ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್ ಹೋರಾಟ ಅಬ್ಬರಿಸಲಿಲ್ಲ ನಾಯಕ ಶ್ರೇಯಸ್ ಹಾಗೂ ರಸೆಲ್ 9 ವಿಕೆಟ್ ನಷ್ಟಕ್ಕೆ 166 ರನ್ ಸಿಡಿಸಿದ ಕೋಲ್ಕತಾ
ಮುಂಬೈ(ಮೇ.09): ವೆಂಕಟೇಶ್ ಅಯ್ಯರ್ ಆರಂಭ, ನಿತೀಶ್ ರಾಣಾ ಹೋರಾಟದಿಂದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 9 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತಾ ನೈಟ್ ರೈಡರ್ಸ್ ಉತ್ತಮ ಆರಂಭ ಪಡೆಯಿತು. ವೆಂಕಟೇಶ್ ಅಯ್ಯರ್ ಹಾಗೂ ಅಜಿಂಕ್ಯ ರಹಾನೆ 60 ರನ್ ಜೊತೆಯಾಟ ನೀಡಿದರು. ವೆಂಕಟೇಶ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ರಹಾನೆ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರು. ಅಯ್ಯರ್ 24 ಎಸೆತದಲ್ಲಿ 43 ರನ್ ಸಿಡಿಸಿ ಔಟಾದರು.
ಅಜಿಂಕ್ಯ ರಹಾನೆ 24 ಎಸೆತದಲ್ಲಿ 25 ರನ್ ಸಿಡಿಸಿ ಔಟಾದರು. ಆರಂಭಿಕರ ಪತನದ ಬಳಿಕ ಕೆಕೆಆರ್ ರನ್ ವೇಗಕ್ಕೆ ಕಡಿವಾಣ ಬಿತ್ತು. ಆದರೆ ನಿತೀಶ್ ರಾಣಾ ಹೋರಾಟ ಕೆಕೆಆರ್ ತಂಡಕ್ಕೆ ನೆರವಾಯಿತು. ಇತ್ತ ಶ್ರೇಯಸ್ ಅಯ್ಯರ್ ಅಬ್ಬರಿಸಲು ಸಾಧ್ಯವಾಗಿಲ್ಲ. ಅಯ್ಯರ್ ಕೇವಲ 6 ರನ್ ಸಿಡಿಸಿ ಔಟಾದರು.
IPLಗೆ ಮತ್ತೆ ಕಮ್ಬ್ಯಾಕ್ ಮಾಡಲಿದ್ದಾರೆ ಯುನಿವರ್ಸಲ್ ಬಾಸ್ ಗೇಲ್..!
ಆ್ಯಂಡ್ರೆ ರಸೆಲ್ ಮತ್ತೆ ನಿರಾಸೆ ಅನುಭಿವಿಸಿದರು. 1 ಸಿಕ್ಸರ್ ಬಾರಿಸಿ ಅಬ್ಬರಿಸಿದ ರಸೆಲ್ ಕೇವಲ 9 ರನ್ ಸಿಡಿಸಿ ಔಟಾದರು. 136 ರನ್‌ಗಳಿಗೆ ಕೆಕೆಆರ್ 4 ವಿಕೆಟ್ ಕಳೆದುಕೊಂಡಿತು.ರಾಣಾ ಅಬ್ಬರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ರಾಣಾ 24 ಎಸೆತದಲ್ಲಿ 4 ಬೌಂಡರಿ 3 ಸಿಕ್ಸರ್ ನೆರವಿನಿಂದ 43 ರನ್ ಸಿಡಿಸಿದರು.
ಬೃಹತ್ ಮೊತ್ತದ ನಿರೀಕ್ಷೆಯಲ್ಲಿದ್ದ ಕೋಲ್ಕತಾ ನೈಟ್ ರೈಡರ್ಸ್ 139 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಶೆಲ್ಡಾನ್ ಜಾಕ್ಸನ್ 5 ರನ್ ಸಿಡಿಸಿ ಔಟಾದರು. ರಿಂಕು ಸಿಂಗ್ ಹೋರಾಟ ಮುಂದುವರಿಸಿದರು. ಆದರೆ ಪ್ಯಾಟ್ ಕಮಿನ್ಸ್, ಸುನಿಲ್ ನರೈನ್ ಹಾಗೂ ಟಿಮ್ ಸೌಥಿ ಶೂನ್ಯ ಸುತ್ತಿದ್ದರು.
ರಿಂಕು ಸಿಂಗ್ ಅಜೇಯ 23 ರನ್ ಸಿಡಿಸಿದರು. ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ 9 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿತು.
2007ರ ಟಿ20 ವಿಶ್ವಕಪ್‌ಗೆ ನಾನು ಟೀಂ ಇಂಡಿಯಾ ಕ್ಯಾಪ್ಟನ್ ಆಗ್ಬೇಕಿತ್ತು: ಯುವಿ ಸ್ಪೋಟಕ ಹೇಳಿಕೆ
ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬಲಿಷ್ಠ ಟೈಟಾನ್ಸ್ ತಂಡವನ್ನೇ ಮಣಿಸಿ ಗೆಲುವಿನ ಕೇಕೆ ಹಾಕಿತ್ತು. ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್. ಮೂವರು ಅಪ್ಪಟ ಟಿ20 ತಜ್ಞ ಫಿನಿಶರ್‌ಗಳಿದ್ದರೂ ಗುಜರಾತ್ ಟೈಟಾನ್ಸ್ ಕೊನೆ ಓವರಲ್ಲಿ ಗೆಲ್ಲಲು ಬೇಕಿದ್ದ ಕೇವಲ 9 ರನ್ ಗಳಿಸಲಾಗಲಿಲ್ಲ. ಇಂತಹ ಅಪರೂಪದ ಓವರ್ ಬೌಲ್ ಮಾಡಿ, ಅನಿರೀಕ್ಷಿತ ಫಲಿತಾಂಶಕ್ಕೆ ಕಾರಣರಾಗಿದ್ದು ಮುಂಬೈ ಇಂಡಿಯನ್ಸ್‌ನ ಡೇನಿಯಲ್ ಸ್ಯಾಮ್ಸ್. 20ನೇ ಓವರಲ್ಲಿ ಕೇವಲ 3 ರನ್ ಗಳಿಸಿದ ಗುಜರಾತ್, 5 ರನ್‌ಗಳಿಂದ ಸೋಲುವ ಮೂಲಕ ಪ್ಲೇ-ಆಫ್ ಹಂತಕ್ಕೆ ಅಧಿಕೃತವಾಗಿ ಪ್ರವೇಶಿಸಲು ಇನ್ನಷ್ಟುಸಮಯ ಕಾಯಬೇಕಾದ ಪರಿಸ್ಥಿತಿ ತಂದುಕೊಂಡಿದೆ.ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿದ್ದರೂ ಈ ಗೆಲುವು ಮುಂಬೈನ ಆತ್ಮವಿಶ್ವಾಸ ಹೆಚ್ಚಿಸಿದೆ. ಮುಂದಿನ ಆವೃತ್ತಿಗೆ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಬಿಡಬೇಕು ಎನ್ನುವು ಲೆಕ್ಕಾಚಾರ ನಡೆಸುತ್ತಿದೆ.
