ಜಗತ್ತಿನ ಎರಡನೇ ಶ್ರೀಮಂತ ಸ್ಪೋರ್ಟ್ಸ್ ತಂಡದ ಮಾಲೀಕ ಯಾರು ಗೊತ್ತಾ? ಅದಾನಿ, ಶಾರುಕ್ ಖಾನ್ ಅಲ್ಲವೇ ಅಲ್ಲ..!
ಜಗತ್ತಿನ ಹಲವು ಶ್ರೀಮಂತರು ಸ್ಪೋರ್ಟ್ಸ್ ತಂಡದ ಮಾಲೀಕರು
ಸ್ಪೋರ್ಟ್ಸ್ ತಂಡದ ಜಗತ್ತಿನ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ?
ನವದೆಹಲಿ(ಜು.30): ಜಾಗತಿಕ ಮಟ್ಟದಲ್ಲಿ ಕ್ರೀಡಾ ತಂಡಗಳ ಮಾಲೀಕರಾಗುವುದು ಕೋಟ್ಯಾಧೀಶರ ಪಾಲಿಗೆ ಒಂದು ರೀತಿ ಕ್ರೇಜ್ ಇದ್ದ ಹಾಗೆ. ಸೌದಿಯ ಶೇಖ್‌ಗಳಿಂದ ಹಿಡಿದು ಟೆಕ್ ಟೈಕೂನ್ಸ್‌ಗಳವರೆಗೆ ಜಗತ್ತಿನ ಕೆಲವು ಶ್ರೀಮಂತರು ಪ್ರಖ್ಯಾತ ಕ್ರೀಡಾ ತಂಡಗಳ ಮಾಲೀಕರೆನಿಸಿಕೊಂಡಿದ್ದಾರೆ. ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಸದ್ಯ ಕ್ರೀಡಾ ತಂಡದ ಮಾಲೀಕರಾಗಿರುವ ಜಗತ್ತಿನ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. 2023ನೇ ಸಾಲಿನ ಪೋರ್ಬ್ಸ್ ಹಾಗೂ ಅಂಕಿ-ಅಂಶಗಳ ವರದಿಯ ಪ್ರಕಾರ ಮುಕೇಶ್ ಅಂಬಾನಿ ಸ್ಪೋರ್ಟ್ಸ್ ತಂಡ ಹೊಂದಿದ ಜಗತ್ತಿನ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಮುಕೇಶ್ ಅಂಬಾನಿ(Mukesh Ambani) ಸದ್ಯ ಜಗತ್ತಿನ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿದ್ದಾರೆ. 2022ರ ವರದಿಯ ಪ್ರಕಾರ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಮೌಲ್ಯ 1.3 ಬಿಲಿಯನ್ ಅಮೆರಿಕನ್ ಡಾಲರ್ ಎನಿಸಿದೆ. ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯ 83.4 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಜಗತ್ತಿನ 9ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇನ್ನು ತುಂಬಾ ಕುತೂಹಲಕಾರಿ ಸಂಗತಿಯೆಂದರೆ, ಭಾರತದ ಮತ್ತೋರ್ವ ಬಿಲೇನಿಯರ್, ಗುಜರಾತ್ ಟೈಟಾನ್ಸ್ ತಂಡದ ಮಾಲೀಕರಾದ ಗೌತಮ್ ಅದಾನಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಧೋನಿ ಕೇವಲ ಹೆಸರಲ್ಲ, ಎಮೋಷನ್..! ಮಹಿ ವಿಮಾನದಲ್ಲಿ ನಿದ್ರಿಸುವಾಗ ವಿಡಿಯೋ ಮಾಡಿದ ಗಗನ ಸಖಿ..! ವಿಡಿಯೋ ವೈರಲ್
ಇನ್ನು ವಿಶ್ವದ ಎರಡನೇ ಶ್ರೀಮಂತ ಕ್ರೀಡಾ ತಂಡದ ಮಾಲೀಕ ಕೂಡಾ ಓರ್ವ ಬಿಲೇನಿಯರ್ ಆಗಿದ್ದು, ಅವರು ಟೆಕ್ ದಂತಕಥೆ ಬಿಲ್ ಗೇಟ್ಸ್(Bill Gates) ಅವರಿಂದ ಮೈಕ್ರೋಸಾಫ್ಟ್ ಸಂಸ್ಥೆಗೆ ನೇಮಕವಾಗಿದ್ದ ವ್ಯಕ್ತಿ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಹಾಗಂತ ಇರುವ ಸದ್ಯ ಮೈಕ್ರೋಸಾಫ್ಟ್(Microsoft) ಸಿಇಒ ಆಗಿರುವ ಸತ್ಯ ನಾದೆಲ್ಲಾ (Microsoft CEO Satya Nadella) ಅವರಲ್ಲ. ಆದರೆ ಇವರು ಸತ್ಯ ನಾದೆಲ್ಲಾ ಅವರಿಗಿಂತ ಹಿಂದೆ ಮೈಕ್ರೊಸಾಫ್ಟ್ ಸಿಇಒ ಆಗಿದ್ದ ಸ್ಟೀವ್ ಬಾಲ್ಮರ್(Steve Ballmer), ಜಗತ್ತಿನ ಎರಡನೇ ಶ್ರೀಮಂತ ಕ್ರೀಡಾ ತಂಡದ ಮಾಲೀಕರೆನಿಸಿದ್ದಾರೆ. ಬಾಲ್ಮರ್, 2014ರಲ್ಲಿ ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನಲ್ಲಿ ಲಾಸ್ ಏಂಜಲೀಸ್ ತಂಡವನ್ನು 2 ಬಿಲಿಯನ್ ಡಾಲರ್‌ಗೆ ಖರೀದಿಸಿದ್ದರು. ಬಾಲ್ಮರ್ ಸದ್ಯ, ಜಗತ್ತಿನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯ ನಂತರದ ಸ್ಥಾನದಲ್ಲಿದ್ದಾರೆ. ಅಂದರೆ ಸ್ಟೀವ್ ಬಾಲ್ಮರ್, ಜಗತ್ತಿನ 10ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಬಿಲ್ ಗೇಟ್ಸ್ ಹಾಗೂ ಪೌಲ್ ಎಲೆನ್ ಅವರು ಸ್ಥಾಪಿಸಿದ ಮೈಕ್ರೋಸಾಫ್ ಕಂಪನಿಯ ಸಿಇಒ ಆಗಿ ಬಾಲ್ಮರ್ 2000 ಇಸವಿಯಿಂದ 2014ರ ವರೆಗೆ ಕಾರ್ಯ ನಿರ್ವಹಿಸಿದ್ದರು. ಅವರು ಓರ್ವ ವಿಲಕ್ಷಣ ವ್ಯಕ್ತಿಯಾಗಿದ್ದು, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಡ್ರಾಫ್‌ಔಟ್ ಆಗಿ ಮೈಕ್ರೋಸಾಫ್ಟ್ ಸಂಸ್ಥೆಯ ಉದ್ಯೋಗಿಯಾದರು. ಸ್ಟೀವ್ ಬಾಲ್ಮರ್, ಮೈಕ್ರೋಸಾಫ್ಟ್ ಸಂಸ್ಥೆಯ 30ನೇ ಉದ್ಯೋಗಿಯಾಗಿದ್ದಾರೆ. ಇನ್ನೂ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಹಾವರ್ಡ್ ಯೂನಿವರ್ಸಿಟಿಯಲ್ಲಿ ಸ್ಟೀವ್ ಬಾಲ್ಮರ್, ಬಿಲ್ ಗೇಟ್ಸ್ ಅವರ ಕ್ಲಾಸ್‌ಮೇಟ್ ಆಗಿದ್ದರು.
ಏಕದಿನ ವಿಶ್ವಕಪ್‌ಗೆ ಈ ನಾಲ್ವರ ಪೈಕಿ ಯಾರಾಗಲಿದ್ದಾರೆ ಟೀಂ ಇಂಡಿಯಾ ವಿಕೆಟ್ ಕೀಪರ್?
ಇನ್ನು ಜಗತ್ತಿನ ಪ್ರಖ್ಯಾತ ಹಾಗೂ ಶ್ರೀಮಂತ ಸಿನಿಮಾ ತಾರೆ ಆಗಿರುವ ಶಾರುಕ್ ಖಾನ್ ಕೂಡಾ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿದ್ದಾರೆ. ಬಾಲಿವುಡ್ ಬಾದ್‌ಷಾ ಶಾರುಕ್ ಖಾನ್ ಅವರ ನಿವ್ವಳ ಆದಾಯ 770 ಮಿಲಿಯನ್ ಡಾಲರ್ ಆಗಿದೆ ಎಂದು ವರದಿಯಾಗಿದೆ. ಇನ್ನು ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಅಂದಾಜು ಮೌಲ್ಯ 1.1 ಬಿಲಿಯನ್ ಡಾಲರ್ ಆಗಿದೆ ಎಂದು ವರದಿಯಾಗಿದೆ.