ಜೈಪುರ(ಜನ.03)  2020ರ ಐಪಿಎಲ್‌ಗೆ ರಾಜಸ್ಥಾನ ರಾಯಲ್ಸ್‌ ತಂಡದ ಸ್ಪಿನ್‌ ಸಲಹೆಗಾರರಾಗಿ ಗುರುವಾರ ನ್ಯೂಜಿಲೆಂಡ್‌ನ ಲೆಗ್‌ ಸ್ಪಿನ್ನರ್‌ ಇಶ್‌ ಸೋಧಿ ನೇಮಕಗೊಂಡಿದ್ದಾರೆ. 27 ವರ್ಷದ ಸೋಧಿ, 2018 ಹಾಗೂ 2019ರಲ್ಲಿ ರಾಯಲ್ಸ್‌ ಪರ ಆಡಿದ್ದರು. ಕಳೆದ ತಿಂಗಳು ನಡೆದ ಆಟಗಾರರ ಹರಾಜಿಗೂ ಮುನ್ನ ಅವರನ್ನು ತಂಡದಿಂದ ಕೈಬಿಡಲಾಗಿತ್ತು. 

ಇದನ್ನೂ ಓದಿ: IPL 2020: ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್ ಫುಲ್ ಲಿಸ್ಟ್!

ನ್ಯೂಜಿಲೆಂಡ್‌ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವಾಗಲೇ ಐಪಿಎಲ್‌ ತಂಡದ ಸಲಹೆಗಾರರಾಗಿ ನೇಮಕಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಾರಿ ಹರಾಜಿನಲ್ಲಿ ಸೋಧಿ ಖರೀದಿಸಲು ಯಾವ ತಂಡ ಮುಂದೆ ಬಂದಿರಲಿಲ್ಲ. 

ಇದನ್ನೂ ಓದಿ: IPL ಹರಾಜು: ಕನ್ನಡಿಗ ರಾಬಿನ್ ಉತ್ತಪ್ಪ 3 ಕೋಟಿಗೆ ಸೇಲ್!

‘ಸಣ್ಣ ವಯಸ್ಸಿನಲ್ಲೇ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದೇನೆ ಎನ್ನುವ ಬಗ್ಗೆ ಸಂತಸವಿದೆ. ಈ ಅನುಭವ ನನಗೆ ಹೊಸ ಪಾಠಗಳನ್ನು ಕಲಿಸಲಿದೆ’ ಎಂದು ಸೋಧಿ ಪ್ರತಿಕ್ರಿಯಿಸಿದ್ದಾರೆ. ನ್ಯೂಜಿಲೆಂಡ್‌ ಪರ 40 ಟಿ20 ಪಂದ್ಯಗಳನ್ನು ಆಡಿರುವ ಅವರು 47 ವಿಕೆಟ್‌ ಕಿತ್ತಿದ್ದಾರೆ. ಅವರು 17 ಟೆಸ್ಟ್‌ ಹಾಗೂ 31 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.