ಲಂಡನ್(ಫೆ.06): ಐಪಿಎಲ್ ಟೂರ್ನಿಗೆ 8 ಫ್ರಾಂಚೈಸಿಗಳು ತಯಾರಿ ಆರಂಭಿಸಿವೆ. ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದೆ. ಐಪಿಎಲ್ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸಿದ ರಾಜಸ್ಥಾನ ರಾಯಲ್ಸ್, ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಇದನ್ನೂ ಓದಿ: IPL 2020: ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್ ಫುಲ್ ಲಿಸ್ಟ್!

ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ವೇಗಿ, ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಇಂಜುರಿಯಿಂದ ಹೊರಬಿದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಜುರಿಗ ತುತ್ತಾದ ಜೋಫ್ರಾ ಆರ್ಚರ್ ತಂಡದಿಂದ ಹೊರಬಿದ್ದಿದ್ದರು. ಇದೀಗ ಹೆಚ್ಚಿನ ವಿಶ್ರಾಂತಿ ಅಗತ್ಯವಿರುವ ಕಾರಣ ಇಂಗ್ಲೆಂಡ್ ತಂಡದ ಶ್ರೀಲಂಕಾ ಪ್ರವಾಸದಿಂದಲೂ ಹೊರಬಿದ್ದಿದ್ದಾರೆ. ಇಷ್ಟೇ ಅಲ್ಲ 2020ರ ಐಪಿಎಲ್ ಟೂರ್ನಿಯಿಂದಲೂ ಔಟ್ ಆಗಿದ್ದಾರೆ.

ಇದನ್ನೂ ಓದಿ:IPL 2020: ರಾಜಸ್ಥಾನ ರಾಯಲ್ಸ್‌ಗೆ ಸೋಧಿ ಸ್ಪಿನ್‌ ಸಲಹೆಗಾರ

2018ರಲ್ಲಿ 7.2 ಕೋಟಿ ರೂಪಾಯಿ ನೀಡಿ ಜೋಫ್ರಾ ಆರ್ಚರ್‌ನ್ನು ಖರೀದಿಸಲಾಗಿತ್ತು. ಸ್ಟಾರ್ ವೇಗಿಯಾಗಿ ಗುರುತಿಸಿಕೊಂಡಿರುವ ಆರ್ಚರನ್ನು ರಿಟೈನ್ ಮಾಡಿಕೊಳ್ಳಲಾಗಿತ್ತು. ಇದೀಗ ಆರ್ಚರ್ ಅಲಭ್ಯತೆಯಿಂದ ರಾಜಸ್ಥಾನ ಮತ್ತೋರ್ವ ವೇಗಿಯನ್ನು ಆಯ್ಕೆ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.