ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಒಟ್ಟು ಆಸ್ತಿ ಮೌಲ್ಯ 2026ರ ಹೊತ್ತಿಗೆ ₹80 ಕೋಟಿ ತಲುಪುವ ಅಂದಾಜಿದೆ. ಐಪಿಎಲ್, ಬಿಸಿಸಿಐ ಕಾಂಟ್ರಾಕ್ಟ್ ಮತ್ತು ಜಾಹೀರಾತುಗಳ ಮೂಲಕ ಅವರು ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ, ಅವರು ಐಷಾರಾಮಿ ಮನೆಗಳು ಮತ್ತು ದುಬಾರಿ ಕಾರುಗಳನ್ನು ಹೊಂದಿದ್ದಾರೆ.

ಟೀಂ ಇಂಡಿಯಾದ ಸ್ಟಾರ್ ಪೇಸರ್ ಜಸ್ಪ್ರೀತ್ ಬುಮ್ರಾ ವಿಶ್ವ ಕ್ರಿಕೆಟ್‌ನ ಬೆಸ್ಟ್ ಫಾಸ್ಟ್ ಬೌಲರ್‌ಗಳಲ್ಲಿ ಒಬ್ಬರು. ಮೈದಾನದಲ್ಲಿ ತಮ್ಮ ಬೆಂಕಿ ಯಾರ್ಕರ್‌ಗಳಿಂದ ವಿಕೆಟ್ ಉರುಳಿಸುವ ಬುಮ್ರಾ, ಸಂಪಾದನೆಯಲ್ಲೂ ದೊಡ್ಡ ರೆಕಾರ್ಡ್ ಬರೆಯುತ್ತಿದ್ದಾರೆ.

ಟೀಂ ಇಂಡಿಯಾದ ಫಾಸ್ಟ್ ಬೌಲಿಂಗ್ ಸೆನ್ಸೇಷನ್ ಜಸ್ಪ್ರೀತ್ ಬುಮ್ರಾ ಮೈದಾನದಲ್ಲಿ ಯಾರ್ಕರ್ ಹಾಕಿದರೆ ಎದುರಾಳಿ ಬ್ಯಾಟರ್‌ಗಳ ವಿಕೆಟ್ ಹೇಗೆ ಹಾರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ವಿಶ್ವ ಕ್ರಿಕೆಟ್‌ನ ಡೇಂಜರಸ್ ಬೌಲರ್ ಎನಿಸಿಕೊಂಡಿರುವ ಬುಮ್ರಾ, ಮೈದಾನದ ಹೊರಗೂ ತಮ್ಮ ಬ್ರಾಂಡ್ ವ್ಯಾಲ್ಯೂ ಮೂಲಕ ಭಾರಿ ಹಣ ಸಂಪಾದಿಸುತ್ತಿದ್ದಾರೆ.

ಫೈನಾನ್ಷಿಯಲ್ ಟ್ರ್ಯಾಕರ್‌ಗಳ ವರದಿ ಪ್ರಕಾರ, 2026ರ ಹೊತ್ತಿಗೆ ಬುಮ್ರಾ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ₹60 ಕೋಟಿಯಿಂದ ₹80 ಕೋಟಿ ಇರಲಿದೆ. 2013ರಲ್ಲಿ ಕೇವಲ ₹10 ಲಕ್ಷದ ಐಪಿಎಲ್ ಡೀಲ್‌ನೊಂದಿಗೆ ಕೆರಿಯರ್ ಶುರು ಮಾಡಿದ ಬುಮ್ರಾ, ಇಂದು ದೇಶದ ಅತ್ಯಂತ ದುಬಾರಿ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಈ ಕೋಟ್ಯಂತರ ರೂಪಾಯಿ ಹಣ ಬುಮ್ರಾಗೆ ಎಲ್ಲಿಂದ ಬರುತ್ತದೆ, ಅವರ ಕಾರುಗಳು ಮತ್ತು ಆಸ್ತಿ ವಿವರ ಇಲ್ಲಿದೆ.

ಮುಂಬೈ ಇಂಡಿಯನ್ಸ್ ಐಪಿಎಲ್ ಸಂಭಾವನೆ: ಮೆಗಾ ರಿಟೆನ್ಷನ್

ಬುಮ್ರಾ ಅವರ ಆದಾಯದ ಮೂಲಗಳಲ್ಲಿ ಅತಿ ದೊಡ್ಡ ಪಾಲು ಐಪಿಎಲ್ ಲೀಗ್‌ನಿಂದಲೇ ಬರುತ್ತದೆ. 2013ರಿಂದ ಮುಂಬೈ ಇಂಡಿಯನ್ಸ್ (MI) ಫ್ರಾಂಚೈಸಿಗೆ ಬೆನ್ನೆಲುಬಾಗಿ ನಿಂತಿರುವ ಬುಮ್ರಾ ಅವರನ್ನು 2026ರ ಐಪಿಎಲ್ ಸೀಸನ್‌ಗಾಗಿ ಮ್ಯಾನೇಜ್‌ಮೆಂಟ್ ಬರೋಬ್ಬರಿ ₹18 ಕೋಟಿಗೆ ರಿಟೇನ್ ಮಾಡಿಕೊಂಡಿದೆ. ಲೀಗ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ ಆಟಗಾರರ ಪಟ್ಟಿಯಲ್ಲಿ ಬುಮ್ರಾ ಮುಂದಿದ್ದಾರೆ. ಪ್ರತಿ ಸೀಸನ್‌ಗೆ ಸಿಗುವ ಈ ₹18 ಕೋಟಿ ಫಿಕ್ಸ್ಡ್ ಸ್ಯಾಲರಿ ಅವರ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಭಾರಿ ಮಟ್ಟದಲ್ಲಿ ಹೆಚ್ಚಿಸಿದೆ.

ಬಿಸಿಸಿಐ ಕಾಂಟ್ರಾಕ್ಟ್ ಮತ್ತು ಮ್ಯಾಚ್ ಫೀಸ್

ಭಾರತೀಯ ಕ್ರಿಕೆಟ್ ಮಂಡಳಿ (BCCI) ನೀಡುವ ವಾರ್ಷಿಕ ಕಾಂಟ್ರಾಕ್ಟ್ ಕೂಡ ಬುಮ್ರಾ ಅವರ ಪ್ರಮುಖ ಆದಾಯದ ಮೂಲ. ಬಿಸಿಸಿಐ 2025-26ರ ಕಾಂಟ್ರಾಕ್ಟ್ ಸೈಕಲ್‌ನಲ್ಲಿ ಬುಮ್ರಾ ಎ+ (A+) ಕೆಟಗರಿಯಲ್ಲಿದ್ದಾರೆ. ಈ ವಾರ್ಷಿಕ ಸಂಭಾವನೆ ಜೊತೆಗೆ ಪ್ರತಿ ಪಂದ್ಯಕ್ಕೂ ಬೋರ್ಡ್ ಮ್ಯಾಚ್ ಫೀಸ್ ಕೂಡ ನೀಡುತ್ತದೆ.

• ಟೆಸ್ಟ್ ಮ್ಯಾಚ್: ಪ್ರತಿ ಪಂದ್ಯಕ್ಕೆ ₹15 ಲಕ್ಷ

• ಏಕದಿನ ಮ್ಯಾಚ್: ಪ್ರತಿ ಪಂದ್ಯಕ್ಕೆ ₹6 ಲಕ್ಷ

• ಟಿ20 ಮ್ಯಾಚ್: ಪ್ರತಿ ಪಂದ್ಯಕ್ಕೆ ₹3 ಲಕ್ಷ

ಈ ಮ್ಯಾಚ್ ಫೀಸ್ ಮತ್ತು ಪರ್ಫಾರ್ಮೆನ್ಸ್ ಇನ್ಸೆಂಟಿವ್ಸ್ ಮೂಲಕವೇ ಬುಮ್ರಾ ಖಾತೆಗೆ ಪ್ರತಿ ವರ್ಷ ಸುಮಾರು ₹3 ಕೋಟಿಯಿಂದ ₹5 ಕೋಟಿ ಹೆಚ್ಚುವರಿ ಆದಾಯ ಜಮೆಯಾಗುತ್ತದೆ.

ಬ್ರಾಂಡ್ ಎಂಡಾರ್ಸ್‌ಮೆಂಟ್ ಮತ್ತು ಜಾಹೀರಾತುಗಳ ಅಬ್ಬರ

ಕೇವಲ ಕ್ರಿಕೆಟ್ ಗ್ರೌಂಡ್ ಮಾತ್ರವಲ್ಲ, ಜಾಹೀರಾತು ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್ ಪ್ರಪಂಚದಲ್ಲೂ ಬುಮ್ರಾ ಸಿಕ್ಕಾಪಟ್ಟೆ ಕ್ರೇಜ್ ಸಂಪಾದಿಸಿದ್ದಾರೆ. ಡ್ರೀಮ್ 11, ಬೋಟ್, ಆಸಿಕ್ಸ್, ಒನ್‌ಪ್ಲಸ್, ಥಮ್ಸ್ ಅಪ್, ಜೆಪ್ಟೋ, ಯಿಪ್ಪೀ, ಸ್ಕೆಚರ್ಸ್, ಜಾಗಲ್, ಟಾಟಾ ಮೋಟಾರ್ಸ್‌ನಂತಹ ಟಾಪ್ ಕ್ಲಾಸ್ ಬ್ರಾಂಡ್‌ಗಳಿಗೆ ಅವರು ರಾಯಭಾರಿಯಾಗಿದ್ದಾರೆ. ವರದಿಯೊಂದರ ಪ್ರಕಾರ, ಬುಮ್ರಾ ಸುಮಾರು 20 ಬ್ರಾಂಡ್‌ಗಳ ಜೊತೆ ಕಾಂಟ್ರಾಕ್ಟ್ ಹೊಂದಿದ್ದಾರೆ. ಒಂದೊಂದು ಜಾಹೀರಾತು ಶೂಟ್‌ಗೆ ಬುಮ್ರಾ ದಿನಕ್ಕೆ ₹1.5 ಕೋಟಿಯಿಂದ ₹3 ಕೋಟಿವರೆಗೆ ಚಾರ್ಜ್ ಮಾಡುತ್ತಾರೆ. ಇದರಿಂದ ಪ್ರತಿ ವರ್ಷ ಅವರಿಗೆ ₹8 ಕೋಟಿಯಿಂದ ₹15 ಕೋಟಿವರೆಗೆ ಆದಾಯ ಬರುತ್ತದೆ.

ಅಹಮದಾಬಾದ್ ಡ್ರೀಮ್ ಹೋಮ್ ಮತ್ತು ಪ್ರಾಪರ್ಟಿ ಹೂಡಿಕೆ

ಸಂಪಾದಿಸಿದ ಹಣವನ್ನು ಬುಮ್ರಾ ರಿಯಲ್ ಎಸ್ಟೇಟ್ ಮತ್ತು ಡಿಜಿಟಲ್ ಅಸೆಟ್‌ಗಳಲ್ಲಿ ಬಹಳ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುತ್ತಿದ್ದಾರೆ. ತಮ್ಮ ಹುಟ್ಟೂರಾದ ಅಹಮದಾಬಾದ್‌ನಲ್ಲಿ ಅವರು ಒಂದು ಐಷಾರಾಮಿ ಡಿಸೈನರ್ ಮನೆ ಹೊಂದಿದ್ದಾರೆ. ಈ ಮನೆಯ ಮಾರುಕಟ್ಟೆ ಮೌಲ್ಯ ಸುಮಾರು ₹3 ಕೋಟಿಯಿಂದ ₹4 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಮುಂಬೈನಲ್ಲೂ ಬುಮ್ರಾ ದುಬಾರಿ ರೆಸಿಡೆನ್ಷಿಯಲ್ ಪ್ರಾಪರ್ಟಿಗಳನ್ನು ಹೊಂದಿದ್ದಾರೆ. ಬೇರೆ ಕಡೆಗಳಲ್ಲೂ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದ್ದಾರೆ ಎಂದು ಹಲವು ವರದಿಗಳು ಹೇಳಿವೆ.

ಕಣ್ಮನ ಸೆಳೆಯುವ ಬುಮ್ರಾ ಲಕ್ಸುರಿ ಕಾರ್ ಕಲೆಕ್ಷನ್

ಕ್ರಿಕೆಟ್ ಸ್ಟಾರ್‌ಗಳಿಗೆ ಕಾರುಗಳ ಮೇಲಿರುವ ಕ್ರೇಜ್ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಬುಮ್ರಾ ಗ್ಯಾರೇಜ್‌ನಲ್ಲೂ ಸೂಪರ್ ಫಾಸ್ಟ್ ಮತ್ತು ಲಕ್ಸುರಿ ಕಾರುಗಳ ಕಲೆಕ್ಷನ್ ಇದೆ.

• Mercedes-Maybach S560: ಅತಿ ದುಬಾರಿ ಮತ್ತು ಲಕ್ಸುರಿ ಫೀಚರ್ಸ್ ಇರುವ ಈ ಕಾರಿನ ಬೆಲೆ ಸುಮಾರು ₹2 ಕೋಟಿಗೂ ಹೆಚ್ಚು.

• Nissan GT-R: ವೇಗಕ್ಕೆ ಹೆಸರಾಗಿರುವ ಈ ಸೂಪರ್ ಕಾರಿನ ಬೆಲೆ ಕೂಡ ₹2 ಕೋಟಿಗಿಂತ ಹೆಚ್ಚಿದೆ.

• Range Rover Velar: ಸುಮಾರು ₹90 ಲಕ್ಷ ಬೆಲೆಯ ಮೋಸ್ಟ್ ರಾಯಲ್ ಎಸ್‌ಯುವಿ.

• Toyota Innova Crysta, Hyundai Verna: ದಿನನಿತ್ಯದ ಓಡಾಟಕ್ಕೆ ಬಳಸುವ ಕಂಫರ್ಟಬಲ್ ಕಾರುಗಳು.

ಕ್ರಿಕೆಟ್ ಮೈದಾನದಲ್ಲಿ ಟೀಂ ಇಂಡಿಯಾವನ್ನು ಗೆಲ್ಲಿಸುವ ವಿಕೆಟ್ ಟೇಕಿಂಗ್ ಬೌಲರ್ ಆಗಿ ಬೆಳೆದಿರುವ ಬುಮ್ರಾ, ತಮ್ಮ ಕಠಿಣ ಪರಿಶ್ರಮದಿಂದಲೇ ಈ ಮಟ್ಟದ ಆರ್ಥಿಕ ಸಾಮ್ರಾಜ್ಯವನ್ನು ಕಟ್ಟಿದ್ದಾರೆ.