ಮೊಹಮ್ಮದ್ ಶಮಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಗಾಯದ ಬಳಿಕ ಶೇರ್‌ನಂತೆ ಕಮ್‌ಬ್ಯಾಕ್ ಮಾಡಿದ ಕಥೆ. ಮೊಹ್ಮದ್‌ ಶಮಿ ಮತ್ತು ಬೆಂಗಳೂರು. ಇದು ಬರೀ ನಂಟಲ್ಲ, ಇದು ಅವರ ಕ್ರಿಕೆಟ್‌ ಮರುಜನ್ಮದ ಸ್ಟೋರಿ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಇವತ್ತು ಮೊಹ್ಮದ ಶಮಿ ವಿದಾಯ ಹೇಳಿದ್ದಾರೆ. ಇದು ಒಬ್ಬರ ವಿದಾಯವಲ್ಲ, ಬದಲಾಗಿ, ಕ್ರಿಕೆಟ್ ಲೋಕ ಎಂಥವರನ್ನು ಕಳೆದುಕೊಂಡಿದೆ, ಎಂದರೆ, ಪ್ರತಿ ಭಾರಿ ಗಾಯಕ್ಕೆ ತುತ್ತಾದ ಶಮಿ, ಕಮ್‌ ಬ್ಯಾಕ್‌ ಮಾಡಿದ್ದು ಮಾತ್ರ ಶೇರ್‍‌ ತರಹ. ಹೇಗೆ ಎಂದರೆ ಹಿಂದಿಯಲ್ಲಿ ಹೇಳುತ್ತಾರೆ ಗಿರೆ ಹಮ್ ತೋ ಫಿರ್‍‌ ಸೇ ಸಂಬಲ್‌ ಕರ ಖಡೇ ಹುವೆ, ಜೈಸೆ ಶಮಿ ಜೈ ಸಾ ಶೇರ್‍‌ ನಹೀ ಡರೇ. ಅಂದ್ರೆ ಲೈಫ್ ನಮಗೆ ಎಷ್ಟು ಸಾರಿ ಶೆಟ್‌ಡೌನ್ ಮಾಡಿದ್ರೂ, ನಾವು ಮಾತ್ರ ಮತ್ತೆ ಫುಲ್ ಜೋಶ್‌ನಲ್ಲಿ ಕಮ್‌ಬ್ಯಾಕ್ ಮಾಡ್ತೀವಿ. ಜಸ್ಟ್ ಲೈಕ್ ಶೇರ್ ಶಮಿ ಭಾಯ್ ತರಹ. ಆದರೆ ಮೊಹ್ಮದ್ ಶಮಿ, ನಮ್ಮ ಬೆಂಗಳೂರಿನ ನಂಟಿದೆ ಅಲ್ಲ, ಅದೂ ನಂಟಷ್ಟೇ ಅಲ್ಲ, ಅದು ಲಾಲಾ ಪುನರ್‍‌ಜನ್ಮದ ಕಥೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

2013ಕ್ಕೆ ಡೆಬ್ಯು!

2013ರಲ್ಲಿ ಟೆಸ್ಟ್ ಅಖಾಡಕ್ಕೆ ಕಾಲಿಟ್ಟ ಶಮಿ ಅವರ ಪಯಣ 65 ಟೆಸ್ಟ್ ಪಂದ್ಯ, 229ವಿಕೆಟ್‌ಗಳು ಹಾಗೂ 6 ಬಾರಿ 'ಫೈವ್ ವಿಕೆಟ್ ಹಾಲ್' ನೊಂದಿಗೆ ಅಂತ್ಯಗೊಂಡಿದೆ. ಆದರೆ, ಈ ಅಂಕಿ-ಅಂಶಗಳಿಗಿಂತ ಮಿಗಿಲಾದುದು ದೇಶಕ್ಕಾಗಿ ಅವರಿಗಿದ್ದ ಅಪಾರ ಪ್ರೀತಿ. 2109ರ ವಿಶ್ವಕಪ್‌ನಲ್ಲಿ ಸಿಡಿಸಿದ ಆ ಐತಿಹಾಸಿಕ ಹ್ಯಾಟ್ರಿಕ್ ಆಗಿರಲಿ, ಅಥವಾ 2023ರ ವಿಶ್ವಕಪ್‌ನಲ್ಲಿ ಕೇವಲ 7ಪಂದ್ಯಗಳಲ್ಲಿ ಕಬಳಿಸಿದ 24 ವಿಕೆಟ್‌ಗಳಾಗಿರಲಿ, ಭಾರತಕ್ಕೆ ವಿಕೆಟ್ ಬೇಕಿದ್ದಾಗಲೆಲ್ಲಾ ಶಮಿ ತಮ್ಮ ಬಾಲ್‌ನಿಂದಲೇ ಉತ್ತರ ನೀಡಿದ್ದಾರೆ.

ಉಳಿದ ಮೌನ!

ಈ ಸುಂದರ ಪಯಣದಲ್ಲಿ ಒಂದು ಮೌನ ನೋವು ಉಳಿದುಹೋಯಿತು. ಜೂನ್ 2023ರ ನಂತರ ಅವರಿಗೆ ಮತ್ತೊಮ್ಮೆ ಟೆಸ್ಟ್ ಕ್ರಿಕೆಟ್ ಆಡಲು ಅವಕಾಶವೇ ಸಿಗಲಿಲ್ಲ. ಗಾಯದಿಂದ ಚೇತರಿಸಿಕೊಂಡು, ದೇಶೀಯ ಕ್ರಿಕೆಟ್‌ನಲ್ಲಿ ಸಾಲು ಸಾಲು ವಿಕೆಟ್ ಕಿತ್ತರೂ, ಟೆಸ್ಟ್ ತಂಡದ ಬಾಗಿಲು ತೆರೆಯಲೇ ಇಲ್ಲ. ಶಮಿ ಅವರಂತಹ ಅನುಭವಿ ಬೌಲರ್‌ಗೆ ಗೌರವಯುತವಾಗಿ ಕೊನೆಯದೊಂದು ವಿದಾಯದ ಟೆಸ್ಟ್ ಸರಣಿ ಸಿಗಬೇಕಿತ್ತಲ್ಲವೇ? ಎಂಬ ಪ್ರಶ್ನೆ ಮ್ಯಾನೇಜ್‌ಮೆಂಟ್ ವಿರುದ್ಧ ಕಾಡದೇ ಇರದು. ಆದರೂ, ಇಂದು ದೂರುಗಳನ್ನು ಬದಿಗಿಟ್ಟು, ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ನೀಡಿದ ಪಟುವನ್ನು ನೆನೆಯುವ ದಿನ.

ಆಸೆರೆಯಾದ ಬೆಂಗಳೂರು!

ಶಮಿ ಅವರು ವಿಶ್ವ ಕ್ರಿಕೆಟ್‌ನಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಗಾಯದ ಸಮಸ್ಯೆಗಳು ಅವರನ್ನು ಬೆಂಬಿಡದೆ ಕಾಡಿದಾಗ ಅವರಿಗೆ ಆಸರೆಯಾಗಿದ್ದು ನಮ್ಮ ಬೆಂಗಳೂರು. ಮೈದಾನದಿಂದ ದೂರವಾಗಿ, ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾಗ ಬೆಂಗಳೂರಿನ ಎನ್‌ಸಿಎ ಅವರ ಪಾಲಿಗೆ ತಪೋಭೂಮಿಯಾಗಿ ಬದಲಾಯಿತು. ಕನ್ನಡದ ಮಣ್ಣಿನಲ್ಲಿ ಹರಿದ ಬೆವರಿನ ಹನಿಗಳು, ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಟಿವಿ ಪರದೆಯ ಮೇಲೆ ಶಮಿ ಅವರ ಸ್ವಿಂಗ್ ಜಾದೂ ನೋಡಿ ಸಂಭ್ರಮಿಸುತ್ತಾರೆ. ಆದರೆ, ಆ ಜಾದೂ ಮರುಕಳಿಸಲು ಶಮಿ ಅವರು ಬೆಂಗಳೂರಿನ ಎನ್‌ಸಿಎ ನೆಟ್ಸ್‌ನಲ್ಲಿ ಕನ್ನಡಿಗರ ಕಣ್ಣೆದುರೇ ಗಂಟೆಗಟ್ಟಲೆ ಓಡಿ, ಬೆವರು ಹರಿಸಿ, ನೋವನ್ನು ನುಂಗಿ ತಪಸ್ಸು ಮಾಡಿದ್ದಾರೆ.

ಬೆಂಗಳೂರು ನೀಡಿದ 'ಕ್ರಿಕೆಟ್ ಪುನರ್ಜನ್ಮ!

ಒಬ್ಬ ವೇಗದ ಬೌಲರ್‌ಗೆ ಗಂಭೀರ ಸರ್ಜರಿಗಳ ನಂತರ ಕಮ್‌ಬ್ಯಾಕ್ ಮಾಡುವುದು ಸುಲಭದ ಮಾತಲ್ಲ. ಶಮಿ ಅವರ ವೃತ್ತಿಜೀವನ ಅಂತ್ಯವಾಯಿತು ಎಂದು ಕೆಲವರು ಶಂಕೆ ವ್ಯಕ್ತಪಡಿಸಿದಾಗಲೆಲ್ಲಾ, ಅವರಿಗೆ ಹೊಸ ದೈಹಿಕ ಶಕ್ತಿ ಮತ್ತು ಮಾನಸಿಕ ಧೈರ್ಯ ತುಂಬಿ, ಟೀಮ್ ಇಂಡಿಯಾಗೆ ಮತ್ತೊಮ್ಮೆ ಸಿಂಹದಂತೆ ಕಮ್‌ಬ್ಯಾಕ್ ಮಾಡಲು ವೇದಿಕೆ ಕಲ್ಪಿಸಿದ್ದು ಇದೇ ಕನ್ನಡದ ನೆಲ.

ಕನ್ನಡಿಗರ ನಿಶ್ಕಲ್ಮಷ ಪ್ರೀತಿ ಮತ್ತು ಪ್ರಾರ್ಥನೆ!

ಶಮಿ ಬೆಂಗಳೂರಿನಲ್ಲಿದ್ದಾಗಲೆಲ್ಲಾ ಇಲ್ಲಿನ ಕ್ರೀಡಾಭಿಮಾನಿಗಳು ಅವರನ್ನು ಕೇವಲ ಒಬ್ಬ ಆಟಗಾರನನ್ನಾಗಿ ನೋಡಲಿಲ್ಲ, ತಮ್ಮದೇ ಮನೆಯ ಹುಡುಗನಂತೆ ಪ್ರೀತಿ ತೋರಿದರು. "ನಮ್ಮ ಲಾಲಾ ಬೇಗ ಗುಣಮುಖರಾಗಲಿ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಸದಾ ಹಾರೈಸುತ್ತಾ, ಅವರ ಕಷ್ಟದ ದಿನಗಳಲ್ಲಿ ನೆರಳಾಗಿ ನಿಂತರು.

ಶಮಿ ವಿಕೆಟ್ ಸಂಭ್ರಮದಲ್ಲಿ ಬೆಂಗಳೂರಿನ ಋಣ!

ಇಂದು ಶಮಿ ಅವರು ಮೈದಾನಕ್ಕಿಳಿದು ವಿಕೆಟ್ ಕಿತ್ತು ಮುಗುಳ್ನಗುವಾಗ, ಆ ಯಶಸ್ಸಿನ ಹಿಂದೆ ಬೆಂಗಳೂರಿನ ಮಣ್ಣಿನ ಋಣ ಹಾಗೂ ಕನ್ನಡಿಗರ ಆಶೀರ್ವಾದದ ಪರೋಕ್ಷ ಹಸ್ತವಿದೆ. ಶಮಿ ಅವರ ಕ್ರಿಕೆಟ್ ಬದುಕಿನ ಎರಡನೇ ಇನ್ನಿಂಗ್ಸ್‌ನ ಪ್ರತಿ ಪುಟದಲ್ಲೂ ನಮ್ಮ ಬೆಂಗಳೂರಿನ ಹೆಸರಿದೆ.