ಚಾಂಪಿಯನ್ಸ್ ಟ್ರೋಫಿ ಅಂದ್ರೆ ವಿರಾಟ್ ಕೊಹ್ಲಿಗೆ ಇಷ್ಟವಂತೆ! ಯಾಕೆ ಗೊತ್ತಾ?
ವಿರಾಟ್ ಕೊಹ್ಲಿ 2009 ರಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಪಾದಾರ್ಪಣೆ ಮಾಡಿದ್ರು, 2013 ಮತ್ತು 2017 ರಲ್ಲಿ ಎರಡು ಆವೃತ್ತಿಗಳಲ್ಲಿ ಆಡಿದ್ರು. ವಿರಾಟ್‌ಗೆ ಚಾಂಪಿಯನ್ಸ್ ಟ್ರೋಫಿ ಅಂದ್ರೆ ಯಾಕೆ ಇಷ್ಟ ಎನ್ನುವ ವಿಚಾರ ಬಾಯ್ಬಿಟ್ಟಿದ್ದಾರೆ.

ಚಿತ್ರ ಕೃಪೆ: ಗೆಟ್ಟಿ ಇಮೇಜಸ್
ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಚಾಂಪಿಯನ್ಸ್ ಟ್ರೋಫಿ ಇಷ್ಟವಾಗೋಕೆ ಕಾರಣ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾರತದ ಆಟದ ಬಗ್ಗೆ ವಿರಾಟ್ ಕೊಹ್ಲಿ ಒಂದಷ್ಟು ಮಾತಾಡಿದ್ದಾರೆ.
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತಾಡ್ತಾ, ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಅಂದ್ರೆ ಇಷ್ಟ ಅಂತ ಹೇಳಿದ್ದಾರೆ. ಯಾಕಂದ್ರೆ ಟಾಪ್ 8 ತಂಡಗಳು ಮಾತ್ರ ಆಡೋಕೆ ಸಾಧ್ಯ.
"ಟೂರ್ನಿ ತುಂಬಾ ದಿನಗಳ ನಂತರ ನಡೀತಿದೆ. ನನಗೆ ಈ ಟೂರ್ನಿ ಅಂದ್ರೆ ಇಷ್ಟ. ಟಾಪ್ 8 ರೊಳಗೆ ಇದ್ರೆ ಮಾತ್ರ ಆಡೋಕೆ ಸಿಗುತ್ತೆ. ಅದಕ್ಕೆ ಕಾಂಪಿಟೇಷನ್ ಚೆನ್ನಾಗಿರುತ್ತೆ" ಅಂತ ಕೊಹ್ಲಿ ಹೇಳಿದ್ದಾರೆ.
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
ಕೊಹ್ಲಿ ಚಾಂಪಿಯನ್ಸ್ ಟ್ರೋಫಿನ ಟಿ20 ವರ್ಲ್ಡ್ ಕಪ್ ಜೊತೆ ಹೋಲಿಸಿದ್ದಾರೆ. ಮೊದಲ ಮ್ಯಾಚ್ ಇಂದಾನೆ ಪ್ರೆಷರ್ ಇರುತ್ತೆ, ಅದಕ್ಕೆ ನನಗೆ ಇಷ್ಟ ಅಂತ ಹೇಳಿದ್ದಾರೆ.
"ಏಕದಿನ ಮಾದರಿಯಲ್ಲಿ ಟಿ20 ವರ್ಲ್ಡ್ ಕಪ್ ಥರ ಪ್ರೆಷರ್ ಇರುತ್ತೆ. ಅಲ್ಲಿ ಮೂರ್ನಾಲ್ಕು ಮ್ಯಾಚ್ ಇರುತ್ತೆ. ಚೆನ್ನಾಗಿ ಆಡಲಿಲ್ಲ ಅಂದ್ರೆ ಪ್ರೆಷರ್ ಜಾಸ್ತಿ ಆಗುತ್ತೆ. ಮೊದಲ ಮ್ಯಾಚ್ ಇಂದಾನೆ ಪ್ರೆಷರ್ ಇರುತ್ತೆ, ಅದಕ್ಕೆ ನನಗೆ ಇಷ್ಟ" ಅಂತ ಕೊಹ್ಲಿ ಹೇಳಿದ್ದಾರೆ.
ಚಿತ್ರ ಕೃಪೆ: ಟ್ವಿಟರ್/ಬಿಸಿಸಿಐ
ವಿರಾಟ್ ಕೊಹ್ಲಿ 2009 ರಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಎಂಟ್ರಿ ಕೊಟ್ಟಿದ್ರು. 2013 ಮತ್ತು 2017 ರಲ್ಲಿ ಆಡಿದ್ರು. 2013ರಲ್ಲಿ ಧೋನಿ ನಾಯಕತ್ವದಲ್ಲಿ ಟ್ರೋಫಿ ಗೆಲ್ಲೋಕೆ ಸಹಾಯ ಮಾಡಿದ್ರು. 2017 ರಲ್ಲಿ ಫೈನಲ್ ಗೆ ತಲುಪಿದ್ರು.
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರು. 11 ಮ್ಯಾಚ್ ಅಲ್ಲಿ 529 ರನ್ ಗಳಿಸಿದ್ದಾರೆ. 2017 ರಲ್ಲಿ ಬಾಂಗ್ಲಾದೇಶದ ವಿರುದ್ಧ 96 ರನ್ ಗಳಿಸಿದ್ರು.
ಚಿತ್ರ ಕೃಪೆ: ಗೆಟ್ಟಿ ಇಮೇಜಸ್
ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅರ್ಧ ಶತಕ ಗಳಿಸಿದ್ರು. ಓಡಿಐ ಫಾರ್ಮ್ಯಾಟ್ ಅಲ್ಲಿ 13,963 ರನ್ ಗಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.