Asianet Suvarna News Asianet Suvarna News

ಜಗತ್ತಿನ ದಿಗ್ಗಜ ಕ್ರಿಕೆಟಿಗರೆನಿಸಿಕೊಂಡರೂ ಫೀಲ್ಡಿಂಗ್‌ನಲ್ಲಿ ಫುಲ್ ಫೇಲ್; ಈ ಪಟ್ಟಿಯಲ್ಲಿದ್ದಾರೆ ಭಾರತದ ಮಾಜಿ ನಾಯಕ..!

ಕ್ರಿಕೆಟ್‌ ಜಗತ್ತಿನ ದಿಗ್ಗಜ ಆಟಗಾರರು ಫೀಲ್ಡಿಂಗ್ ವಿಚಾರಕ್ಕೆ ಬಂದರೆ ಫೇಲ್. ಯಾರವರು ನೋಡೋಣ ಬನ್ನಿ

Lasith Malinga to Sourav Ganguly Top 8 legendry cricketers are laziest fielders in Cricket history kvn
Author
First Published Aug 26, 2024, 4:33 PM IST | Last Updated Aug 26, 2024, 4:33 PM IST

ಬೆಂಗಳೂರು: ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಹಾಗೂ ಬೌಲರ್‌ಗಳಿಗೆ ಎಷ್ಟು ಮಹತ್ವವಿದೆಯೋ ಅದೇ ರೀತಿ ಫೀಲ್ಡರ್‌ಗಳಿಗೂ ಕೂಡಾ ಅಷ್ಟೇ ಪ್ರಾಮುಖ್ಯತೆ ಇದೆ. ಒಂದು ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿಬಿಡಬಹುದು. ಅದೇ ರೀತಿ ಒಂದು ಕಳಪೆ ಕ್ಷೇತ್ರರಕ್ಷಣೆಯಿಂದಾಗಿ ಪಂದ್ಯವೇ ಕೈಜಾರಿ ಹೋದಂತ ಸಾಕಷ್ಟು ನಿರ್ದಶನಗಳು ಕ್ರಿಕೆಟ್ ಅಭಿಮಾನಿಗಳ ಕಣ್ಣಮುಂದೆಯೇ ಇದೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಿಗ್ಗಜ ಆಟಗಾರರು ಎಂದು ಗುರುತಿಸಿಕೊಂಡ ಕೆಲವು ಆಟಗಾರರು ಫೀಲ್ಡಿಂಗ್ ವಿಚಾರಕ್ಕೆ ಬಂದರೆ ಯಶಸ್ವಿಯಾಗಿದ್ದಕ್ಕಿಂತ ವೈಪಲ್ಯ ಅನುಭವಿಸಿದ್ದೇ ಹೆಚ್ಚು. ಮಂದಗತಿಯ ಕ್ಷೇತ್ರ ರಕ್ಷಣೆಯ ಮೂಲಕ ಕೆಲವು ದಿಗ್ಗಜ ಕ್ರಿಕೆಟಿಗರು ಮುಜುಗರಕ್ಕೆ ಒಳಗಾದ ಇತಿಹಾಸವೂ ಕಣ್ಣ ಮುಂದಿದೆ. ಬನ್ನಿ ನಾವಿಂದು ಫೀಲ್ಡಿಂಗ್ ವಿಭಾಗದಲ್ಲಿ ಕಳಪೆ ಎನಿಸಿಕೊಂಡ ಜಗತ್ತಿನ ಟಾಪ್ 8 ಆಟಗಾರರು ಯಾರು ಎನ್ನುವುದನ್ನು ನೋಡೋಣ. ಅಂದಹಾಗೆ ಈ ಪಟ್ಟಿಯಲ್ಲಿ ಓರ್ವ ಟೀಂ ಇಂಡಿಯಾ ಮಾಜಿ ನಾಯಕ ಇದ್ದಾರೆ.

ವಿಶ್ವದ ಕಿರಿಯ ಅಜ್ಜನಾದೆ ಎನ್ನುತ್ತಿದ್ದಾರೆ ಪಾಕ್‌ನ ಈ ದಿಗ್ಗಜ ಕ್ರಿಕೆಟರ್..!

1. ಲಸಿತ್ ಮಾಲಿಂಗ;

ಡೆತ್ ಓವರ್ ಸ್ಪೆಷಲಿಸ್ಟ್ ಹಾಗೂ ಯಾರ್ಕರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದ ಲಂಕಾದ ದಿಗ್ಗಜ ವೇಗಿ ಲಸಿತ್ ಮಾಲಿಂಗ, ಫೀಲ್ಡಿಂಗ್ ವಿಚಾರದಲ್ಲಿ ಸಾಕಷ್ಟು ವೈಪಲ್ಯ ಅನುಭವಿಸಿ ಟೀಕೆಗೆ ಗುರಿಯಾಗಿದ್ದರು.

2. ಇಂಜಮಾಮ್ ಉಲ್ ಹಕ್:

ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ದೈತ್ಯ ಆಟಗಾರನಾಗಿದ್ದರು. ಕ್ಷೇತ್ರರಕ್ಷಣೆಯ ವೇಳೆ ಕ್ಯಾಚ್ ಹಾಗೂ ಬೌಂಡರಿ ತಡೆಯುವ ವಿಚಾರದಲ್ಲಿ ತುಂಬಾ ಲೇಜಿಯಾಗಿರುತ್ತಿದ್ದರು.

3. ಮುತ್ತಯ್ಯ ಮುರುಳೀಧರನ್: 

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿರುವ ಲಂಕಾದ ದಿಗ್ಗಜ ಆಫ್‌ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್, ಕ್ಷೇತ್ರರಕ್ಷಣೆಯಲ್ಲಿ ಚುರುಕಾಗಿರುತ್ತಿದ್ದರಾದರೂ, ಕ್ಯಾಚ್ ಹಿಡಿಯುವಾಗ ಗಲಿಬಿಲಿಗೊಳಗಾಗಿ ಸಾಕಷ್ಟು ಬಾರಿ ಕ್ಯಾಚ್ ಕೈಚೆಲ್ಲಿದ್ದನ್ನು ನಾವೆಲ್ಲರೂ ನೋಡಿದ್ದೇವೆ.

4. ಸಯೀದ್ ಅಜ್ಮಲ್:

ಪಾಕಿಸ್ತಾನದ ದೂಸ್ರಾ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದ ವಿವಾದಾತ್ಮಕ ಆಫ್‌ಸ್ಪಿನ್ನರ್ ಸಯೀದ್ ಅಜ್ಮಲ್, ಬೌಲಿಂಗ್‌ನಲ್ಲಿ ಸಿಕ್ಕಷ್ಟು ಯಶಸ್ಸು ಫೀಲ್ಡಿಂಗ್‌ನಲ್ಲಿ ಸಿಗಲೇ ಇಲ್ಲ. ಅಜ್ಮಲ್ ಕೂಡಾ ಫೀಲ್ಡಿಂಗ್‌ನಲ್ಲಿ ತುಂಬಾ ವೀಕ್ ಎನ್ನುವ ವಿಚಾರ ಗುಟ್ಟಾಗಿಯೇನೂ ಉಳಿದಿಲ್ಲ.

ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರಿಗೆ 5ನೇ ಜಯ: ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ

5. ಶೋಯೆಬ್ ಅಖ್ತರ್

ಪಾಕಿಸ್ತಾನದ ಮಾರಕ ವೇಗಿ ಎನಿಸಿಕೊಂಡಿದ್ದ ಶೋಯೆಬ್ ಅಖ್ತರ್, ಒಂದು ಕಾಲದಲ್ಲಿ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಬೌಲರ್. ಆದರೆ ಫೀಲ್ಡಿಂಗ್‌ನಲ್ಲಿ ಮಾತ್ರ ತುಂಬಾ ಕಳಪೆ ಪ್ರದರ್ಶನ ತೋರುವ ಮೂಲಕ ತಂಡದ ಪಾಲಿಗೆ ದುಬಾರಿಯಾಗುತ್ತಿದ್ದರು.

6. ಮಾರ್ನೆ ಮಾರ್ಕೆಲ್:

ದಕ್ಷಿಣ ಆಫ್ರಿಕಾದ ಆಟಗಾರರು ಸಾಮಾನ್ಯವಾಗಿ ಅಮೋಘ ಕ್ಷೇತ್ರರಕ್ಷಣೆ ಮಾಡುತ್ತಾ ಬಂದಿರುವುದನ್ನು ನೋಡಿದ್ದೇವೆ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಹರಿಣಗಳ ತಂಡದಲ್ಲಿದ್ದ ನೀಳಕಾಯದ ವೇಗಿ ಮಾರ್ನೆ ಮಾರ್ಕೆಲ್ ಫೀಲ್ಡಿಂಗ್‌ನಲ್ಲಿ ಮಹತ್ವದ ಘಟ್ಟದಲ್ಲಿ ಹಲವು ಕ್ಯಾಚ್ ಕೈಚೆಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

7. ಸೌರವ್ ಗಂಗೂಲಿ:

ಟೀಂ ಇಂಡಿಯಾ ದಿಗ್ಗಜ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಸೌರವ್ ಗಂಗೂಲಿ, ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಬಾರಿಸಿದ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಆದರೆ ಫೀಲ್ಡಿಂಗ್ ವಿಚಾರಕ್ಕೆ ಬಂದರೆ ದಾದಾ ಕೊಂಚ ಮಂದ ಎನಿಸಿಕೊಂಡಿದ್ದಾರೆ.

8. ಗ್ಲೆನ್ ಮೆಗ್ರಾತ್: 

ಆಸ್ಟ್ರೇಲಿಯಾದ ದಿಗ್ಗಜ ವೇಗದ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಗ್ಲೆನ್ ಮೆಗ್ರಾತ್ ಕೂಡಾ ದಶಕಗಳ ಕಾಲ ಎದುರಾಳಿ ಬ್ಯಾಟರ್‌ಗಳನ್ನು ತಮ್ಮ ಮೊನಚಾದ ದಾಳಿಯ ಮೂಲಕ ಕಾಡಿದ್ದರು. ಹೀಗಿದ್ದೂ ಮೆಗ್ರಾತ್ ಬೌಲಿಂಗ್‌ನಲ್ಲಿ ಕಂಡಷ್ಟು ಯಶಸ್ಸು ಫೀಲ್ಡಿಂಗ್‌ನಲ್ಲಿ ಸಿಗಲಿಲ್ಲ.
 

Latest Videos
Follow Us:
Download App:
  • android
  • ios