರಿಸುತ್ತಿಲ್ಲ ಎಂದು ಹೇಳಿದರು. ಕೊನೆಗೂ ಒಬ್ಬರಾದರೂ ಸತ್ಯ ಹೇಳಿದರಲ್ಲ ಅಂದುಕೊಂಡೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಯುವರಾಜ್ ಸಿಂಗ್ ಅವರಿಗಿಂತಲೂ ನಾಲ್ಕು ವರ್ಷ ತಡವಾಗಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ಎಂ ಎಸ್ ಧೋನಿ, ಕೇವಲ ಕೆಲವೇ ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ನೇಮಕವಾದರು. ಇದಾದ ಬಳಿಕ ಧೋನಿ ನೇತೃತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಎರಡು ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಮಹತ್ವದ ಪಾತ್ರ ವಹಿಸಿದ್ದರು. 
 

Latest Videos
Follow Us:
Download App:
  • android
  • ios