ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಮತ್ತು ವರುಣ್ ಚಕ್ರವರ್ತಿ ಕಮ್‌ಬ್ಯಾಕ್ ಮಾಡಿದ್ದಾರೆ. ಐಪಿಎಲ್‌ನಲ್ಲಿನ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಭುವಿಗೆ ಅವಕಾಶ ನೀಡಲಾಗಿದೆ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ.

ಟೀಂ ಇಂಡಿಯಾ ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಮತ್ತೆ ಅಂತರಾಷ್ಟ್ರೀಯ ತಂಡಕ್ಕೆ ಕಾಲಿಟ್ಟಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಶೀಘ್ರವೇ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಹಿರಿಯ ಸೆಲೆಕ್ಷನ್ ಕಮಿಟಿ 36 ವರ್ಷದ ಭುಮಿ ಅವರಿಗೆ ಅವಕಾಶ ನೀಡಿದೆ. ವಿಶೇಷ ಎಂದರೆ ಭುವಿ ತಮ್ಮ ಟೀಂ ಇಂಡಿಯಾ ಪರ ತಮ್ಮ ಕೊನೆಯ ಪಂದ್ಯವನ್ನು 2022ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಆ ಬಳಿಕ ಟೀ ಇಂಡಿಯಾದಿಂದ ದೂರವಾಗಿದ್ದರು. ದೇಶೀಯ ಕ್ರಿಕೆಟ್ ಟೂರ್ನಿ ಹಾಗೂ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಈಗ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

7.95 ಎಕಾನಮಿಯೊಂದಿಗೆ 28 ವಿಕೆಟ್

ಆರ್‌ಸಿಬಿ ಪರ ಕಳೆದ ಎರಡು ಟೂರ್ನಿಗಳಲ್ಲಿ ಭುವನೇಶ್ವರ್ ಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಐಪಿಎಲ್ 2026ರ ಆವೃತ್ತಿ ಅವರಿಗೆ ಬಹಳ ವಿಶೇಷವಾಗಿತ್ತು. ಈ ಆವೃತ್ತಿಯಲ್ಲಿ ಭುವಿ ಕೇವಲ 7.95 ಎಕಾನಮಿಯೊಂದಿಗೆ ಬರೋಬ್ಬರಿ 28 ವಿಕೆಟ್ ಗಳಿಸಿದ್ದರು. ಅದರಲ್ಲೂ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಅವರ ಸ್ವಿಂಗ್, ಯಾರ್ಕರ್‌ಗಳಿಗೆ ಎದುರಾಳಿಗಳ ಬಳಿ ಉತ್ತರವೇ ಇರಲಿಲ್ಲ. ಸದ್ಯ ಅದ್ಭುತ ಫಾರ್ಮ್‌ನಲ್ಲಿರುವ ಭುಮಿ ಅವರಿಗೆ ನ್ಯೂಜಿಲೆಂಡ್ ಸರಣಿಯಗೆ ಆಯ್ಕೆ ಮಾಡಿರುವುದು ಆರ್ಸಿಬಿ ಅಭಿಮಾನಿಗಳು ಸಖತ್ ಖುಷಿ ಕೊಟ್ಟಿದೆ.

ವರುಣ್ ಚಕ್ರವರ್ತಿ ಕಮ್‌ಬ್ಯಾಕ್

ಇನ್ನು, 16 ಮಂದಿ ಆಟಗಾರರ ಪಟ್ಟಿಯಲ್ಲಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರೂ ಕೂಡ ಕಮ್ ಬ್ಯಾಕ್ ಮಾಡಿದ್ದಾರೆ. ಗಾಯದ ಕಾರಣದಿಂದ 2026ರಿಂದ ಟೀಂ ಇಂಡಿಯಾದಿಂದ ದೂರ ಆದ ವರುಣ್ ಸ್ಥಾನದಲ್ಲಿ ರವಿ ಬಿಷ್ಣೋಯ್ ಅವಕಾಶ ಪಡೆದುಕೊಂಡಿದ್ದರು. ಮತ್ತೊಂದು ಕಡೆ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ನ್ಯೂಜಿಲೆಂಡ್ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ವರ್ಕ್ ಲೋಡ್ ಕಡಿಮೆ ಮಾಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಅಕ್ಟೋಬರ್ 22ರಿಂದ ಆರಂಭವಾಗಲಿದೆ.

ಟೀಂ ಇಂಡಿಯಾ ಇಂತಿದೆ

ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಟೀಂ ಇಂಡಿಯಾ ತಂಡ ಇಂತಿದೆ: ಶ್ರೇಯಸ್ ಅಯ್ಯರ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಪ್ರಿನ್ಸ್ ಸಿಂಗ್ ಯಾದವ್, ಮಯಾಂಕ್ ಯಾದವ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್.

Scroll to load tweet…