Asianet Suvarna News Asianet Suvarna News

India vs Ireland: ಬುಮ್ರಾ ನೇತೃತ್ವದ ಭಾರತಕ್ಕೆ ಟಿ20 ಸರಣಿ ಜಯದ ಗುರಿ..!

ಇಂದು ಭಾರತ-ಐರ್ಲೆಂಡ್ ಎರಡನೇ ಟಿ20 ಪಂದ್ಯ
ಸರಣಿ ಗೆಲ್ಲುವ ವಿಶ್ವಾಸದಲ್ಲಿ ಬುಮ್ರಾ ಪಡೆ
ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ

Jasprit Bumrah led Team India eyes on T20I series win against Ireland kvn
Author
First Published Aug 20, 2023, 11:02 AM IST

ಡಬ್ಲಿನ್‌(ಆ.20): ಜಸ್ಪ್ರೀತ್‌ ಬುಮ್ರಾ ಅವರ ಭರ್ಜರಿ ಕಮ್‌ಬ್ಯಾಕ್‌ ಜೊತೆಗೆ ಮೊದಲ ಪಂದ್ಯದಲ್ಲಿ ಕೊದಲೆಳೆಯ ಅಂತರದಲ್ಲಿ ಸೋಲಿನ ದವಡೆಯಿಂದ ಪಾರಾದ ಭಾರತ, ಭಾನುವಾರ ಐರ್ಲೆಂಡ್‌ ವಿರುದ್ದದ 2ನೇ ಟಿ20ಯಲ್ಲಿ ಅಧಿಕಾರಿಯುತ ಗೆಲುವು ಸಾಧಿಸಿ ಸರಣಿ ಗೆಲ್ಲಲು ಕಾತರಿಸುತ್ತಿದೆ.

ಮೊದಲ ಬಾರಿಗೆ ಟಿ20 ತಂಡವನ್ನು ಮುನ್ನಡೆಸುತ್ತಿರುವ ಬುಮ್ರಾ, ನಾಯಕನಾಗಿ ಮೊದಲ ಸರಣಿಯಲ್ಲೇ ಟ್ರೋಫಿ ವಶಪಡಿಸಿಕೊಳ್ಳಲು ಕಾಯುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಆರಂಭಿಕ ಹಾಗೂ ಮಧ್ಯ ಸ್ಪೆಲ್‌ಗಳಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದ ಭಾರತ, ಡೆತ್ ಓವರ್‌ಗಳಲ್ಲಿ ದುಬಾರಿಯಾಗಿತ್ತು. ಕೊನೆಯ 5 ಓವರ್‌ಗಳಲ್ಲಿ 53 ರನ್ ನೀಡಿ, ಒತ್ತಡಕ್ಕೆ ಸಿಲುಕಿತ್ತು. ಈ ಪಂದ್ಯದಲ್ಲಿ ಭಾರತೀಯರು ಡೆತ್ ಓವರ್‌ಗಳಲ್ಲಿ ಸುಧಾರಿತ ಪ್ರದರ್ಶನ ತೋರಬೇಕಿದೆ.

Asia Cup 2023: ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟಕ್ಕೆ ಡೇಟ್ ಫಿಕ್ಸ್..!

ಸ್ಪಿನ್ನರ್‌ ರವಿ ಬಿಷ್ಣೋಯ್ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳುವಂತಹ ಪ್ರದರ್ಶನ ತೋರಿದ್ದು, ಅವರಿಂದ ಮತ್ತೊಂದು ಭರ್ಜರಿ ಸ್ಪೆಲ್ ನಿರೀಕ್ಷಿಸಲಾಗಿದೆ. ಇನ್ನು ಬ್ಯಾಟರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಯಶಸ್ವಿ ಜೈಸ್ವಾಲ್ ಸ್ಥಿರತೆ ಕಂಡುಕೊಳ್ಳಬೇಕಿದೆ. ಸತತವಾಗಿ ಒಂದೆರಡು ಡಾಟ್‌ ಬಾಲ್‌ಗಳನ್ನು ಎದುರಿಸಿದ ಬಳಿಕ ಜೈಸ್ವಾಲ್‌ ಒತ್ತಡಕ್ಕೆ ಸಿಲುಕುವುದು ಕಂಡು ಬರುತ್ತಿದೆ. ಎದುರಾಳಿ ಬೌಲರ್‌ಗಳು ಇದರ ಲಾಭ ಪಡೆಯಲು ಶುರು ಮಾಡಿದ್ದು, ಜೈಸ್ವಾಲ್‌ ಹೆಚ್ಚು ಕಾಲ ತಂಡದಲ್ಲಿ ಉಳಿಯಬೇಕಿದ್ದರೆ ತಮ್ಮ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಬೇಕಿದೆ. ಮುಂದಿನ 2 ಪಂದ್ಯಗಳು ಅವರ ಪಾಲಿಗೆ ಮಹತ್ವದ್ದಾಗಲಿದೆ.

ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ರಿಂಕು ಸಿಂಗ್ ಎಲ್ಲರೂ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಎದುರು ನೋಡುತ್ತಿದ್ದಾರೆ. ಭಾರತ ಮಳೆ ಮುನ್ಸೂಚನೆ ಇಲ್ಲದ ಕಾರಣ, ಭಾರತ ಟಾಸ್ ಗೆದ್ದರೆ ಮೊದಲು ಬ್ಯಾಟ್ ಮಾಡಿ ತನ್ನ ಬ್ಯಾಟರ್‌ಗಳಿಗೆ ಕ್ರೀಸ್‌ನಲ್ಲಿ ಹೆಚ್ಚಿನ ಸಮಯಾವಕಾಶ ನೀಡಲು ಮುಂದಾಗಬಹುದು. ಇನ್ನು ಆರ್ಶದೀಪ್‌ ಸಿಂಗ್ ಅವರನ್ನು ಹೊರಗಿಟ್ಟು ಆವೇಶ್‌ ಖಾನ್‌ಗೆ ಸ್ಥಾನ ನೀಡಬಹುದು.

Asia Cup 2023: ಉದ್ಘಾಟನಾ ಪಂದ್ಯ ವೀಕ್ಷಿಸಲು ಪಾಕಿಸ್ತಾನಕ್ಕೆ ಬರುವಂತೆ ಜಯ್ ಶಾಗೆ ಪಿಸಿಬಿ ಆಹ್ವಾನ..!

ಮತ್ತೊಂದೆಡೆ ಟಿ20ಯಲ್ಲಿ ಐರ್ಲೆಂಡ್ ತಂಡ ಅಪಾಯಕಾರಿ. ತಂಡದ ಬ್ಯಾಟಿಂಗ್ ಆಳ ಎಷ್ಟಿದೆ ಎನ್ನುವುದು ಮೊದಲ ಪಂದ್ಯದಲ್ಲಿ ಬುಮ್ರಾ ಪಡೆ ನೋಡಿದೆ. ಹೀಗಾಗಿ, ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರಷ್ಟೇ ಭಾರತಕ್ಕೆ ಜಯ ಸಿಗಲಿದೆ.

ಪಿಚ್ ರಿಪೋರ್ಟ್‌:
ಡಬ್ಲಿನ್‌ನ ಪಿಚ್‌ ಬ್ಯಾಟಿಂಗ್ ಸ್ನೇಹಿಯಾಗಿದೆ, ಮೈದಾನದ ಒಂದು ಭಾಗ ಚಿಕ್ಕದಿರುವ ಕಾರಣ ಬೌಂಡರಿ ಬಾರಿಸುವ ಅವಕಾಶ ಹೆಚ್ಚು. ಮಳೆಯ ವಾತಾವರಣ ಇರುವ ಸಾಧ್ಯತೆ ಕಡಿಮೆ. ಹೀಗಾಗಿ, ಅನಿರೀಕ್ಷಿತ ಸ್ವಿಂಗ್ ಇರುವುದಿಲ್ಲ. ಮೊದಲು ಬ್ಯಾಟ್ ಮಾಡುವ ತಂಡ ಕನಿಷ್ಠ 170-180 ರನ್‌ ಗಳಿಸಬೇಕಾಗಬಹುದು.

ಸಂಭವನೀಯ ಆಟಗಾರರ ಪಟ್ಟಿ:
ಭಾರತ:
ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ(ನಾಯಕ), ಆರ್ಶದೀಪ್ ಸಿಂಗ್/ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ.

ಐರ್ಲೆಂಡ್:
ಪೌಲ್ ಸ್ಟರ್ಲಿಂಗ್(ನಾಯಕ), ಬಲ್ಬರ್ನಿ, ಲಾರ್ಕನ್, ಟಕ್ಕರ್, ಹ್ಯಾರಿ ಟೆಕ್ಟರ್, ಕ್ಯಾಂಫರ್, ಡಾರ್ಕೆಲ್, ಮಾರ್ಕ್ ಅಡೈರ್, ಮೆಕ್ಕಾರ್ಥಿ, ಕ್ರೆಗ್ ಯಂಗ್, ಜೋಶ್ ಲಿಟ್ಲ್, ಬೆನ್ ವೈಟ್.

ಪಂದ್ಯ ಆರಂಭ: ಸಂಹೆ 7.30ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ 18
 

Follow Us:
Download App:
  • android
  • ios