ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಇಶಾನ್ ಕಿಶನ್ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿ ಟಿ20 ದಾಖಲೆ ಬ್ರೇಕ್ ಮಾಡಿದ ಇಶಾನ್ ಕಿಶನ್ ಹೊಸ ಅಲೆ ಸೃಷ್ಟಿಸಿದ್ದಾರೆ. ಏನಿದು ಇಶಾನ್ ಕಿಶನ್ ದಾಖಲೆ
ಹರಾರೆ (ಜು.25) ಜಿಂಬಾಬ್ವೆ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ 81 ರನ್ ಸಿಡಿಸಿ ಅಬ್ಬರಿಸಿ ಭಾರತದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕೇವಲ 44 ಎಸೆತದಲ್ಲಿ ಇಶಾನ್ ಕಿಶನ್ 81 ರನ್ ಸಿಡಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್ ಮೂಲಕ ಇಶಾನ್ ಕಿಶನ್ ವಿರಾಟ್ ಕೊಹ್ಲಿ ದಾಖಲೆ ಪುಡಿ ಮಾಡಿದ್ದಾರೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಅತೀ ಹೆಚ್ಚು ಟಿ20 ರನ್ ಸಿಡಿಸಿ ಭಾರತೀಯ ಕ್ರಿಕೆಟಿಗ ಅನ್ನೋ ದಾಖಲೆಯನ್ನು ಇಶಾನ್ ಕಿಶನ್ ಬರೆದಿದ್ದಾರೆ.
ಜಿಂಬಾಬ್ವೆ ವಿರುದ್ಧ ಅಬ್ಬರಿಸುವ ಮೂಲಕ ಇಶಾನ್ ಕಿಶನ್ 2026ರ ಸಾಲಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ 783 ರನ್ ಸಿಡಿಸಿದ್ದಾರೆ. ಈ ಮೂಲಕ 2022ರಲ್ಲಿ 20 ಟಿ20 ಪಂದ್ಯಗಳಲ್ಲಿ 781 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ದಾಟಿ, ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ.
ಕ್ಯಾಲೆಂಡರ್ ವರ್ಷವೊಂದರಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಭಾರತೀಯ ಕ್ರಿಕೆಟರ್ಸ (ಟಿ20)
- ಸೂರ್ಯಕುಮಾರ್ ಯಾದವ್: 1,164 ರನ್‌ಗಳು (31 ಪಂದ್ಯಗಳು - 2022)
- ಅಭಿಷೇಕ್ ಶರ್ಮಾ: 859 ರನ್‌ಗಳು (21 ಪಂದ್ಯಗಳು - 2025)
- ಇಶಾನ್ ಕಿಶನ್: 783 ರನ್‌ಗಳು (22 ಪಂದ್ಯಗಳು - 2026)
- ವಿರಾಟ್ ಕೊಹ್ಲಿ: 781 ರನ್‌ಗಳು (20 ಪಂದ್ಯಗಳು - 2022)
ಇಶಾನ್ ಕಿಶನ್ ಇದೀಗ ಟೀಂ ಇಂಡಿಯಾ ಟಿ20 ತಂಡದ ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲೂ ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡಿದ್ದರು. 9 ಪಂದ್ಯಗಳಿಂದ 317 ರನ್ ಸಿಡಿಸಿದ್ದರು. ಜಿಂಬಾಬ್ವೆ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ 24 ಎಸೆತದಲ್ಲಿ 35 ರನ್ ಸಿಡಿಸಿದ್ದರು.
ಸರಣಿ ಗೆಲುವು, ಟೀಂ ಇಂಡಿಯಾ ಕಮ್‌ಬ್ಯಾಕ್
ಐರ್ಲೆಂಡ್ ಸರಣಿ ಸೋಲು, ಇಂಗ್ಲೆಂಡ್ ವಿರುದ್ದ ಸರಣಿ ಸೋಲಿನಿಂದ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಂ ಇಂಡಿಯಾ ಕಂಗಾಲಾಗಿತ್ತು. ಇದೀಗ ಜಿಂಬಾಬ್ವೆ ಮಣಿಸಿ ನಿಟ್ಟುಸಿರು ಬಿಟ್ಟಿದೆ. 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 219 ರನ್ ಸಿಡಿಸಿತ್ತು. ವೈಭರ್ ಸೂರ್ಯವಂಶಿ 20 ರನ್ ಸಿಡಿಸಿದರೆ, ಅಭಿಷೇಕ್ ಶರ್ಮಾ 8 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಇಶಾನ್ ಕಿಶನ್ 81, ಶ್ರೇಯಸ್ ಅಯ್ಯರ್ 25 ರನ್, ತಿಲಕ್ ವರ್ಮಾ ಅಜೇಯ 60 ರನ್, ರಿಂಕು ಸಿಂಗ್ 12 ಹಾಗೂ ಶಿವಂ ದುಬೆ ಅಜೇಯ 6 ರನ್ ಸಿಡಿಸಿದರು.
220 ರನ್ ಬೃಹತ್ ಟಾರ್ಗೆಟ್ ಬೆನ್ನಟ್ಟಲು ಜಿಂಬಾಬ್ವೆ ತಂಡಕ್ಕೆ ಸಾಧ್ಯವಾಗಲಿಲ್ಲ. 17.5 ಓವರ್‌ಗಳಲ್ಲಿ ಜಿಂಬಾಬ್ವೆ 129 ರನ್ ಸಿಡಿಸಿ ಆಲೌಟ್ ಆಯಿತು. ಭಾರತ 90 ರನ್ ಗೆಲುವ ದಾಖಲಿಸಿತು. ಆರಂಭಿಕ 2 ಪಂದ್ಯ ಗೆದ್ದ ಟೀಂ ಇಂಡಿಯಾ ಸರಣಿ ಗೆಲುವು ದಾಖಲಿಸಿತು.


