ಧೋನಿ ಕೇವಲ ಹೆಸರಲ್ಲ, ಎಮೋಷನ್..! ಮಹಿ ವಿಮಾನದಲ್ಲಿ ನಿದ್ರಿಸುವಾಗ ವಿಡಿಯೋ ಮಾಡಿದ ಗಗನ ಸಖಿ..! ವಿಡಿಯೋ ವೈರಲ್
* ಪ್ಲೈಟ್‌ನಲ್ಲಿ ನಿದ್ರಿಸುತ್ತಿರುವ ಧೋನಿ ವಿಡಿಯೋ ವೈರಲ್
* ಗುಟ್ಟಾಗಿ ಧೋನಿ ವಿಡಿಯೋ ಸೆರೆ ಹಿಡಿದ ಗಗನ ಸಖಿ
* ಗಗನ ಸಖಿ ನಡೆಯ ಬಗ್ಗೆ ಪರ-ವಿರೋಧ ಚರ್ಚೆ
ನವದೆಹಲಿ(ಜು.30): ಭಾರತ ಕ್ರಿಕೆಟ್ ಕಂಡದಂತ ದಿಗ್ಗಜ ಆಟಗಾರ ಮಹೇಂದ್ರ ಸಿಂಗ್ ಧೋನಿಗೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿಯ ದೈನಂದಿನ ಜೀವನದ ಝಲಕ್‌ಗಳನ್ನು ತಿಳಿದುಕೊಳ್ಳಲು ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಯಾವಾಗೆಲ್ಲಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನ ಫೋಟೋ/ವಿಡಿಯೋ ಬೆಳಕಿಗೆ ಬರುತ್ತದೋ ಅವೆಲ್ಲವೂ ಕೆಲವೇ ಗಂಟೆಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಹೋಗುತ್ತದೆ.
ಸಾಮಾನ್ಯವಾಗಿ ವೈಯುಕ್ತಿಕ ಜೀವನದಲ್ಲಿ ಸಿಂಪಲ್ ಆಗಿ ಜೀವನ ನಡೆಸುವ ಎಂ ಎಸ್ ಧೋನಿ, ಕ್ರಿಕೆಟ್ ಇಲ್ಲದ ಸಂದರ್ಭದಲ್ಲಿ ಕ್ಯಾಪ್ಟನ್ ಕೂಲ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುತ್ತಲೇ ಬಂದಿದ್ದಾರೆ. ಹೀಗಾಗಿ ಧೋನಿಯ ವೈಯುಕ್ತಿಕ ಜೀವನದಲ್ಲಿ ಏನೇನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಧೋನಿ ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗಾಗಿಯೇ ತಮ್ಮ ನೆಚ್ಚಿನ ಕ್ರಿಕೆಟಿಗನ ಫೋಟೋ/ವಿಡಿಯೋ ಕಂಡು ಪ್ರೀತಿಯಿಂದ ಸಂಭ್ರಮಿಸುತ್ತಾರೆ. ಧೋನಿಗೆ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಅಪಾರ ಅಭಿಮಾನಿಗಳಿದ್ದಾರೆ. ಅದೇ ರೀತಿ ಇತ್ತೀಚೆಗೆ ಎಂ ಎಸ್ ಧೋನಿ ವಿಮಾನದಲ್ಲಿ ಪ್ರಯಾಣಿಸುವ ವೇಳೆಯಲ್ಲಿ ನಿದ್ರೆ ಮಾಡುತ್ತಿದ್ದಾಗ, ಗಗನ ಸಖಿ ಗುಟ್ಟಾಗಿ ಧೋನಿಯ ವಿಡಿಯೋ ಸೆರೆಹಿಡಿದು ಸಂಭ್ರಮಿಸಿದ್ದಾರೆ.
ಏಕದಿನ ವಿಶ್ವಕಪ್‌ಗೆ ಮಳೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್!
ಇನ್ನು ಗಗನ ಸಖಿ ಸರೆ ಹಿಡಿದಿರುವ ಈ ವಿಡಿಯೋ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆ ಆರಂಭವಾಗಿದೆ. ಕೆಲವರು ಇದು ಧೋನಿಯ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮತ್ತೆ ಕೆಲವರು ಅಪರೂಪಕ್ಕೆ ಧೋನಿಯ ದರ್ಶನ ಭಾಗ್ಯ ಸಿಕ್ಕಿದ್ದನ್ನು ಸಂಭ್ರಮಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ನಡೆದ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಈ ಟೂರ್ನಿಯ ಸಂದರ್ಭದಲ್ಲಿ ಮೊಣಕಾಲಿನ ನೋವಿಗೆ ಒಳಗಾಗಿದ್ದ ಧೋನಿ, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇನ್ನು ಸಿಎಸ್‌ಕೆ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಧೋನಿ ನಿವೃತ್ತಿ ಘೋಷಿಸಬಹುದು ಎನ್ನುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಈ ಕುರಿತಂತೆ ತುಟಿಬಿಚ್ಚಿದ್ದ ಧೋನಿ, ಮುಂದಿನ ಐಪಿಎಲ್‌ಗೆ ಇನ್ನೂ 8-10 ತಿಂಗಳು ಕಾಲಾವಕಾಶವಿದೆ ಎಂದು ಹೇಳುವ ಮೂಲಕ ಇನ್ನೂ ಕನಿಷ್ಠ ಒಂದು ಐಪಿಎಲ್ ಟೂರ್ನಿ ಆಡುವ ಸುಳಿವು ನೀಡಿದ್ದರು.
Breaking News: ವಿಶ್ವಕಪ್ ವೇಳಾಪಟ್ಟಿಯಲ್ಲಿ ಶೀಘ್ರ ಬದಲಾವಣೆ: ಜಯ್ ಶಾ
42 ವರ್ಷದ ಕ್ರಿಕೆಟಿಗ ಎಂ ಎಸ್ ಧೋನಿ ಕಳೆದ 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ವಾರ್ಷಿಕ 12 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾ ಬಂದಿದ್ದಾರೆ.
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಹೊರತಾಗಿಯೂ ಟ್ಯಾಕ್ಸ್ ಕಟ್ಟುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಜಾರ್ಖಂಡ್ ರಾಜ್ಯದ ಅತ್ಯಂತ ಹೆಚ್ಚು ತೆರಿಗೆ ಕಟ್ಟುವ ವ್ಯಕ್ತಿ ಎನಿಸಿಕೊಳ್ಳುತ್ತಲೇ ಬಂದಿದ್ದಾರೆ.