Icc  

(Search results - 831)
 • ICC T20 World Cup 3 days eyes on 2 Spot in Qualifier Match kvnICC T20 World Cup 3 days eyes on 2 Spot in Qualifier Match kvn

  CricketOct 21, 2021, 8:46 AM IST

  T20 World Cup: 2 ಸ್ಥಾನಗಳಿಗಿಂದು 3 ತಂಡಗಳ ನಡುವೆ ಫೈಟ್‌!

  ಸ್ಕಾಟ್ಲೆಂಡ್‌ಗೆ ಒಮಾನ್‌ ಎದುರಾಗಲಿದ್ದು, ಬಾಂಗ್ಲಾದೇಶಕ್ಕೆ ಪಪುವಾ ನ್ಯೂಗಿನಿ ಸವಾಲೆಸೆಯಲಿದೆ. ಸ್ಕಾಟ್ಲೆಂಡ್‌ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಒಮಾನ್‌ ಹಾಗೂ ಬಾಂಗ್ಲಾ ತಲಾ ಒಂದು ಜಯದೊಂದಿಗೆ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿವೆ.

 • ICC T20 World Cup Steve Smith 57 runs Helps Australia Set 153 runs target to India in Warm up match kvnICC T20 World Cup Steve Smith 57 runs Helps Australia Set 153 runs target to India in Warm up match kvn

  CricketOct 20, 2021, 5:20 PM IST

  T20 World Cup: ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿದ ಆಸ್ಟ್ರೇಲಿಯಾ

  ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್‌ ಫಿಂಚ್‌ ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಪಂದ್ಯದ ಎರಡನೇ ಓವರ್‌ನಲ್ಲೇ ರವಿಚಂದ್ರನ್‌ ಅಶ್ವಿನ್‌ ಸತತ 2 ಎಸೆತಗಳಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಆಸೀಸ್‌ಗೆ ಶಾಕ್‌ ನೀಡಿದರು.

 • T20 World Cup Sri Lanka and Ireland one step away from Super 12 Stage kvnT20 World Cup Sri Lanka and Ireland one step away from Super 12 Stage kvn

  CricketOct 20, 2021, 12:08 PM IST

  T20 World Cup ಸೂಪರ್‌ 12 ಸುತ್ತಿಗೇರಲು ಲಂಕಾ, ಐರ್ಲೆಂಡ್‌ ಕಾತರ

  ಲಂಕಾ ಹಾಗೂ ಐರ್ಲೆಂಡ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಲಂಕಾ ಬೌಲರ್‌ಗಳು ಸಂಘಟಿತ ದಾಳಿ ನಡೆಸಿದ್ದರು. ಐರ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಎದುರು ಮತ್ತೊಮ್ಮೆ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಬೇಕಿದೆ.

 • ICC T20 World Cup 12 year old Rebecca Downie the designer of Scotland Cricket Team jersey kvnICC T20 World Cup 12 year old Rebecca Downie the designer of Scotland Cricket Team jersey kvn

  CricketOct 20, 2021, 10:13 AM IST

  T20 World Cup: ಸ್ಕಾಟ್ಲೆಂಡ್‌ ವಿಶ್ವಕಪ್‌ ಜೆರ್ಸಿ ವಿನ್ಯಾಸ ಮಾಡಿದ್ದು 12ರ ಬಾಲೆ!

  ಸ್ಕಾಟ್ಲೆಂಡ್‌ ಕ್ರಿಕೆಟ್‌ ಸಂಸ್ಥೆಯು ಟಿ20 ವಿಶ್ವಕಪ್‌ ಜೆರ್ಸಿಯನ್ನು ವಿನ್ಯಾಸಗೊಳಿಸುವಂತೆ ಸ್ಪರ್ಧೆಯೊಂದನ್ನು ನಡೆಸಿತ್ತು. ಇದರಲ್ಲಿ ದೇಶಾದ್ಯಂತ 200 ಶಾಲಾ ಮಕ್ಕಳು ಸಲ್ಲಿಸಿದ್ದ ವಿನ್ಯಾಸ ಮಾದರಿಯ ಪೈಕಿ ರೆಬೆಕಾ ನೀಡಿದ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಜೆರ್ಸಿಯು ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಲಾಂಛನವಾದ ‘ದಿ ಥಿಸೆಲ್‌’ (ಒಂದು ಬಗೆಯ ಹೂವಿನ ಗಿಡ)ನ ಬಣ್ಣವನ್ನು ಹೊಂದಿದೆ.

 • ICC T20 World Cup Bangladesh Thrashed Oman by 26 runs alive Super 12 Hope kvnICC T20 World Cup Bangladesh Thrashed Oman by 26 runs alive Super 12 Hope kvn

  CricketOct 20, 2021, 8:47 AM IST

  T20 World Cup ಸೂಪರ್‌-12 ರೇಸಲ್ಲಿ ಉಳಿದ ಬಾಂಗ್ಲಾದೇಶ

  ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಸೋತಿದ್ದ ಬಾಂಗ್ಲಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವೆನಿಸಿತ್ತು. ಒಂದು ಗೆಲುವು, ಒಂದು ಸೋಲಿನೊಂದಿಗೆ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಅಂತಿಮ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ ಬಾಂಗ್ಲಾ ದೊಡ್ಡ ಅಂತರದಲ್ಲಿ ಗೆದ್ದು ನೆಟ್‌ ರನ್‌ರೇಟ್‌ ಉತ್ತಮಗೊಳಿಸಿಕೊಂಡರೆ ಸೂಪರ್‌-12 ಹಂತಕ್ಕೆ ಪ್ರವೇಶ ಸಿಗಲಿದೆ.

 • ICC T20 World Cup India Pakistan match cannot be cancelled Says Rajeev Shukla kvnICC T20 World Cup India Pakistan match cannot be cancelled Says Rajeev Shukla kvn

  CricketOct 19, 2021, 1:28 PM IST

  T20 World Cup: ಪಾಕ್‌ ವಿರುದ್ಧದ ಪಂದ್ಯ ರದ್ದು ಮಾಡಲು ಆಗ್ರಹ : ಬಿಸಿಸಿಐ ಹೇಳಿದ್ದೇನು..?

  ನವದೆಹಲಿ: ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu & Kashmir) ಸ್ಥಳೀಯ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಹಿಂಸಾಚಾರ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ (Team India) ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ (Pakistan) ವಿರುದ್ದ ಕಣಕ್ಕಿಳಿಯದೇ ಪಾಠ ಕಲಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಬಿಸಿಸಿಐ (BCCI) ಈ ಕುರಿತಂತೆ ತುಟಿಬಿಚ್ಚಿದೆ. ಬಿಸಿಸಿಐ ಹೇಳಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • ICC T20 World Cup Bangladesh take on Oman in Qualifier Match Do or Die Match for Bangladesh kvnICC T20 World Cup Bangladesh take on Oman in Qualifier Match Do or Die Match for Bangladesh kvn

  CricketOct 19, 2021, 8:52 AM IST

  T20 World Cup: ಬಾಂಗ್ಲಾಗೆ ಮಾಡು ಇಲ್ಲವೇ ಮಡಿ ಪಂದ್ಯ

  ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡ ಸ್ಕಾಟ್ಲೆಂಡ್‌ ವಿರುದ್ಧ ಅಚ್ಚರಿಯ ರೀತಿಯಲ್ಲಿ ಸೋಲುಂಡಿತ್ತು. ಹೀಗಾಗಿ ವಿಶ್ವಕಪ್‌ ಸೂಪರ್‌ 12ರ ಸುತ್ತು ಪ್ರವೇಶಿಸುವ ಕಾತರದಲ್ಲಿರುವ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. 

 • ICC T20 World Cup Curtis Campher hat trick Wicket Helps Netherlands all out 106 against Ireland kvnICC T20 World Cup Curtis Campher hat trick Wicket Helps Netherlands all out 106 against Ireland kvn

  CricketOct 18, 2021, 5:40 PM IST

  T20 World Cup: 4 ಎಸೆತಕ್ಕೆ 4 ವಿಕೆಟ್‌, ಐರ್ಲೆಂಡ್ ಎದುರು ಕೇವಲ 106 ರನ್‌ ಬಾರಿಸಿದ ನೆದರ್‌ಲೆಂಡ್ಸ್‌..!

  ಟಾಸ್ ಗೆದ್ದ ನೆದರ್‌ಲೆಂಡ್ಸ್‌ ತಂಡದ ನಾಯಕ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ನೆದರ್‌ಲೆಂಡ್ಸ್‌ ತಂಡವು ಮೊದಲ ಓವರ್‌ನಲ್ಲೇ ಆರಂಭಿಕ ಬ್ಯಾಟ್ಸ್‌ಮನ್‌ ಬೆನ್‌ ಕೋಪರ್ ವಿಕೆಟ್ ಕಳೆದುಕೊಂಡಿತು. ಇಲ್ಲದ ರನ್‌ ಕದಿಯಲು ಹೋಗಿ ಕೂಪರ್‌ ಪೆವಿಲಿಯನ್ ಸೇರಬೇಕಾಯಿತು. ಇನ್ನು ಲೀಡೆ 7 ರನ್‌ ಬಾರಿಸಿ ಪೆವಿಲಿಯನ್ ಸೇರಿದರು.

 • ICC T20 World Cup Netherlands won the toss elected to bat first against Ireland in Abu Dhabi kvnICC T20 World Cup Netherlands won the toss elected to bat first against Ireland in Abu Dhabi kvn

  CricketOct 18, 2021, 3:34 PM IST

  T20 World Cup: ಐರ್ಲೆಂಡ್ ಎದುರು ಟಾಸ್ ಗೆದ್ದ ನೆದರ್‌ಲೆಂಡ್ಸ್‌ ಬ್ಯಾಟಿಂಗ್ ಆಯ್ಕೆ

  ಉಭಯ ತಂಡಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿವೆ. ಅಬುಧಾಬಿಯ ಶೇಕ್‌ ಜಾಯೆದ್ ಮೈದಾನ ಈ ಪಂದ್ಯಕ್ಕೆ ಆತಿಥ್ಯ ವಹಿಸಿದೆ. ಗ್ರೂಪ್‌ 'ಎ'ನ ಮೊದಲ ಪಂದ್ಯ ಇದಾಗಿದ್ದು, ಸೂಪರ್‌ 12 ಹಂತಕ್ಕೇರುವ ದೃಷ್ಠಿಯಿಂದ ಈ ಪಂದ್ಯ ಸಾಕಷ್ಟು ಮಹತ್ವದ್ದೆನಿಸಿದೆ. ಟಾಸ್ ಗೆದ್ದ ನೆದರ್‌ಲೆಂಡ್ಸ್‌ ತಂಡದ ನಾಯಕ ಪೀಟರ್ ಸೀಲರ್‌ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. 

 • ICC T20 World Cup Sri Lanka and Ireland eyes on Winning Start in Qualifier Match kvnICC T20 World Cup Sri Lanka and Ireland eyes on Winning Start in Qualifier Match kvn

  CricketOct 18, 2021, 12:55 PM IST

  T20 World Cup: ಶುಭಾರಂಭದ ನಿರೀಕ್ಷೆಯಲ್ಲಿ ಐರ್ಲೆಂಡ್‌, ಶ್ರೀಲಂಕಾ..!

  ಸೋಮವಾರ ಐರ್ಲೆಂಡ್‌ ತಂಡ ನೆದರ್‌ಲೆಂಡ್ಸ್‌ ವಿರುದ್ಧ ಒಮಾನ್‌ನ ಅಲ್‌ ಅಮೆರತ್‌ನಲ್ಲಿ ಸೆಣಸಿದರೆ, ಶ್ರೀಲಂಕಾ ತಂಡವು ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ನಮೀಬಿಯಾವನ್ನು ಎದುರಿಸಲಿದೆ. ಐರ್ಲೆಂಡ್‌ಗೆ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

 • ICC T20 World Cup Virat Kohli Led Team India take on England in Warm up match in Dubai kvnICC T20 World Cup Virat Kohli Led Team India take on England in Warm up match in Dubai kvn

  CricketOct 18, 2021, 11:03 AM IST

  T20 World Cup: ಅಭ್ಯಾಸ ಪಂದ್ಯದಲ್ಲಿಂದು ಟೀಂ ಇಂಡಿಯಾಗೆ ಇಂಗ್ಲೆಂಡ್ ಸವಾಲು..!

  ವಿಶ್ವಕಪ್‌ ತಂಡದಲ್ಲಿರುವ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಆಡಿದರೂ, ಒಟ್ಟಿಗೆ ಟೀಂ ಇಂಡಿಯಾ ಪರವಾಗಿ 7 ತಿಂಗಳ ಬಳಿಕ ಆಡಲಿದ್ದಾರೆ. ಅಕ್ಟೋಬರ್ 24ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿರುವ ಭಾರತ, ಅದಕ್ಕೂ ಮುನ್ನ ಬಲಿಷ್ಠ ತಂಡಗಳಾದ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ವಿರುದ್ಧ ಕೆಲ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಲಿದೆ.

 • T20 World Cup Elbow injury still frustrating New Zealand captain Kane Williamson Likely to miss Few Matches kvnT20 World Cup Elbow injury still frustrating New Zealand captain Kane Williamson Likely to miss Few Matches kvn

  CricketOct 18, 2021, 9:32 AM IST

  T20 World Cup‌: ಟೂರ್ನಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದಲ್ಲಿ ಶುರುವಾಯ್ತು ತಳಮಳ..!

  ದುಬೈ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು (Qualifier Matches) ಅರಂಭವಾಗಿದ್ದು, ಅಕ್ಟೋಬರ್ 23ರಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿವೆ. ಹೀಗಿರುವಾಗಲೇ ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡದ (New Zealand Cricket Team) ಪಾಳಯದಲ್ಲಿ ಆತಂಕ ಮನೆ ಮಾಡಿದೆ. ಯಾಕೆ? ಏನಾಯ್ತು? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

 • ICC T20 World Cup Scotland upsets Bangladesh by 6 runs in Group B Qualifier Match kvnICC T20 World Cup Scotland upsets Bangladesh by 6 runs in Group B Qualifier Match kvn

  CricketOct 18, 2021, 8:37 AM IST

  T20 World Cup: ಮೊದಲ ದಿನವೇ ಆಘಾತಕಾರಿ ಫಲಿತಾಂಶ: ಸ್ಕಾಟ್ಲೆಂಡ್‌ಗೆ ಶರಣಾದ ಬಾಂಗ್ಲಾದೇಶ

  ವಿಶ್ವಕಪ್‌ಗೂ ಮುನ್ನ ಕೆಲ ತಿಂಗಳುಗಳ ಹಿಂದೆ ತವರಿನಲ್ಲಿ ನಡೆದಿದ್ದ ಟಿ20 ಸರಣಿಗಳಲ್ಲಿ ಸ್ಪಿನ್‌ ಸ್ನೇಹಿ ಪಿಚ್‌ ಸಿದ್ಧಪಡಿಸಿ, ಆಸ್ಪ್ರೇಲಿಯಾ ವಿರುದ್ಧ 4-1, ನ್ಯೂಜಿಲೆಂಡ್‌ ವಿರುದ್ಧ 3-2ರ ಅಂತರದಲ್ಲಿ ಗೆದ್ದು ಬೀಗಿದ್ದ ಬಾಂಗ್ಲಾದೇಶ, ಸ್ಪರ್ಧಾತ್ಮಕ ಪಿಚ್‌ನಲ್ಲಿ ಪರದಾಡಿತು.

 • Australia is set out to win T20 world cup says starcAustralia is set out to win T20 world cup says starc

  CricketOct 17, 2021, 1:08 PM IST

  T20 ‌World Cup ಗೆಲುವಿನ ನೀರಿಕ್ಷೆಯಲ್ಲಿದ್ದೇವೆ : ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್

  -T20 World Cup ಗೆಲ್ಲಲು ಸಿದ್ದರಾಗಿದ್ದೇವೆ :  ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್‌
  -ಈ ವರ್ಷದಲ್ಲಿ ಚುಟುಕು ಪಂದ್ಯಾವಳಿಗಳಲ್ಲಿ  ನಮ್ಮ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು
  -ಐಪಿಎಲ್‌ನಿಂದ ಹಿಂತಿರುಗಿರುವ ನಮ್ಮ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ.

 • ICC T20 World Cup Selectors wait till October 15 to take call on Hardik Pandya Fitness kvnICC T20 World Cup Selectors wait till October 15 to take call on Hardik Pandya Fitness kvn

  CricketOct 11, 2021, 1:01 PM IST

  T20 World Cup ಟೂರ್ನಿಯಿಂದ ಹಾರ್ದಿಕ್‌ ಪಾಂಡ್ಯ ಔಟ್‌?

  ಕಳೆದ ತಿಂಗಳು ಪ್ರಕಟಿಸಿದ್ದ ತಂಡದಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 10 ಕೊನೆಯ ದಿನ ಎಂದು ಭಾವಿಸಲಾಗಿತ್ತು. ಆದರೆ ಐಸಿಸಿ ನಿಯಮದ ಪ್ರಕಾರ ಟೂರ್ನಿ ಆರಂಭಗೊಳ್ಳುವ 7 ದಿನಗಳ ಮೊದಲು ಅಂತಿಮ ತಂಡ ಘೋಷಿಸಬೇಕು. ಅಕ್ಟೋಬರ್ 17ರಂದು ಪ್ರಾಥಮಿಕ ಸುತ್ತು ಆರಂಭಗೊಳ್ಳಲಿದ್ದು, ಸೂಪರ್‌ 12 ಹಂತ ಆರಂಭವಾಗುವುದು ಅಕ್ಟೋಬರ್ 23ಕ್ಕೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 15ರ ವರೆಗೂ ಸಮಯವಿದೆ.