ಗಂಗೂಲಿಗೆ ಬೇಕು ಧೋನಿ ಭವಿಷ್ಯದ ಸ್ಪಷ್ಟತೆ, ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಉತ್ತರ!
ಎಂ.ಎಸ್.ಧೋನಿ ವಿದಾಯ ಹಲವು ಬಾರಿ ಚರ್ಚೆಯಾಗಿದೆ. ಇದೀಗ ಬಿಸಿಸಿಐಗೆ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿಗೆ ಆಯ್ಕೆಯಾಗುತ್ತಿದ್ದಂತೆ ಮತ್ತೆ ಧೋನಿ ವಿದಾಯ ಮಾತುಗಳು ಕೇಳಿ ಬರುತ್ತಿದೆ. ಈ ಕುರಿತು ನಾಯಕ ವಿರಾಟ್ ಕೊಹ್ಲಿ ಉತ್ತರಿಸಿದ್ದಾರೆ.
ರಾಂಚಿ(ಅ.22): ಸೌತ್ ಆಫ್ರಿಕಾ ವಿರುದ್ದದ ರಾಂಚಿ ಟೆಸ್ಟ್ ಪಂದ್ಯ ಗೆದ್ದ ಟೀಂ ಇಂಡಿಯಾ, ಸರಣಿಯೊಂದಿಗೆ ಸಂಭ್ರಮಿಸಿತು. ಬಳಿಕ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದರು. ಸೌತ್ ಆಫ್ರಿಕಾ ವಿರುದ್ದದ ಸರಣಿ, ಪ್ರದರ್ಶನ ಸೇರಿದಂತೆ ಹಲವು ವಿಚಾರಗಳ ಕುರಿತ ಕೊಹ್ಲಿ ಮಾಹಿತಿ ನೀಡಿದರು. ಇದರ ನಡುವೆ ಧೋನಿ ವಿದಾಯದ ಕುರಿತ ಪ್ರಶ್ನೆಯೊಂದು ಕೊಹ್ಲಿಯತ್ತ ತೂರಿ ಬಂದಿತ್ತು. ಕೊಹ್ಲಿ ನೀಡಿದ ಉತ್ತರಕ್ಕೆ ಪತ್ರಕರ್ತ ಕೂಡ ಸುಸ್ತಾಗಿದ್ದಾನೆ.
ಇದನ್ನೂ ಓದಿ: ಹರಿಣಗಳ ಶಿಕಾರಿ; ಸರಣಿ ಕ್ಲೀನ್ ಸ್ವೀಪ್ ಮಾಡಿದ ಟಿಂ ಇಂಡಿಯಾ
ಬಿಸಿಸಿಐ ನೂತನ ಅಧ್ಯಕ್ಷ , ಮಾಜಿ ನಾಯಕ ಸೌರವ್ ಗಂಗೂಲಿ, ಧೋನಿ ಭವಿಷ್ಯದ ಕುರಿತು ಸ್ಪಷ್ಟತೆ ಬಯಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಬಳಿಕ ಈ ಕುರಿತು ಚರ್ಚಿಸುವುದದಾಗಿ ಹೇಳಿದ್ದಾರೆ ಎಂದು ಪತ್ರಕರ್ತ ಕೊಹ್ಲಿಯನ್ನು ಪ್ರಶ್ನಿಸಿದ್ದಾನೆ. ಈ ಪ್ರಶ್ನೆಗೆ ನಕ್ಕೆ ಕೊಹ್ಲಿ, ಇದುವರೆಗೆ ಸೌರವ್ ಗಂಗೂಲಿ ಈ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ. ಈ ಕುರಿತು ಗಂಗೂಲಿ ಮಾಹಿತಿ ಕೇಳಿದರೆ ನೀಡುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಧೋನಿ ಪ್ರತ್ಯಕ್ಷ!
ಇನ್ನು ರಾಂಚಿ ಬಾಯ್ ಧೋನಿಯನ್ನು ಭೇಟಿಯಾಗುತ್ತೀರಾ ಎಂದಾಗ, ಧೋನಿ ಇಲ್ಲೇ ಡ್ರೆಸ್ಸಿಂಗ್ ರೂಂನಲ್ಲಿದ್ದಾರೆ. ಬಂದು ಹಾಯ್ ಹೇಳಿ ಎಂದು ಎಲ್ಲರನ್ನು ನಗೆ ಗಡಲಲ್ಲಿ ತೇಲಿಸಿದರು. ಭಾರತದ ಗೆಲವಿನ ಬಳಿಕ ಧೋನಿ, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಜೊತೆ ಮಾತುಕತೆ ನಡೆಸಿದ್ದರು.
ಸೌತ್ ಆಫ್ರಿಕಾ ವಿರುದ್ಧದ 3 ಟೆಸ್ಟ್ ಪಂದ್ಯದ ಸರಣಿಯಲ್ಲಿ ಭಾರತ 3-0 ಅಂತರದ ಗೆಲುವು ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ 203 ರನ್ ಗೆಲುವು ಸಾಧಿಸಿದ ಭಾರತ, 2ನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 137 ರನ್ ಗೆಲುವು ಸಾಧಿಸಿತು. ಇನ್ನು 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 202 ರನ್ ಗೆಲವು ದಾಖಲಿಸಿತು.