KPL ಮ್ಯಾಚ್ ಫಿಕ್ಸಿಂಗ್: ಪ್ರಮುಖ ಕ್ರಿಕೆಟಿಗರಿಗೆ ಗಂಡಾಂತರ..?
ಕರ್ನಾಟಕ ಪ್ರೀಮಿಯರ್ ಲೀಗ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲಾ ಆಟಗಾರರ ಎದೆಯಲ್ಲಿ ಢವ ಢವ ಶುರುವಾಗಿದೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಬೆಂಗಳೂರು[ನ.28]: ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕರ್ನಾಟಕದ ಪ್ರಮುಖ ಆಟಗಾರರು ಈ ಪ್ರಕರಣದ ಸುಳಿಗೆ ಸಿಲುಕುವ ಸಾಧ್ಯತೆಯಿದೆ ಎಂದು ಸಿಸಿಬಿ ಮೂಲಗಳು ಸುವರ್ಣ ನ್ಯೂಸ್ ಗೆ ತಿಳಿಸಿವೆ.
KPL ಮ್ಯಾಚ್ ಫಿಕ್ಸಿಂಗ್: CCB ನೋಟಿಸ್, ಅಂತಾರಾಷ್ಟ್ರೀಯ ಕ್ರಿಕೆಟಿಗನ ಎದೆಯಲ್ಲಿ ಢವ ಢವ..!
ಇದೀಗ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಬೆಂಗಳೂರಿನ ಸಿಸಿಬಿ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ಮುಂದುವರೆಸಿದ್ದು, ಟೂರ್ನಿಯಲ್ಲಿ ಪಾಲ್ಗೊಂಡ 7 ತಂಡಗಳ ಪ್ರಮುಖ ಆಟಗಾರರು ಸೇರಿದಂತೆ ನೂರಕ್ಕೂ ಹೆಚ್ಚು ಆಟಗಾರರನ್ನು ವಿಚಾರಣೆಗೊಳಪಡಿಸಲು ಮುಂದಾಗಿದೆ. ಈಗಾಗಲೇ ಕೆಲ ತಂಡಗಳ ಮಾಲೀಕರನ್ನು ವಿಚಾರಣೆಗೊಳಪಡಿಸಿರುವ ಸಿಸಿಬಿ ಪೋಲಿಸರು, ಮುಂದುವರಿದ ಭಾಗವಾಗಿ ಪ್ರತಿ ಆಟಗಾರರ ಹೇಳಿಕೆ ಪಡೆಯಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಹಿರಿಯ ಆಟಗಾರರಿಂದ ಬೆಟ್ಟಿಂಗ್ ಕೃತ್ಯ; ವಿಚಾರಣೆ ಬಳಿಕ ಬುಲ್ಸ್ ಮಾಲೀಕನ ಹೇಳಿಕೆ!
ವರದಿ ಕೇಳಿದ ಐಸಿಸಿ:
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ತನಿಖೆ ಚುರುಕುಗೊಂಡ ಬೆನ್ನಲ್ಲೇ, ಸಿಸಿಬಿ ಮೇಲೆ ಒತ್ತಡ ಹೇರುವಂತಹ ಕೆಲಸ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೀಗ ಸಿಸಿಬಿ ಬೆನ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ[ICC] ನಿಂತಿದ್ದು, ಸಿಸಿಬಿ ತನಿಖೆಗೆ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಖಡಕ್ ಸೂಚನೆ ರವಾನಿಸಿದೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಈವರೆಗೆ ನಡೆದಿರುವ ತನಿಖಾ ವರದಿ ಸಲ್ಲಿಸುವಂತೆ ಸಿಸಿಬಿಗೆ ಐಸಿಸಿ ವರದಿ ಕೇಳಿದೆ. ಐಸಿಸಿ ನೀಡಿದ ಕೆಲ ಸೂಕ್ಷ್ಮ ಮಾಹಿತಿ ಅನ್ವಯ ತನಿಖೆ ಚುರುಕುಗೊಂಡಿದ್ದು, ದೊಡ್ಡ-ದೊಡ್ಡ ತಲೆಗಳೇ ಉರುಳುವ ಸೂಚನೆಯನ್ನು ಸಿಸಿಬಿ ಅಧಿಕಾರಿಗಳು ನೀಡಿದ್ದಾರೆ.