Asianet Suvarna News Asianet Suvarna News

ವಿಂಡೀಸ್‌ ಏಕ​ದಿನ ಸರ​ಣಿಗೆ ಮಯಾಂಕ್‌ಗೆ ಚಾನ್ಸ್?

ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಕಮಾಲ್ ಮಾಡಿರುವ ಮಯಾಂಕ್ ಅಗರ್‌ವಾಲ್ ಭಾರತ ಪರ ಬ್ಲೂ ಜೆರ್ಸಿ ತೊಡಲು ರೆಡಿಯಾಗಿದ್ದಾರೆ. ಮುಂಬರುವ ವಿಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಮಯಾಂಕ್‌ ಅಗರ್‌ವಾಲ್ ಆಯ್ಕೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Mayank Agarwal may gets chance against Windies Series
Author
New Delhi, First Published Nov 18, 2019, 10:19 AM IST
  • Facebook
  • Twitter
  • Whatsapp

"

ನವ​ದೆ​ಹ​ಲಿ​[ನ.18]: ಟೆಸ್ಟ್‌ನಲ್ಲಿ ಆಕ್ರ​ಮ​ಣ​ಕಾರಿ ಆಟದೊಂದಿಗೆ ಗಮನ ಸೆಳೆ​ದಿ​ರುವ ಮಯಾಂಕ್‌ ಅಗರ್‌ವಾಲ್‌ರನ್ನು ಮುಂದಿನ ತಿಂಗಳು ವೆಸ್ಟ್‌ಇಂಡೀಸ್‌ ವಿರುದ್ಧ ನಡೆ​ಯ​ಲಿ​ರುವ ಏಕ​ದಿನ ಸರ​ಣಿಗೆ ಆಯ್ಕೆ ಮಾಡುವ ನಿರೀಕ್ಷೆ ಇದೆ. ಬಿಸಿ​ಸಿಐ ಅಂಗ​ಳ​ದಲ್ಲಿ ಅವರ ಆಯ್ಕೆ ಬಗ್ಗೆ ಚರ್ಚೆ ಶುರು​ವಾ​ಗಿದೆ ಎಂದು ಮೂಲ​ಗಳು ತಿಳಿ​ಸಿವೆ. 

INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!

ಸತತವಾಗಿ ಕ್ರಿಕೆಟ್‌ ಆಡುತ್ತಿ​ರುವ ಉಪ​ನಾ​ಯಕ ರೋಹಿತ್‌ ಶರ್ಮಾ, ಮುಂದಿನ ವರ್ಷ ನ್ಯೂಜಿ​ಲೆಂಡ್‌ ಪ್ರವಾಸಕ್ಕೂ ಮುನ್ನ ವಿಶ್ರಾಂತಿ ತೆಗೆ​ದು​ಕೊ​ಳ್ಳುವ ಸಾಧ್ಯತೆ ಇದ್ದು, ಅವರ ಸ್ಥಾನ​ವ​ನ್ನು ಮಯಾಂಕ್‌ಗೆ ನೀಡುವ ನಿರೀಕ್ಷೆ ಇದೆ. ಮುಂದಿನ ತಿಂಗಳು 15ರಿಂದ ವಿಂಡೀಸ್‌ ವಿರುದ್ಧ 3 ಪಂದ್ಯ​ಗಳ ಏಕ​ದಿನ ಸರಣಿ ಆರಂಭ​ಗೊ​ಳ್ಳಲಿದೆ. ಶಿಖರ್‌ ಧವನ್‌ ಲಯ ಕಳೆ​ದು​ಕೊಂಡಿರುವ ಕಾರಣ, ಅವರ ಬದ​ಲಿಗೆ ಮಯಾಂಕ್‌ ಸ್ಥಾನ ಗಳಿ​ಸಬಹುದು ಎನ್ನುವ ಮಾತು ಸಹ ಕೇಳಿ​ಬ​ರು​ತ್ತಿದೆ. 2023ರ ಏಕ​ದಿನ ವಿಶ್ವ​ಕಪ್‌ ಅನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಮಯಾಂಕ್‌ಗೆ ಅವ​ಕಾಶ ನೀಡು​ವುದು ಸೂಕ್ತ. 2019ರ ಏಕ​ದಿನ ವಿಶ್ವ​ಕಪ್‌ ವೇಳೆ ಗಾಯಾಳು ವಿಜಯ್‌ ಶಂಕರ್‌ ಬದ​ಲಿಗೆ ಮಯಾ​ಂಕ್‌ರನ್ನು ಆಯ್ಕೆ ಮಾಡ​ಲಾ​ಗಿತ್ತು.

ಮುಷ್ತಾಕ್ ಅಲಿ ಟ್ರೋಫಿ: ಗೋವಾ ಮಣಿಸಿ ಸೂಪರ್‌ ಲೀಗ್‌ ಪ್ರವೇಶಿಸಿದ ಕರ್ನಾಟಕ

ಬಿಸಿ​ಸಿಐ ಆಯ್ಕೆಗಾರರು ಕರ್ನಾ​ಟಕ ಬ್ಯಾಟ್ಸ್‌ಮನ್‌ ಏಕ​ದಿನ ಮಾದ​ರಿಗೂ ಹೊಂದಿ​ಕೊ​ಳ್ಳುವ ಆಟ​ಗಾರ ಎಂದು ಗುರುತಿ​ಸಿ​ದ್ದಾರೆ ಎಂದು ತಜ್ಞರು ವಿಶ್ಲೇ​ಷಿ​ಸಿ​ದ್ದಾರೆ. ಲಿಸ್ಟ್‌ ‘ಎ’ ಮಾದ​ರಿ​ಯಲ್ಲಿ ಮಯಾಂಕ್‌ 13 ಶತಕ ಸಿಡಿ​ಸಿದ್ದು, 50ಕ್ಕಿಂತಲೂ ಹೆಚ್ಚಿನ ಸರಾ​ಸರಿ, 100ಕ್ಕೂ ಹೆಚ್ಚು ಸ್ಟ್ರೈಕ್’ರೇಟ್‌ ಹೊಂದಿ​ದ್ದಾರೆ. 2020ರ ಐಪಿ​ಎಲ್‌ನಲ್ಲಿ ಅವರ ಆಟ ನೋಡಿ​ಕೊಂಡು ಮುಂದಿನ ವರ್ಷ ಟಿ20 ವಿಶ್ವ​ಕಪ್‌ಗೂ ಅವರನ್ನು ಆಯ್ಕೆ ಮಾಡ​ಬ​ಹುದು ಎನ್ನ​ಲಾ​ಗಿ​ದೆ.
 

Follow Us:
Download App:
  • android
  • ios