Asianet Suvarna News Asianet Suvarna News

'ನಂಗೂ ಭಯ ಆಗುತ್ತೆ..!': ಗರ್ಲ್ ಫ್ಯಾನ್‌ಗೆ ಯಶಸ್ವಿ ಜೈಸ್ವಾಲ್ ಹೀಗಂದಿದ್ದೇಕೆ..? ವಿಡಿಯೋ ವೈರಲ್

ಮಹಿಳಾ ಅಭಿಮಾನಿಯೊಬ್ಬಳ ಜತೆ ಮಾತಾನಾಡಿರುವ ದೃಶ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಅಭಿಮಾನಿಯು ಜೈಸ್ವಾಲ್ ಬಳಿ ನಿಮ್ಮ ಮುಂದಿರುವ ನಾಯಕನನ್ನು ಕರೆಯಿರಿ ಎಂದು ಕೇಳುತ್ತಾಳೆ.

Mujhe Bhi Darr Lagta Hai Yashasvi Jaiswal Hilarious Interaction With Fan Girl kvn
Author
First Published Feb 24, 2024, 3:33 PM IST

ರಾಂಚಿ(ಫೆ.23): ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಅಧ್ಭುತ ಪ್ರದರ್ಶನದ ಮೂಲಕ ಮನೆಮಾತಾಗಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್‌ನಲ್ಲಿ ಆಕರ್ಷಕ ದ್ವಿಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ 434 ರನ್ ಬೃಹತ್ ಅಂತರದ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ರಾಂಚಿ ಟೆಸ್ಟ್ ಪಂದ್ಯದಲ್ಲೂ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮಿಂಚುತ್ತಿರುವ ಯಶಸ್ವಿ ಜೈಸ್ವಾಲ್ ಅವರ ಒಂದು ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಹೌದು, ಮಹಿಳಾ ಅಭಿಮಾನಿಯೊಬ್ಬಳ ಜತೆ ಮಾತಾನಾಡಿರುವ ದೃಶ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಅಭಿಮಾನಿಯು ಜೈಸ್ವಾಲ್ ಬಳಿ ನಿಮ್ಮ ಮುಂದಿರುವ ನಾಯಕನನ್ನು ಕರೆಯಿರಿ ಎಂದು ಕೇಳುತ್ತಾಳೆ. ಆಗ ಜೈಸ್ವಾಲ್, "ನನಗೂ ಕೂಡಾ ಅವರನ್ನು ಕಂಡ್ರೆ ಭಯ ಆಗುತ್ತೆ" ಎಂದು ಮಹಿಳಾ ಅಭಿಮಾನಿಯ ಮನವಿಯನ್ನು ನಯವಾಗಿ ತಿರಸ್ಕರಿಸುತ್ತಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಔಟ್..!

ಹೀಗಿದೆ ನೋಡಿ ಆ ವಿಡಿಯೋ

ಇನ್ನು ಯಶಸ್ವಿ ಜೈಸ್ವಾಲ್ ಪ್ರದರ್ಶನದ ಬಗ್ಗೆ ಹೇಳುವುದಾದರೇ, ಯಶಸ್ವಿ ಜೈಸ್ವಾಲ್ ಕಳೆದೆರಡು ಟೆಸ್ಟ್ ಪಂದ್ಯಗಳಲ್ಲಿ ಸತತವಾಗಿ ದ್ವಿಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಕೆಲವೇ ಕೆಲವು ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. ಜೈಸ್ವಾಲ್ ಇಂಗ್ಲೆಂಡ್ ಎದುರು ವೈಜಾಗ್ ಹಾಗೂ ರಾಜ್‌ಕೋಟ್‌ ಟೆಸ್ಟ್‌ನಲ್ಲಿ ಆಕರ್ಷಕ ದ್ವಿಶತಕ ಸಿಡಿಸಿದ್ದರು. ಹೈದರಾಬಾದ್‌ನಲ್ಲಿ ಸೋಲು ಕಂಡಿದ್ದ ಟೀಂ ಇಂಡಿಯಾ, ಆ ಬಳಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2-1ರ ಮುನ್ನಡೆ ಸಾಧಿಸಿದೆ.

ತಂದೆ ವಿರೋಧದ ನಡುವೆ ಕ್ರಿಕೆಟಿಗನಾದ ಆಕಾಶ್ ದೀಪ್ ಈಗ ಟೀಂ ಇಂಡಿಯಾ ಹೀರೋ

ಟೆಸ್ಟ್‌ನಲ್ಲಿ ಜೈಸ್ವಾಲ್‌ ಈಗ ವಿಶ್ವ ನಂ.15 ಬ್ಯಾಟರ್‌!

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸತತ 2 ದ್ವಿಶತಕ ಸಿಡಿಸಿರುವ ಭಾರತದ ಯುವ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ-20ರೊಳಗೆ ಪ್ರವೇಶ ಪಡೆದಿದ್ದಾರೆ. 14 ಸ್ಥಾನಗಳ ಏರಿಕೆ ಕಂಡಿರುವ ಜೈಸ್ವಾಲ್‌ ಸದ್ಯ 15ನೇ ಸ್ಥಾನದಲ್ಲಿದ್ದಾರೆ.

ರಾಜ್‌ಕೋಟ್‌ ಪಂದ್ಯದಲ್ಲಿ ಜೈಸ್ವಾಲ್‌ ಔಟಾಗದೆ 214 ರನ್‌ ಗಳಿಸಿ, ಸತತ ಎರಡು ಟೆಸ್ಟ್‌ಗಳಲ್ಲಿ ದ್ವಿಶತಕ ಬಾರಿಸಿದ ಭಾರತದ 3ನೇ ಹಾಗೂ ವಿಶ್ವದ 7ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದಿದ್ದ 2ನೇ ಟೆಸ್ಟ್‌ನಲ್ಲಿ ಜೈಸ್ವಾಲ್‌ 209 ರನ್‌ ಸಿಡಿಸಿದ್ದರು.

Follow Us:
Download App:
  • android
  • ios