ಬೆಂಗಳೂರು(ನ.27): ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ಫಿಕ್ಸಿಂಗ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಸಿಸಿಬಿ ಪೊಲೀಸರು ಬಿಜಾಪುರ ಬುಲ್ಸ್ ಮಾಲೀಕನ ಕಿರಣ್ ಕಟ್ಟೀಮನಿಗೆ ಸತತ 2ನೇ ದಿನ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ. ಇದರ ನಡುವೆ ಹಿರಿಯ ಆಟಗಾರರು ಬೆಟ್ಟಿಂಗ್‌ನಂತಹ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: KPL ಫಿಕ್ಸಿಂಗ್: ಬೆಂಗಳೂರು ಬ್ಲಾಸ್ಟರ್ ಕೋಚ್, ಆಟಗಾರನಿಗೆ ಪೊಲೀಸ್ ನೋಟೀಸ್!

ಹಿಂದುಳಿದ ಹುಡುಗರನ್ನು ಕರೆತಂದು ಅವರಿಗೆ ಒಳ್ಳೋ ಭವಿಷ್ಯ ಕೊಡಿಸೋ ಉದ್ದೇಶದಿಂದ ತಂಡ ಕಟ್ಟಿದ್ದೇನೆ. ಕೆಲ ಹಿರಿಯ ಆಟಗಾರರು ಬೆಟ್ಟಿಂಗ್ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಅವರೆಲ್ಲರನ್ನು ಸಿಸಿಬಿ ಅರೆಸ್ಟ್ ಮಾಡಿದೆ. ನನ್ನ ತಂಡದಲ್ಲಿ ಯಾರೂ ಕೂಡ ಕಳ್ಳಾಟದಲ್ಲಿ ಪಾಲ್ಗೊಂಡಿಲ್ಲ ಎಂದು ಕಟ್ಟೀಮನಿ ಹೇಳಿದರು.

ಇದನ್ನೂ ಓದಿ: KPL ಫಿಕ್ಸಿಂಗ್: ಹೆಣ್ಣಿನ ಆಸೆಗೆ ಮಣ್ಣು ತಿಂದ್ರಾ ಕ್ರಿಕೆಟರ್ಸ್?

ಕೆಸಿ ಕಾರ್ಯಪ್ಪ, ಭರತ್ ಚಿಪ್ಲಿ, ಸೂರದಜ್ ಕಾಮತ್ ಆಟಗಾರರನ್ನು ಕರೆಸಿ ಸಿಸಿಬಿ ವಿಚಾರಣೆ ನಡೆಸಿದೆ. ಫಿಕ್ಸಿಂಗ್ ಕುರಿತು ಮಾಹಿತಿಗಳನ್ನು ಕೇಳಿದ್ದಾರೆ. ಆದರೆ ಬುಲ್ಸ್ ತಂಡ ಯಾರೂ ಕೂಡ ಕಳ್ಳಾಟದಲ್ಲಿ ಪಾಲ್ಗೊಂಡಿಲ್ಲ. ಫೈನಾನ್ಸ್, ಬಂಡವಾಳ ಕುರಿತ ಕೆಲ ಪ್ರಶ್ನೆಗಳನ್ನು ವಿಚಾರಣೆಯಲ್ಲಿ ಕೇಳಿದ್ದಾರೆ ಎಂದಿದ್ದಾರೆ.

ನಮ್ಮ ತಂಡದ ಆಟಗಾರರು ಬೆಟ್ಟಿಂಗ್, ಫಿಕ್ಸಿಂಗ್ ನಡೆಸಲು ಸಾಧ್ಯವೇ ಇಲ್ಲ. ಎಲ್ಲ ಫ್ರಾಂಚೈಸಿ ಗೆ ನೊಟೀಸ್ ಕೊಟ್ಟ ರೀತಿ ನನಗೂ ಕೊಟ್ಟಿದ್ದಾರೆ ಅಷ್ಟೇ. ಎಲಿಮೆಂಟೆಡ್ ಆಫ್ ಡೌಟ್‌ನಲ್ಲಿ ಸಿಸಿಬಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಕಟ್ಟೀಮನಿ ಹೇಳಿದ್ದಾರೆ.

KPL ಫಿಕ್ಸಿಂಗ್ ಕುರಿತ ಸ್ಫೋಟಕ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: