Asianet Suvarna News Asianet Suvarna News

ಹಾಲಿ ಟೀಂ ಇಂಡಿಯಾ VS ಮಾಜಿ ಕ್ರಿಕೆಟರ್ಸ್ ಚಾರಿಟಿ ಪಂದ್ಯ: ದಿಗ್ಗಜರ ತಂಡ ಪ್ರಕಟಿಸಿದ ಇರ್ಫಾನ್!

ಎಂ.ಎಸ್.ಧೋನಿ ದಿಢೀರ್ ವಿದಾಯ ಹೇಳಿದ ಬಳಿಕ ಹಲವು ಚರ್ಚೆಗಳು ನಡೆಯುತ್ತಿದೆ. ಇದರಲ್ಲಿ ಪ್ರಮುಖವಾಗಿ ಧೋನಿಗೆ ವಿದಾಯದ ಪಂದ್ಯ ನೀಡಬೇಕು ಅನ್ನೋ ಕೂಗು ಹೆಚ್ಚಾಗುತ್ತಿದೆ. ಇದರ ನಡುವೆ ಟೀಂ ಇಂಡಿಯಾ ಮಾಜಿ ವೇಗಿ ಇರ್ಫಾನ್ ಪಠಾಣ್ ಚಾರಿಟಿ ಪಂದ್ಯಕ್ಕೆ ಆಗ್ರಹಿಸಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಹಾಲಿ ಟೀಂ ಇಂಡಿಯಾ ಹಾಗೂ ಎಂ.ಎಸ್.ಧೋನಿ ನೇತೃತ್ವದ ಮಾಜಿ ಟೀಂ ಇಂಡಿಯಾ ನಡುವಿನ ಚಾರಿಟಿ ಪಂದ್ಯಕ್ಕೆ ಪ್ರಸ್ತಾವನೆ ಇಟ್ಟಿದ್ದಾರೆ. ಮಾಜಿ ಟೀಂ ಇಂಡಿಯಾವನ್ನು ಪ್ರಕಟಿಸಿದ್ದಾರೆ.

Irfan pathan announces former team India xi for farewell game charity match
Author
Bengaluru, First Published Aug 22, 2020, 6:27 PM IST

ಮುಂಬೈ(ಆ.22): ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಎಂ.ಎಸ್.ಧೋನಿ ನೇತೃತ್ವದ ಮಾಜಿ ಕ್ರಿಕೆಟಿಗರ ತಂಡ ನಡುವಿನ ಪಂದ್ಯ ಇತರ ಎಲ್ಲಾ ಕ್ರಿಕೆಟ್ ಹೋರಾಟಕ್ಕಿಂತ ಕುತೂಹಲ ಕೆರಳಿಸಲಿದೆ. ಇಂತಹ ಒಂದು ಹೊಸ ಪ್ರಸ್ತಾವನೆಯನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮುಂದಿಟ್ಟಿದ್ದಾರೆ. ಎಂ.ಎಸ್.ಧೋನಿಗೆ ಸರಿಯಾಗಿ ವಿದಾಯದ ಪಂದ್ಯ ಸಿಕ್ಕಿಲ್ಲ. ಹೀಗಾಗಿ ಧೋನಿಗೆ ವಿದಾಯದ ಪಂದ್ಯ ಆಯೋಜಿಸಬೇಕು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಪಠಾಣ್ ಹೊಸ ಪ್ರಸ್ತಾವನೆ ಇಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಧೋನಿ ನಿವೃತ್ತಿಯ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ ನ್ಯೂಸ್..!..

ಧೋನಿಯಂತೆ ಟೀಂ ಇಂಡಿಯಾದ ಹಲವು ದಿಗ್ಗಜ ಕ್ರಿಕೆಟಿಗರು ವಿದಾಯದ ಪಂದ್ಯ ಆಡದೇ ನಿವೃತ್ತಿ ಘೋಷಿಸಿದ್ದಾರೆ. ಈ ರೀತಿ ಸರಿಯಾದ ವಿದಾಯದ ಪಂದ್ಯ ಸಿಗದ ಮಾಜಿ ಕ್ರಿಕೆಟಿಗರು ಹಾಗೂ ಹಾಲಿ ಟೀಂ ಇಂಡಿಯಾ ನಡುವೆ ಚಾರಿಟಿ ಪಂದ್ಯಕ್ಕೆ ಪ್ರಸ್ತಾವನೆ ಇಟ್ಟಿದ್ದಾರೆ. ವಿಶೇಷ ಅಂದರೆ ಇರ್ಫಾನ್ ಪಠಾಣ್ ಮಾಜಿ ಟೀಂ ಇಂಡಿಯಾ XI ತಂಡವನ್ನು ಪ್ರಕಟಿಸಿದ್ದಾರೆ.

ಯಾರಿಗೂ ಬೇಡವಾಗಿದ್ದ ಟಿ20 ನಾಯಕತ್ವ ವಹಿಸಿಕೊಂಡಿದ್ದ ಧೋನಿ..!.

ವಿದಾಯದ ಪಂದ್ಯ ಸಿಗದೆ ನಿವೃತ್ತಿಯಾದ 11 ದಿಗ್ಗಜ ಕ್ರಿಕೆಟಿಗರ ತಂಡವನ್ನು ಇರ್ಫಾನ್ ಪಠಾಣ್ ಪ್ರಕಟಿಸಿದ್ದಾರೆ. ಇದರಲ್ಲಿ ಸಚಿನ್ ತೆಂಡುಲ್ಕರ್‌ ಸ್ಥಾನ ಪಡೆದಿಲ್ಲ. ಕಾರಣ ಸಚಿನ್‌ ವಿದಾಯದ ಪಂದ್ಯ ಆಡಿ ನಿವೃತ್ತಿ ಹೇಳಿದ್ದಾರೆ. ಇನ್ನುಳಿದಂತೆ ಧೋನಿ, ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷಣ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಮಾಜಿ ಟೀಂ ಇಂಡಿಯಾ XI ತಂಡದಲ್ಲಿದ್ದಾರೆ.

ಇರ್ಫಾನ್ ಪಠಾಣ್ ಪ್ರಕಟಿಸಿದ ಮಾಜಿ ಟೀಂ ಇಂಡಿಯಾ XI
ಗೌತಮ್ ಗಂಭೀರ್
ವಿರೇಂದ್ರ ಸೆಹ್ವಾಗ್
ರಾಹುಲ್ ದ್ರಾವಿಡ್
ವಿವಿಎಸ್ ಲಕ್ಷ್ಮಣ್
ಯುವರಾಜ್ ಸಿಂಗ್
ಸುರೇಶ್ ರೈನಾ
ಎಂ.ಎಸ್.ಧೋನಿ
ಇರ್ಫಾನ್ ಪಠಾಣ್
ಅಜಿತ್ ಅಗರ್ಕರ್
ಜಹೀರ್ ಖಾನ್
ಪ್ರಗ್ಯಾನ್ ಓಜಾ

 

ಇರ್ಫಾನ್ ಪಠಾಣ್ ಪ್ರಸ್ತಾವನೆಯನ್ನು ಅಭಿಮಾನಿಗಳು ಬೆಂಬಲಿಸಿದ್ದಾರೆ. ಬಿಸಿಸಿಐ ಕುರಿತು ಚಾರಿಟಿ ಪಂದ್ಯ ಆಯೋಜಿಸುವಂತೆ ಮನವಿ ಮಾಡಿದ್ದಾರೆ. IPL ಟೂರ್ನಿ ಬಳಿಕ ಚಾರಿಟಿ ಪಂದ್ಯ ಆಯೋಜಿಸುವಂತೆ ಮನವಿ ಮಾಡಿದ್ದಾರೆ

Follow Us:
Download App:
  • android
  • ios