Asianet Suvarna News Asianet Suvarna News

IPLಗೆ ಮತ್ತೆ ಕಮ್​​​​ಬ್ಯಾಕ್​ ಮಾಡಲಿದ್ದಾರೆ ಯುನಿವರ್ಸಲ್​ ಬಾಸ್ ಗೇಲ್‌​..!

* ಐಪಿಎಲ್‌ಗೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ ಕ್ರಿಸ್‌ ಗೇಲ್

* ಈ ಬಾರಿ ಐಪಿಎಲ್‌ನಿಂದ ಹೊರಗುಳಿದ ಯೂನಿವರ್ಸಲ್‌ ಬಾಸ್‌

* 2023ರ ಐಪಿಎಲ್‌ನಲ್ಲಿ ಆಡಲು ರೆಡಿ ಎಂದ ಕ್ರಿಸ್‌ ಗೇಲ್

IPL 2022 Universal Boss fame Chris Gayle eyes on comeback next year to IPL kvn
Author
Bengaluru, First Published May 9, 2022, 7:18 PM IST

ಬೆಂಗಳೂರು: 15ನೇ ಐಪಿಎಲ್​ ಸ್ಟಾರ್​ ಆಟಗಾರರಿಲ್ಲದೇ ಕಳೆಗುಂದಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಮಾಸ್​ ಮಾಹಾರಾಜ ಎಬಿ ಡಿವಿಲಿಯರ್ಸ್​ ನಿವೃತ್ತಿ ಘೋಷಿಸಿದ್ರು. ಇನ್ನು ಮತ್ತೋರ್ವ ಸ್ಪೋಟಕ ಬ್ಯಾಟರ್​​ ಕ್ರಿಸ್​ ಗೇಲ್​ ಸೀಸನ್​​ನಿಂದ ಹಿಂದೆ ಸರಿದ್ರು ಬಿಗ್ ಶಾಕ್​ ನೀಡಿದ್ರು. ಪವರ್​​ ಹಿಟ್ಟರ್ ರೈನಾ ಬಿಕರಿಯಾಗದೇ ಹೊರಬಿದ್ರು. ಈ ಸ್ಟಾರ್​​​ ಲೆಜೆಂಡ್​​​ಗಳ ಆಟವನ್ನ  ಫ್ಯಾನ್ಸ್ ಖಂಡಿತ ಸಾಕಷ್ಟು ಮಿಸ್​ ಮಾಡಿಕೊಳ್ತಿದ್ದಾರೆ. ಈ ಮೂವರ ಪೈಕಿ ಯುನಿವರ್ಸಲ್​ ಬಾಸ್​ ಮತ್ತೆ ಕಲರ್​ ಫುಲ್​​ ಲೋಕಕ್ಕೆ ಧುಮುಕಲು ಸಜ್ಜಾಗಿದ್ದಾರೆ. 

ಮುಂದಿನ IPL ನಲ್ಲಿ ಕಣಕ್ಕಿಳಿಯಲಿದ್ಧಾರೆ ಗೇಲ್​​ :

ಯೆಸ್​​, ತನ್ನ ಸ್ಪೋಟಕ ಆಟದಿಂದಲೇ ಮನೆಮಾತಾಗಿ, ಐಪಿಎಲ್​​​ನ ಸ್ಫೋಟಕ ದಾಂಡಿಗ ಅಂತ ಕರೆಸಿಕೊಳ್ಳೋ ಕ್ರಿಸ್​ ಗೇಲ್​ ಮತ್ತೆ ಐಪಿಎಲ್​​​ ಗೆ ಎಂಟ್ರಿಕೊಟ್ಟು ಫ್ಯಾನ್ಸ್  ರಂಜಿಸಲು ರೆಡಿಯಾಗಿದ್ದಾರೆ. ಟೂರ್ನಿ ಆರಂಭಕ್ಕೂ ಭಯಾನಕ ಬ್ಯಾಟರ್ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಸರಿದಿದ್ರು. ಗೇಲ್​​ರ ಈ ನಿರ್ಧಾರ ಕಟ್ಟಾಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಯಾಕಂದ್ರೆ ಗೇಲ್​ ಇದ್ದ ಕಡೆ ಸಿಕ್ಸರ್​​​-ಬೌಂಡ್ರಿಗಳ ಮಜಾ ಇರುತ್ತೆ. ಜೋಶ್​​​ ಹೈ ಇರುತ್ತೆ. ಈ ಸಲ ಇದು ಯಾವುದೂ ಇಲ್ಲದಾಗಿದೆ. 

ಡೆಲ್ಲಿ ಎದುರಿನ ಪಂದ್ಯದ ವೇಳೆ ಧೋನಿ ಬ್ಯಾಟ್‌ ಕಚ್ಚಿದ್ದೇಕೆ..? ಈ ಬಗ್ಗೆ ಅಮಿತ್ ಮಿಶ್ರಾ ಹೇಳಿದ್ದೇನು..?

ಸದ್ಯ 15ನೇ ಐಪಿಎಲ್​​ನಿಂದ ಹಿಂದೆ ಸರಿದಿದ್ದ ಗೇಲ್​ ಮತ್ತೆ ಐಪಿಎಲ್​ ಆಡೋದು ಖಚಿತವಾಗಿದೆ. ಮುಂದಿನ ಐಪಿಎಲ್​​ನಲ್ಲಿ ರಂಗಿನ್ ಆಟದಲ್ಲಿ ಕಣಕ್ಕಿಳಿಯೋದಾಗಿ ಕ್ರಿಸ್​ ಗೇಲ್​ ಹೇಳಿದ್ಧಾರೆ. ಅಲ್ಲಿಗೆ ಕೆರಿಯರ್​ ದೈತ್ಯ ಮತ್ತೆ ಐಪಿಎಲ್ ಆಡ್ತಾರೋ, ಇಲ್ವೋ ಅನ್ನೋ ಗೊಂದಲಕ್ಕೆ ಆನ್ಸರ್ ಸಿಕ್ಕಂತಾಗಿದೆ. ಅಲ್ಲದೇ ಫ್ಯಾನ್ಸ್​ ಗೇಲ್​​ರ ಈ ಮಾತಿನಿಂದ ಫುಲ್​ ಖುಷ್ ಆಗಿದ್ದಾರೆ. ‘ನಾನು 3 ತಂಡಗಳ ಪರ ಆಡಿದ್ದೇನೆ. ಕೆಕೆಆರ್‌, ಆರ್‌ಸಿಬಿ ಹಾಗೂ ಪಂಜಾಬ್‌. ಈ ಪೈಕಿ ಆರ್‌ಸಿಬಿಯಲ್ಲಿ ಅತ್ಯುತ್ತಮ ಸಮಯ ಕಳೆದಿದ್ದೇನೆ. ಪಂಜಾಬ್‌ ತಂಡದಲ್ಲೂ ಅನುಭವ ಚೆನ್ನಾಗಿತ್ತು. ಈ ಎರಡು ತಂಡಗಳಿಗೆ ಕಪ್‌ ಗೆಲ್ಲಿಸಿಕೊಡಬೇಕು ಎನ್ನುವ ಹಂಬಲವಿದೆ’ ಎಂದು ಗೇಲ್‌ ಹೇಳಿದ್ದಾರೆ.

Follow Us:
Download App:
  • android
  • ios