ಪಂಜಾಬ್(ಅ.12): ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಟ್ರೋಫಿ ಸಿಹಿ ಕಂಡಿಲ್ಲ. ಪ್ರತಿ ಸರಣಿಯಲ್ಲಿ ಮಹತ್ತರ ಬದಲಾವಣೆಯೊಂದಿಗೆ ಕಣಕ್ಕಿಳಿದಿರುವ ಪಂಜಾಬ್ ತಂಡ, ಪ್ರಮುಖ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದಿದೆ. 2019ರ ಐಪಿಎಲ್ ಟೂರ್ನಿ ಬಳಿಕ ತಂಡದ ನಾಯಕ ಆರ್ ಅಶ್ವಿನ್‌ಗೆ ಕೊಕ್ ನೀಡಲಾಗುವುದು ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಪಂಜಾಬ್ ಸಹ ಮಾಲೀಕ ನೆಸ್ ವಾಡಿಯಾ, ನಾಯಕ ಅಶ್ವಿನ್ ಇರುವಿಕೆ ಕುರಿತು ಮೌನ ಮುರಿದಿದ್ದಾರೆ.

ಇದನ್ನೂ ಓದಿ: ಹರಿಣಗಳ ವಿರುದ್ಧ ಸ್ಪಿನ್ ಮೋಡಿ; ಕುಂಬ್ಳೆ ಸಾಲಿಗೆ ಸೇರಿದ ಅಶ್ವಿನ್!

2020ರ ಐಪಿಎಲ್ ಟೂರ್ನಿಯಲ್ಲಿ ಆರ್ ಅಶ್ವಿನ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಭಾಗವಾಗಿರಲಿದ್ದಾರೆ ಎಂದು ವಾಡಿಯಾ ಸ್ಪಷ್ಟಪಡಿಸಿದ್ದಾರೆ. ಟ್ರೇಡಿಂಗ್ ಮೂಲಕ ಅಶ್ವಿನ್ ಕೈಬಿಡುವ ಪ್ರಶ್ನೆಯೆ ಇಲ್ಲ. ಆರ್ ಅಶ್ವಿನ್ ಟೀಂ ಇಂಡಿಯಾ ಮಾತ್ರವಲ್ಲ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಮುಖ ಆಟಗಾರ ಎಂದು ವಾಡಿಯ ಹೇಳಿದ್ದಾರೆ.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಶ್ವಿನ್ ಸೇರ್ಪಡೆಯಾದರೆ ಸಂತೋಷ ಎಂದ ಗಂಗೂಲಿ

ವಾಡಿಯಾ ಹೇಳಿಕೆಯಿಂದ ಗೊಂದಲ ನಿವಾರಣೆಯಾಗಿದೆ. ಆರ್ ಅಶ್ವಿನ್ ಡೆಲ್ಲಿ ತಂಡ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದೆ. ಪಂಜಾಬ್ ತಂಡ ಕೆಲ ದಿನಗಳ ಹಿಂದೆ ದಿಗ್ಗಜ ಕ್ರೆಕೆಟಿಗ ಅನಿಲ್ ಕುಂಬ್ಳೆಯನ್ನು ಕೋಚ್ ಆಗಿ ಆಯ್ಕೆ ಮಾಡಿದೆ.