ಟೀಂ ಇಂಡಿಯಾದ ಬೌಲರ್ ಸಿರಾಜ್ ಮತ್ತು ಗಾಯಕಿ ಆಶಾ ಭೋಸ್ಲೆ ಮೊಮ್ಮಗಳು ಜನೈ ಭೋಸ್ಲೆ ಅವರೊಂದಿಗಿನ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಜನೈ ಹುಟ್ಟುಹಬ್ಬದಲ್ಲಿ ಸಿರಾಜ್ ಭಾಗವಹಿಸಿದ್ದಾಗ ವದಂತಿಗಳು ಹಬ್ಬಿದ್ದವು. ಆದರೆ, ಜನೈ ತಂಗಿಯಂತೆ ಎಂದು ಸಿರಾಜ್ ಸ್ಪಷ್ಟಪಡಿಸಿದ್ದರು. ಇತ್ತೀಚೆಗೆ, ಜನೈ ಅವರ ಹಾಡಿಗೆ ಸಿರಾಜ್ ಧ್ವನಿಗೂಡಿಸಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ. ಸಿರಾಜ್ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ (Team India star bowler Mohammed Siraj) ವೈಯಕ್ತಿಕ ವಿಷ್ಯಕ್ಕೆ ಚರ್ಚೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದ ಮೊಹಮ್ಮದ್ ಸಿರಾಜ್ ಫೋಟೋ ಒಂದು ಸಾಕಷ್ಟು ಗುಸು ಗುಸು, ಪಿಸು ಪಿಸುಗೆ ಕಾರಣವಾಗಿತ್ತು. ಅದಕ್ಕೆ ಸ್ಪಷ್ಟನೆಯನ್ನೂ ಮೊಹಮ್ಮದ್ ಸಿರಾಜ್ ನೀಡಿದ್ರು. ಆದ್ರೀಗ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ಮೊಹಮ್ಮದ್ ಸಿರಾಜ್, ಅದೇ ಹಳೆ ಹುಡುಗಿ ಜೊತೆಗಿದ್ದಾರೆ. ವ್ಯಾನಿಟಿ ವ್ಯಾನ್ ಹೊರಗೆ ಸಿರಾಜ್ ಧ್ವನಿ ಕೇಳಿಸ್ತಾ ಇತ್ತು. ಒಳಗೆ ಏನ್ ನಡಿತಾ ಇದೆ ಅನ್ನೋದನ್ನು ನೋಡೋಕೆ ಹೋದಾಗ, ಸಿರಾಜ್ ಹುಡುಗಿ ಜೊತೆ ಕುಳಿತಿದ್ರು. ಅಷ್ಟಕ್ಕೂ ಆ ಹುಡುಗಿ ಬೇರೆ ಯಾರೂ ಅಲ್ಲ, ಕೆಲ ದಿನಗಳಿಂದ ತೀವ್ರ ಸುದ್ದಿ ಮಾಡ್ತಿರುವ ಭಾರತದ ಪ್ರಸಿದ್ಧ ಹಾಡುಗಾರ್ತಿ ಆಶಾ ಭೋಸ್ಲೆ (Asha Bhosle) ಮೊಮ್ಮಗಳು ಜನೈ ಭೋಸ್ಲೆ (Janai Bhosle).
ವ್ಯಕ್ತಿಯೊಬ್ಬರು ವ್ಯಾನಿಟಿ ವ್ಯಾನ್ ಬಾಗಿಲು ತೆಗೆದು ಒಳಗೆ ಹೋಗೋದನ್ನು ನೀವು ನೋಡ್ಬಹುದು. ಒಳಗೆ ಮೊಹಮ್ಮದ್ ಸಿರಾಜ್ ಮತ್ತು ಜನೈ ಭೋಸ್ಲೆ ಕುಳಿತಿರೋದನ್ನು ಕಾಣ್ಬಹುದು. ಅಲ್ಲದೆ ಹಾಡುಗಾರ್ತಿ ಜನೈ ಭೋಸ್ಲೆ ಜೊತೆ ಸಿರಾಜ್ ಧ್ವನಿ ಗೂಡಿಸಿದ್ದಾರೆ. ಸಿರಾಜ್ ಹಾಗೂ ಜನೈ ಭೋಸ್ಲೆ ಹಾಡನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಅಂದ್ರೆ ವಿರಾಟ್ ಕೊಹ್ಲಿಗೆ ಇಷ್ಟವಂತೆ! ಯಾಕೆ ಗೊತ್ತಾ?
ಸಿರಾಜ್ ಹಾಗೂ ಜನೈ ಭೋಸ್ಲೆ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳು ಮುಂಬೈನ ಎಸ್ಕೋಬಾರ್-ತಪಸ್ ಬಾರ್‌ನಲ್ಲಿ ನಡೆದ ಜನೈ ಭೋಸ್ಲೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಿರಾಜ್ ಭಾಗವಹಿಸಿದ್ದರು. ಜನೈ, ಇನ್ಸ್ಟಾಗ್ರಾಮ್ ನಲ್ಲಿ ಕಾರ್ಯಕ್ರಮದ ಫೋಟೋವನ್ನು ಪೋಸ್ಟ್ ಮಾಡಿದ್ದರು. ಜನೈ ಜೊತೆ ಸಿರಾಜ್ ನೋಡಿ ಜನರು ಸಿರಾಜ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದರು. ವದಂತಿ ವೇಗ ಪಡೆಯುತ್ತಿದ್ದಂತೆ ಸಿರಾಜ್ ಅದಕ್ಕೆ ಸ್ಪಷ್ಟನೆ ನೀಡಿದ್ದರು.
ವೇಗದ ಬೌಲರ್ ಸಿರಾಜ್, ನನ್ನ ಹಾಗೂ ಜನೈ ಮಧ್ಯೆ ಸಹೋದರ- ಸಹೋದರಿ ಸಂಬಂಧವಿದೆ ಎಂದು ಸ್ಪಷ್ಟಪಡಿಸಿದ್ದರು. ನನ್ನ ತಂಗಿಯಂತಹ ತಂಗಿ ಇನ್ನಿಲ್ಲ. ಅದಿಲ್ಲದೇ ನಾನು ಎಲ್ಲಿಯೂ ಬದುಕಲು ಸಾಧ್ಯವಿಲ್ಲ. ನಕ್ಷತ್ರಗಳ ನಡುವೆ ಚಂದ್ರ ಇದ್ದಂತೆ. ನನ್ನ ತಂಗಿ ಸಾವಿರದಲ್ಲಿ ಒಬ್ಬಳು ಎಂದು ಬರೆದಿದ್ದರು.
ಸ್ಮೃತಿ ಮಂಧನಾ ಬಳಿ 4 ಐಷಾರಾಮಿ ಕಾರುಗಳು, ಬೆಲೆ ಬಲು ದುಬಾರಿ!
ಅದಾದ್ಮೇಲೆ ಮೊಹಮ್ಮದ್ ಸಿರಾಜ್ ಹಾಕಿದ್ದ ಫೋಟೋಕ್ಕೆ ಜನೈ ನೀಡಿದ್ದ ರಿಯಾಕ್ಷನ್ ಗಮನ ಸೆಳೆದಿತ್ತು. ರಂಜಾನ್ ಮತ್ತು ಮುಂಬರುವ ಐಪಿಎಲ್ 2025 ಋತುವಿಗೆ ಮೊದಲು ಉಮ್ರಾ ನಿರ್ವಹಿಸಲು ಸಿರಾಜ್ ಮೆಕ್ಕಾಗೆ ಹೋಗಿದ್ದರು. ಫೆಬ್ರವರಿ 18 ರಂದು ಅವರು ತಮ್ಮ ಪ್ರವಾಸದ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಅಲ್ಹಮ್ದುಲಿಲ್ಲಾಹ್ ಎಂಬ ಶೀರ್ಷಿಕೆ ಹಾಕಿದ್ದರು. ಅದಕ್ಕೆ ಜನೈ ಭೋಸ್ಲೆ ಮೂರು ರೆಡ್ ಹಾರ್ಟ್ ಎಮೋಜಿ ಹಾಕಿದ್ದರು. ಇದು ನೆಟ್ಟಿಗರನ್ನು ಸೆಳೆದಿತ್ತು. ಈಗ ಮತ್ತೊಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಜನೈ ಅವರ ಚೊಚ್ಚಲ ಸಂಗೀತ ಆಲ್ಬಂನ ಕೆಹಂದಿ ಹೈ ಹಾಡಿನ ಸಾಲುಗಳನ್ನು ಇಬ್ಬರೂ ಹಾಡಿದ್ದಾರೆ. ನಮ್ಮಲ್ಲಿ ಅನೇಕರು ನಮ್ಮ ಕನಸುಗಳನ್ನು ಬೆನ್ನಟ್ಟಲು ಕಾರಣರಾದ ವ್ಯಕ್ತಿಗಾಗಿ ಎಂದು ಜನೈ ತಮ್ಮ ಪೋಸ್ಟ್ ಗೆ ಶೀರ್ಷಿಕೆ ಹಾಕಿದ್ದಾರೆ.
ಚಾಂಪಿಯನ್ಸ್ ಟ್ರೋಪಿಯಿಂದ ಹೊರಗಿರುವ ಸಿರಾಜ್, ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. ಮೆಗಾ ಹರಾಜಿನಲ್ಲಿ ತಂಡವು ಅವರನ್ನು 12.25 ಕೋಟಿ ರೂಪಾಯಿಗೆ ಖರೀದಿಸಿದೆ. ಸಿರಾಜ್ ಮಾರ್ಚ್ 25 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ತನ್ನ ಮೊದಲ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ.
