Asianet Suvarna News Asianet Suvarna News

2007ರ ಟಿ20 ವಿಶ್ವಕಪ್‌ಗೆ ನಾನು ಟೀಂ ಇಂಡಿಯಾ ಕ್ಯಾಪ್ಟನ್‌ ಆಗ್ಬೇಕಿತ್ತು: ಯುವಿ ಸ್ಪೋಟಕ ಹೇಳಿಕೆ

* ತಾನು ಟೀಂ ಇಂಡಿಯಾ ನಾಯಕನಾಗಬೇಕಿತ್ತು ಎಂದ ಯುವರಾಜ್ ಸಿಂಗ್

* 2007ರಲ್ಲಿ ಟೀಂ ಇಂಡಿಯಾ ನಾಯಕರಾಗಿ ಆಯ್ಕೆಯಾಗಿದ್ದ ಎಂ ಎಸ್ ಧೋನಿ

* 3 ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಮಹೇಂದ್ರ ಸಿಂಗ್ ಧೋನಿ

I Was supposed to be the Team India captain Says Yuvraj Singh kvn
Author
Bengaluru, First Published May 9, 2022, 2:45 PM IST

ನವದೆಹಲಿ(ಮೇ.09): ಭಾರತದ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ (Yuvaraj Singh), 2007ರ ಟಿ20 ವಿಶ್ವಕಪ್‌ಗೆ (ICC T20 World Cup) ಎಂ.ಎಸ್‌.ಧೋನಿ (MS Dhoni) ಅಲ್ಲ, ತಾವು ಭಾರತ ತಂಡದ ನಾಯಕನಾಗಬೇಕಿತ್ತು ಎನ್ನುವ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಟಿ20 ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಅವರ ಈ ಹೇಳಿಕೆ ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

ಖಾಸಗಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಯುವರಾಜ್‌ ಸಿಂಗ್, ‘2007ರಲ್ಲಿ ಸಚಿನ್‌ ತೆಂಡುಲ್ಕರ್‌ (Sachin Tendulkar) ಹಾಗೂ ಗ್ರೆಗ್‌ ಚಾಪೆಲ್‌ ನಡುವೆ ಸಂಘರ್ಷ ಏರ್ಪಟ್ಟಿತ್ತು. ನಾನು ಸಹಜವಾಗಿಯೇ ಸಚಿನ್‌ರನ್ನು ಬೆಂಬಲಿಸಿದ್ದೆ. ಈ ಕಾರಣಕ್ಕೆ ಗ್ರೇಗ್ ಚಾಪೆಲ್‌ ನಾನು ನಾಯಕನಾಗುವುದನ್ನು ತಪ್ಪಿಸಿದರು ಎಂದು ನನಗೆ ಗೊತ್ತಾಯಿತು. ಇದು ನಿಜವೇ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಆಗಿನ ಸನ್ನಿವೇಶಗಳು ಹಾಗಿದ್ದವು. ನನ್ನನ್ನು ಏಕಾಏಕಿ ಉಪನಾಯಕನ ಸ್ಥಾನದಿಂದಲೂ ಕೆಳಗಿಳಿಸಲಾಯಿತು’ ಎಂದಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ರೇಗ್ ಚಾಪೆಲ್ ಅವರನ್ನು ಎರಡು ವರ್ಷಗಳ ಅವಧಿಗೆ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಚಾಪೆಲ್ ಕೋಚ್ ಆದ ಬಳಿಕ ಸೌರವ್ ಗಂಗೂಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಇನ್ನು ರಾಹುಲ್ ದ್ರಾವಿಡ್ ಅವರಿಗೆ ಟೀಂ ಇಂಡಿಯಾ ನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ, 2007ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್‌ ಹಂತದಲ್ಲೇ ಹೊರಬೀಳುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿತ್ತು.   

IPL 2022 ಪ್ರತಿಷ್ಠೆಯ ಕಾದಾಟಕ್ಕೆ ಸಜ್ಜಾದ ಮುಂಬೈ ಇಂಡಿಯನ್ಸ್‌-ಕೋಲ್ಕತಾ ನೈಟ್ ರೈಡರ್ಸ್‌..!

ವಿರೇಂದ್ರ ಸೆಹ್ವಾಗ್ ಟೀಂ ಇಂಡಿಯಾ (Team India) ಹಿರಿಯ ಆಟಗಾರರಾಗಿದ್ದರೂ ಸಹಾ, ಇಂಗ್ಲೆಂಡ್ ಪ್ರವಾಸದಲ್ಲಿ ವೀರೂ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರಲಿಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ನಾಯಕರಾಗಿದ್ದಾಗ ನಾನು ಉಪನಾಯಕನಾಗಿದ್ದೆ. ಹೀಗಾಗಿ ನಾನೇ ತಂಡದ ನಾಯಕನಾಗಬೇಕಿತ್ತು. ಆದರೆ ಸಚಿನ್ ಪರವಾಗಿ ಮಾತನಾಡಿದ್ದಕ್ಕಾಗಿ ನಾಯಕತ್ವ ಕೈ ತಪ್ಪಿತು. ಇದರ ಬಗ್ಗೆ ನನಗ್ಯಾವ ಬೇಸರವೂ ಇಲ್ಲ. ಒಂದು ವೇಳೆ ಹೀಗೆಯೇ ಆಗಿದ್ದರೂ ಸಹಾ ನಾನು ನನ್ನ ಆಟಗಾರರನ್ನು ಸಪೋರ್ಟ್‌ ಮಾಡುತ್ತಿದ್ದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ನಾಯಕರಾದ ಬಳಿಕ ಹೊಸ ಇತಿಹಾಸವನ್ನೇ ಬರೆದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ 2011ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಧೋನಿ ನೇತೃತ್ವದ ಟೀಂ ಇಂಡಿಯಾ 28 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಜಯಿಸುವ ಮೂಲಕ ಐಸಿಸಿಯ ಮೂರು ಟ್ರೋಫಿ ಗೆದ್ದ ಏಕೈಕ ನಾಯಕ ಎನ್ನುವ ಕೀರ್ತಿಗೆ ಧೋನಿ ಪಾತ್ರರಾಗಿದ್ದಾರೆ. 

Follow Us:
Download App:
  • android
  • ios