ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಿಕ್ಸರ್ ಸುರಿಮಳೆ ಸುರಿಸುತ್ತಿರುವ ರೋಹಿತ್ ಶರ್ಮಾ ಟಿ20 ಕ್ರಿಕೆಟ್’ನಲ್ಲಿ ವಿಶ್ವದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಹಿಂದೆಬಿದ್ದಿದ್ದಾರೆ. ಐರ್ಲೆಂಡ್ ಕ್ರಿಕೆಟಿಗ ಇದೀಗ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಅಬುಧಾಬಿ(ಅ.22): ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಕ್ಷರಶಃ ಅಬ್ಬರಿಸಿದ್ದಾರೆ. ಟೆಸ್ಟ್ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್, ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ದಾಖಲೆ ರೋಹಿತ್ ಪಾಲಾಗಿದೆ. ಆದರೆ ಅಂತರಾಷ್ಟ್ರೀಯ ಚುಟುಕು ಕ್ರಿಕೆಟ್’ನಲ್ಲಿ ಪ್ರಸಕ್ತ ವರ್ಷದಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಇದೀಗ ಐರ್ಲೆಂಡ್ ತಂಡದ ಬ್ಯಾಟ್ಸ್’ಮನ್ ಪಾಲಾಗಿದೆ. 

ರಾಂಚಿ ಟೆಸ್ಟ್: ಸಿಕ್ಸರ್ ಮೂಲಕವೇ ಡಬಲ್ ಸೆಂಚುರಿ ಬಾರಿಸಿದ ರೋಹಿತ್ ಶರ್ಮಾ

Scroll to load tweet…

ಗಂಗೂಲಿಗೆ ಬೇಕು ಧೋನಿ ಭವಿಷ್ಯದ ಸ್ಪಷ್ಟತೆ, ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಉತ್ತರ!

ಅಂತಾ​ರಾ​ಷ್ಟ್ರೀಯ ಟಿ20ಯಲ್ಲಿ ಕ್ಯಾಲೆಂಡರ್‌ ವರ್ಷ​ದಲ್ಲಿ ಅತಿ​ಹೆಚ್ಚು ಸಿಕ್ಸರ್‌ ಸಿಡಿ​ಸಿದ ವಿಶ್ವ ದಾಖಲೆಗೆ ಐರ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕೆವಿನ್‌ ಓಬ್ರಿ​ಯನ್‌ ಪಾತ್ರ​ರಾ​ಗಿ​ದ್ದಾರೆ. 
ಸೋಮ​ವಾರ ಇಲ್ಲಿ ನಡೆದ ಒಮಾನ್‌ ವಿರು​ದ್ಧದ ವಿಶ್ವ​ಕಪ್‌ ಅರ್ಹತಾ ಸುತ್ತಿನ ಪಂದ್ಯ​ದಲ್ಲಿ ಸಿಕ್ಸರ್‌ ಸಿಡಿ​ಸಿದ ಓಬ್ರಿ​ಯನ್‌, ನ್ಯೂಜಿ​ಲೆಂಡ್‌ನ ಕಾಲಿನ್‌ ಮನ್ರೊ ಹೆಸ​ರಿ​ನಲ್ಲಿ​ರುವ 35 ಸಿಕ್ಸರ್‌ಗಳ ದಾಖಲೆಯನ್ನು ಸರಿ​ಗ​ಟ್ಟಿದರು. 2018ರಲ್ಲಿ ಕಿವೀಸ್‌ ಆರಂಭಿಕ ಮನ್ರೊ ಅಂತಾ ರಾಷ್ಟ್ರೀಯ ​ಟಿ20ಯಲ್ಲಿ 35 ಸಿಕ್ಸರ್‌ ದಾಖಲಿಸಿದ್ದರು.

Scroll to load tweet…

ಕೆವಿನ್‌ ಓಬ್ರಿ​ಯನ್‌ 28 ಎಸೆತಗಳಲ್ಲಿ 41 ರನ್ ಬಾರಿಸುವ ಮೂಲಕ ಐರ್ಲೆಂಡ್ ತಂಡ 183 ರನ್ ಗಳಿಸಲು ನೆರವಾದರು. ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಓಮನ್ ತಂಡ 9 ವಿಕೆಟ್ ಕಳೆದುಕೊಂಡು 148 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಐರ್ಲೆಂಡ್ ತಂಡ 35 ರನ್’ಗಳ ಭರ್ಜರಿ ಜಯ ದಾಖಲಿಸಿತು.