ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 10 ಬ್ಯಾಟರ್‌ಗಳ ಪಟ್ಟಿಗೆ ವಿರಾಟ್ ಕೊಹ್ಲಿ ಅಧಿಕೃತವಾಗಿ ಪ್ರವೇಶಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 9 ಸಿಕ್ಸರ್ ಸಿಡಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದರೆ, ಕ್ರಿಸ್ ಗೇಲ್ ಮತ್ತು ಅಫ್ರಿದಿ ನಂತರದ ಸ್ಥಾನಗಳಲ್ಲಿದ್ದಾರೆ.
Most Sixes: ಇಂಟರ್ನ್ಯಾಷನಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 10 ಬ್ಯಾಟರ್‌ಗಳ ಪಟ್ಟಿಗೆ ವಿರಾಟ್ ಕೊಹ್ಲಿ ಎಂಟ್ರಿ ಕೊಟ್ಟಿದ್ದಾರೆ. 665 ಸಿಕ್ಸರ್‌ಗಳೊಂದಿಗೆ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಈ ಟಾಪ್ 10 ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ ಗೊತ್ತಾ?
ಇಂಟರ್ನ್ಯಾಷನಲ್ ಕ್ರಿಕೆಟ್‌ನಲ್ಲಿ ಸಿಕ್ಸರ್ ಸಿಡಿಸೋದು ಒಂದು ಕಲೆ. ಚೆಂಡನ್ನು ಸ್ಟ್ಯಾಂಡ್‌ಗೆ ಅಟ್ಟುವ ಬ್ಯಾಟರ್‌ಗಳಿಗೆ ಪ್ರಪಂಚದಾದ್ಯಂತ ಸಖತ್ ಕ್ರೇಜ್ ಇದೆ. ತಿರುವನಂತಪುರಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಈ ಪಂದ್ಯದಲ್ಲಿ 139 ರನ್ ಗಳಿಸಿ ಅಜೇಯರಾಗಿ ಉಳಿದ ಕೊಹ್ಲಿ, ಬರೋಬ್ಬರಿ 9 ಸಿಕ್ಸರ್ ಬಾರಿಸಿದರು. ಈ ಮೂಲಕ ಇಂಟರ್ನ್ಯಾಷನಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಬ್ಯಾಟರ್‌ಗಳ ಪಟ್ಟಿಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಆ ಟಾಪ್ 10 ಬ್ಯಾಟರ್‌ಗಳು ಯಾರು ಅಂತ ನೋಡೋಣ ಬನ್ನಿ.
ಕ್ರಿಸ್ ಗೇಲ್ ಮತ್ತು ಶಾಹಿದ್ ಅಫ್ರಿದಿ
ವೆಸ್ಟ್ ಇಂಡೀಸ್ ಮಾಜಿ ಓಪನರ್, 'ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ ತಮ್ಮ ಇಂಟರ್ನ್ಯಾಷನಲ್ ಕೆರಿಯರ್‌ನ 551 ಇನ್ನಿಂಗ್ಸ್‌ಗಳಲ್ಲಿ 553 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೇ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಶಾಹಿದ್ ಅಫ್ರಿದಿ 508 ಪಂದ್ಯಗಳಲ್ಲಿ 476 ಸಿಕ್ಸರ್ ಬಾರಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಜೋಸ್ ಬಟ್ಲರ್ ಮತ್ತು ಬ್ರೆಂಡನ್ ಮೆಕಲಮ್
ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಇದುವರೆಗೆ 426 ಪಂದ್ಯಗಳಲ್ಲಿ 418 ಸಿಕ್ಸರ್ ಬಾರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ಮಾಜಿ ಕ್ಯಾಪ್ಟನ್ ಬ್ರೆಂಡನ್ ಮೆಕಲಮ್ ತಮ್ಮ ಕೆರಿಯರ್‌ನಲ್ಲಿ 474 ಪಂದ್ಯಗಳನ್ನಾಡಿ 398 ಸಿಕ್ಸರ್ ಸಿಡಿಸುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.
ಮಾರ್ಟಿನ್ ಗಪ್ಟಿಲ್, ಎಂಎಸ್ ಧೋನಿ, ಜಯಸೂರ್ಯ
ನ್ಯೂಜಿಲೆಂಡ್ ಮಾಜಿ ಓಪನರ್ ಮಾರ್ಟಿನ್ ಗಪ್ಟಿಲ್ 402 ಪಂದ್ಯಗಳಲ್ಲಿ 383 ಸಿಕ್ಸರ್ ಸಿಡಿಸಿ ಆರನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ 526 ಪಂದ್ಯಗಳಲ್ಲಿ 359 ಸಿಕ್ಸರ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ಕ್ಯಾಪ್ಟನ್ ಸನತ್ ಜಯಸೂರ್ಯ 651 ಪಂದ್ಯಗಳಲ್ಲಿ 352 ಸಿಕ್ಸರ್ ಬಾರಿಸಿ ಎಂಟನೇ ಸ್ಥಾನದಲ್ಲಿದ್ದಾರೆ.
ಇಯಾನ್ ಮಾರ್ಗನ್ ಮತ್ತು ವಿರಾಟ್ ಕೊಹ್ಲಿ
ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಇಯಾನ್ ಮಾರ್ಗನ್ 361 ಪಂದ್ಯಗಳಲ್ಲಿ 346 ಸಿಕ್ಸರ್ ಸಿಡಿಸಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಭಾನುವಾರ ತಿರುವನಂತಪುರಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 9 ಸಿಕ್ಸರ್ ಬಾರಿಸಿ 139 ರನ್ ಗಳಿಸಿದ ವಿರಾಟ್ ಕೊಹ್ಲಿ ಹತ್ತನೇ ಸ್ಥಾನಕ್ಕೇರಿದ್ದಾರೆ. ಸದ್ಯ ಕೊಹ್ಲಿ ಖಾತೆಯಲ್ಲಿ 630 ಇಂಟರ್ನ್ಯಾಷನಲ್ ಪಂದ್ಯಗಳಿಂದ 334 ಸಿಕ್ಸರ್‌ಗಳಿವೆ.


