Asianet Suvarna News Asianet Suvarna News

IPL ಇತಿಹಾಸದಲ್ಲಿ ಕಂಡು ಕೇಳರಿಯದ ದಾಖಲೆ, ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಗೆ ಸೇಲ್!

ಐಪಿಎಲ್ ಹರಾಜಿನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಪ್ಯಾಟ್ ಕಮಿನ್ಸ್ 20.50 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಬರೆದ ಬೆನ್ನಲ್ಲೇ ಇದೀಗ ಮಿಚೆಲ್ ಸ್ಟಾರ್ಟ್ ಬರೋಬ್ಬರಿ 24.75 ಕೋಟಿ ರೂಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ಪಾಲಾಗಿದ್ದಾರೆ. 

IPL auction 2024 mitchell starc becomes most expensive players in IPL history after breaks pat cummis record ckm
Author
First Published Dec 19, 2023, 3:51 PM IST

ದುಬೈ(ಡಿ.19) ಐಪಿಎಲ್ ಹರಾಜು ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ. ಗರಿಷ್ಠ ಮೊತ್ತಕ್ಕೆ ದಾಖಲಾದ ಆಟಗಾರರ ಪೈಕಿ ಇದೀಗ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಸ್ಟಾರ್ಕ್ ಬರೋಬ್ಬರಿ 24.75 ಕೋಟಿ ರೂಪಾಯಿಗೆ  ಕೆಕೆಆರ್ ತಂಡದ ಪಾಲಾಗಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌ಗೆ 20.50 ಕೋಟಿ ರೂಪಾಯಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದ ಗರಿಷ್ಠ ಬಿಡ್ಡಿಂಗ್ ಎಂಬ ಹೆಗ್ಗಳಿಕೆಗ ಪಾತ್ರವಾಗಿತ್ತು. ಆದರೆ ಕೆಲವೇ ಹೊತ್ತಲ್ಲಿ ಮಿಚೆಲ್ ಸ್ಟಾರ್ಕ್ ಬಿರುಗಾಳಿಯಂತೆ ಎಲ್ಲಾ ದಾಖಲೆ ದೂಳೀಪಟ ಮಾಡಿದ್ದಾರೆ. 

ಐಪಿಎಲ್‌ ಇತಿಹಾಸದ 10 ದುಬಾರಿ ಆಟಗಾರರು:
1.ಮಿಚೆಲ್ ಸ್ಟಾರ್ಕ್: 24.75 ಕೋಟಿ ರೂಪಾಯಿ
2. ಪ್ಯಾಟ್ ಕಮಿನ್ಸ್‌: 20.5 ಕೋಟಿ - SRH 2024
3. ಸ್ಯಾಮ್ ಕರ್ರನ್: 18.50 ಕೋಟಿ - PBKS- 2023
4. ಕ್ಯಾಮರೋನ್ ಗ್ರೀನ್: 17.50 ಕೋಟಿ MI-2023
5. ಬೆನ್ ಸ್ಟೋಕ್ಸ್‌: 16.25 ಕೋಟಿ - CSK -2023
6. ಕ್ರಿಸ್ ಮೋರಿಸ್: 16.25 ಕೋಟಿ - RR -2021
7. ನಿಕೋಲಸ್ ಪೂರನ್: 16 ಕೋಟಿ - LSG - 2023
8. ಯುವರಾಜ್ ಸಿಂಗ್: 16 ಕೋಟಿ -DD- 2015
9. ಪ್ಯಾಟ್ ಕಮಿನ್ಸ್‌: 15.50 ಕೋಟಿ - KKR-2020
10. ಇಶಾನ್ ಕಿಶನ್: 15.25 ಕೋಟಿ - MI- 2022

IPL Auction ದಾಖಲೆ ಖರೀದಿ ಮಾತ್ರವಲ್ಲ, ನಗುವಿನಲ್ಲೂ ಕ್ಲೀನ್ ಬೋಲ್ಡ್ ಮಾಡಿದ SRH ಒಡತಿ ಕಾವ್ಯ!

ಮಿಚೆಲ್ ಸ್ಟಾರ್ಕ್ ಖರೀದಿಗೆ ಲಖನೌ ಸೂಪರ್ ಜೈಟ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಬಾರಿ ಪೈಪೋಟಿ ಎರ್ಪಟ್ಟಿತ್ತು. ಜಿದ್ದಾ ಜಿದ್ದಿನಿಂದ ಕೂಡಿದ ಬಿಡ್ಡಿಂಗ್‌ನಲ್ಲಿ 20 ಕೋಟಿ ರೂಪಾಯಿ ದಾಡುತ್ತಿದ್ದಂತೆ ಲಖನೌ ಹಾಗೂ ಕೆಕೆಆರ್ ತಂಡಗಳು ಮಾತ್ರ ಬಿಡ್ಡಿಂಗ್ ಮುಂದುವರಿಸಿತು. ಇತರ ತಂಡಗಳು ಬಿಡ್ಡಿಂಗ್‌ನಿಂದ ಹಿಂದೆ ಸರಿಯಿತು. ಇತ್ತ ಆರ್‌ಸಿಬಿ ಅಲ್ಜಾರಿ ಜೋಸೆಫ್ ಖರೀದಿಸಿದ ಕಾರಣ ಪರ್ಸ್ ಬಹುತೇಕ ಖಾಲಿಯಾಗಿತ್ತು. ಹೀಗಾಗಿ ಸ್ಟಾರ್ಕ್ ಬಿಡ್ಡಿಂಗ್‌ನಲ್ಲಿ ಆರ್‌ಸಿಬಿ ಆರಂಬಿಕ ಹಂದಲ್ಲೇ ಹಿಂದೆ ಸರಿಯಿತು.

ಕೆಕೆಆರ್ ಹಾಗೂ ಲಖನೋ ಜಿದ್ದಿಗೆ ಬಿದ್ದು ಪೈಪೋಟಿ ನಡೆಸಿತು. ಕೊನೆಗೆ ಕೆಕೆಆರ್ 24.75 ಕೋಟಿ ರೂಪಾಯಿಗೆ ಸ್ಟಾರ್ಕ್ ಖರೀದಿಸಿತು. ಇದು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. 15 ರಿದ 18 ಕೋಟಿ ರೂಪಾಯಿ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತವಾಗಿತ್ತು. ಆದರೆ ಈ ಬಾರಿಯ ಹರಾಜಿನಲ್ಲಿ 20 ರಿಂದ 25 ಕೋಟಿಗೆ ಈ ಬೆಲೆ ಏರಿಕೆಯಾಗಿದೆ.

Breaking: ಸನ್‌ರೈಸರ್ಸ್‌ಗೆ ವಿಶ್ವಕಪ್‌ ಫೈನಲ್‌ ಹೀರೋ, 20 ಕೋಟಿಗೆ ಮಾರಾಟವಾದ ಕಮ್ಮಿನ್ಸ್‌

Follow Us:
Download App:
  • android
  • ios