Asianet Suvarna News Asianet Suvarna News

ಲೀಗ್ ಕ್ರಿಕೆಟ್‌ಗೆ ಎಂಟ್ರಿಕೊಟ್ಟ ದ್ರಾವಿಡ್ ಪುತ್ರ ಸಮಿತ್..! ಮೊದಲ ಪಂದ್ಯದಲ್ಲಿ ಗಳಿಸಿದ ಸ್ಕೋರ್ ಎಷ್ಟು?

ಕ್ರಿಕೆಟ್ ಲೆಜೆಂಡ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಮಹಾರಾಜ ಟಿ20 ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ. ಮೈಸೂರು ವಾರಿಯರ್ಸ್ ಪರ ಸಮಿತ್ ಕಣಕ್ಕಿಳಿದಿದ್ದಾರೆ

KSCA Maharaja T20 Samit Dravid debut for Mysore Warriors score 7 runs against Shivamogga Lions kvn
Author
First Published Aug 16, 2024, 1:34 PM IST | Last Updated Aug 16, 2024, 1:34 PM IST

ಬೆಂಗಳೂರು: ಅಪ್ಪ ಭಾರತೀಯ ಕ್ರಿಕೆಟ್‌ನ  ಒನ್ ಆಫ್ ದಿ ಗ್ರೇಟ್ ಬ್ಯಾಟರ್‌ . ಟೀಂ ಇಂಡಿಯಾಗೆ ವಿಶ್ವಕಪ್ ಗೆದ್ದು ಕೊಟ್ಟ ಗ್ರೇಟ್ ಕೋಚ್. ಈಗ ಈ ಮಾಜಿ ಆಟಗಾರನ ಮಗ ಕೂಡ ತಂದೆಯ ಹಾದಿಯಲ್ಲಿ ಸಾಗಲು ರೆಡಿಯಾಗಿದ್ದಾರೆ. ಅಷ್ಟಕ್ಕೂ ನಾವು ಯಾರ ಬಗ್ಗೆ ಹೇಳ್ತೀದ್ದೀವಿ ಅನ್ಕೊಂಡ್ರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ...!

ಮಹಾರಾಜ ಟ್ರೋಫಿಗೆ ಸಮಿತ್ ದ್ರಾವಿಡ್ ಎಂಟ್ರಿ..!

ರಾಹುಲ್ ದ್ರಾವಿಡ್..! ಕ್ರಿಕೆಟ್ ದುನಿಯಾದ ಲೆಜೆಂಡ್‌ಗಳಲ್ಲಿ ಒಬ್ರು. ಅದರಲ್ಲೂ ಟೆಸ್ಟ್ ಕ್ರಿಕೆಟ್ ಅಂದ್ರೆ ಮೊದಲು ನೆನಪಾಗೋದೆ ದ್ರಾವಿಡ್.!  ತಮ್ಮ ಕ್ರಿಕೆಟ್ ಕರಿಯರ್‌ನಲ್ಲಿ ದ್ರಾವಿಡ್, ಹಲವು ದಾಖಲೆಗಳನ್ನ ಬರೆದಿದ್ದಾರೆ. ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ಗೋಡೆಯಂತೆ ನಿಂತು, ಅದ್ಭುತ ಬ್ಯಾಟಿಂಗ್‌ನಿಂದ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈಗ ದ್ರಾವಿಡ್ ಮಗ ಸಮಿತ್ ಕೂಡ ತಂದೆಯ ಹಾದಿಯಲ್ಲಿ ಹೆಜ್ಜೆ ಸಾಗಲು ರೆಡಿಯಾಗಿದ್ದಾರೆ. ಲೀಗ್ ಕ್ರಿಕೆಟ್ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ. 

ಈ ವರ್ಷ ಭಾರತದಲ್ಲೇ ನಡೆಯುತ್ತಾ ಮಹಿಳಾ ಟಿ20 ವಿಶ್ವಕಪ್‌?: ಅಪ್‌ಡೇಟ್‌ ಕೊಟ್ಟ ಜಯ್ ಶಾ..!

ಯೆಸ್, ನಿನ್ನೆಯಿಂದ KSCA ಮಹಾರಾಜ ಟ್ರೋಫಿ T20 ಟೂರ್ನಿ ಆರಂಭವಾಗಿದೆ. ಈ ಟೂರ್ನಿ ಮೂಲಕ ಸಮಿತ್, ಲೀಗ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಮೈಸೂರು ವಾರಿಯರ್ಸ್ - ಶಿವಮೊಗ್ಗ ಲಯನ್ಸ್ ನಡುವಿನ ಪಂದ್ಯದಲ್ಲಿ, ಮೈಸೂರು ವಾರಿಯರ್ಸ್ ಪರ ಸಮಿತ್  ಕಣಕ್ಕಿಳಿದ್ರು 4ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದು  ಕೇವಲ 7 ರನ್ಗಳಿಸಿ ಔಟಾದ್ರು.  

ಕರ್ನಾಟಕ ಅಂಡರ್ 19 ತಂಡದ ಪರ ಅದ್ಭುತ ಪ್ರದರ್ಶನ..!

18 ವರ್ಷದ ಸಮಿತ್ ಈಗಾಗಲೇ ಕರ್ನಾಟಕ ಅಂಡರ್-19 ತಂಡದ ಪರ ಅದ್ಭುತ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಬ್ಯಾಟಿಂಗ್ ಆಲ್ರೌಂಡರ್ ಆಗಿರೋ ಸಮಿತ್, ಇದೇ ವರ್ಷ ನಡೆದ ಕೂಚ್ ಬೆಹರ್ ಟೂರ್ನಿಯಲ್ಲಿ ಬ್ಯಾಟಿಂಗ್ ಆ್ಯಂಡ್ ಬೌಲಿಂಗ್ ಎರಡರಲ್ಲೂ ಮಿಂಚಿದ್ರು. ಇದೇ ಕಾರಣಕ್ಕೆ, ಮಹಾರಾಜ ಟೂರ್ನಿ ಮೆಗಾ ಆಕ್ಷನ್ನಲ್ಲಿ ಮೈಸೂರು ವಾರಿಯರ್ಸ್ 50 ಸಾವಿರಕ್ಕೆ ಸಮಿತ್ರನ್ನ ಖರೀದಿಸಿತ್ತು. 

ಭಾರತ-ಲಂಕಾ ನಡುವೆ ಸೂಪರ್ ಓವರ್ ನಡೆಸಲು ಅಂಪೈರ್ಸ್ ಮರೆತಿದ್ದರಂತೆ! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್‌

ಮುಂದಿನ ಪಂದ್ಯಗಳಲ್ಲಿ ಸಾಮರ್ಥ್ಯ ಪ್ರೂ ಮಾಡ್ತಾರಾ ಸಮಿತ್..?

ದ್ರಾವಿಡ್ 18 ವರ್ಷಕ್ಕೇನೆ ಕರ್ನಾಟಕ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದ್ರು. ಈಗ ಸಮಿತ್ 19 ವರ್ಷಕ್ಕೆ ಲೀಗ್ ಕ್ರಿಕೆಟ್‌ಗೆ ಕಾಲಿಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ಸಮಿತ್ ಫೇಲಾದ್ರೂ, ಇನ್ನು ಹಲವು ಪಂದ್ಯಗಳು ಬಾಕಿಯಿವೆ. ಮುಂದಿನ ಪಂದ್ಯಗಳಲ್ಲಿ ಸಮಿತ್ ತಮ್ಮ ಸಾಮರ್ಥ್ಯ ಪ್ರೂವ್ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Latest Videos
Follow Us:
Download App:
  • android
  • ios