ಐಪಿಎಲ್ 2027 ಟೂರ್ನಿಗೂ ಮೊದಲೇ ಎಂಎಸ್ ಧೋನಿ ನಿವೃತ್ತಿಯಾಗುತ್ತಾರಾ? ಈ ಕುರಿತು ಬೆಂಗಳೂರಿನಲ್ಲಿ ಸ್ವತಃ ಧೋನಿ ಮಾತನಾಡಿದ್ದಾರೆ. ನಿವೃತ್ತಿ ಕುರಿತು ಮಹತ್ವದ ಅಪ್ಡೇಟ್ ನೀಡಿದ್ದು, ಡಿಸೆಂಬರ್ನಲ್ಲಿ ಮಹತ್ವದ ಘೋಷಣೆ ಮಾಡಲಿದ್ದಾರೆ.
ಬೆಂಗಳೂರು (ಅ.25) ಐಪಿಎಲ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ಗೆ ತಲೆನೋವು ಹೆಚ್ಚಾಗಿದೆ. ನವೆಂಬರ್ 15ರೊಳಗೆ ತಂಡದ ರಿಟೇನ್ ಹಾಗೂ ರಿಲೀಸ್ ಆಟಗಾರರ ಪಟ್ಟಿ ಘೋಷಣೆ ಮಾಡಬೇಕಿದೆ. ಎಂಎಸ್ ಧೋನಿಯನ್ನು ರಿಟೇನ್ ಮಾಡಿಕೊಳ್ಳಬೇಕಾ, ರಿಲೀಸ್ ಮಾಡಬೇಕಾ ಅನ್ನೋ ಗೊಂದಲ ತೀವ್ರಗೊಳ್ಳುತ್ತಿದೆ. ಇದರ ನಡುವೆ ಎಂಎಸ್ ಧೋನಿ ಮಹತ್ವದ ಹೇಳಿಕೆ ನೀಡಿದ್ದಾರೆ. ಐಪಿಎಲ್ ಟೂರ್ನಿಯಿಂದ ನಿವೃತ್ತಿ ಕುರಿತು ಎಂಎಸ್ ಧೋನಿ ಮೌನ ಮುರಿದಿದ್ದಾರೆ.ಡಿಸೆಂಬರ್ನಲ್ಲಿ ಧೋನಿ ನಿರ್ಧಾರ ಘೋಷಿಸಲಿದ್ದಾರೆ.
ಡಿಸೆಂಬರ್ನಲ್ಲಿ ಧೋನಿ ನಿರ್ಧಾರ ಘೋಷಣೆ
ಡಿಸೆಂಬರ್ ತಿಂಗಳಲ್ಲಿ ಎಂಎಸ್ ಧೋನಿ ಐಪಿಎಲ್ ಟೂರ್ನಿಯಿಂದ ನಿವೃತ್ತಿ ಅಥವಾ ಮುಂದುವರಿಕೆ ನಿರ್ಧಾರ ಘೋಷಿಸಲಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಧೋನಿ, ಹೆಲ್ತ್ ಕೇರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಧೋನಿ, ಐಪಿಎಲ್ 2027ರ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕುರಿತು ಈಗಲೇ ನಿರ್ಧಾರ ತೆಗೆದುಕೊಂಡಿಲ್ಲ. ಕೆಲ ಚೆಕ್ಅಪ್ ಮಾಡಬೇಕಿದೆ. ವೈದ್ಯರ ಪರೀಕ್ಷೆ, ಚೆಕ್ಅಪ್ ವರದಿ ಬಂದ ಬಳಿಕ ನಿರ್ಧಾರ ಘೋಷಿಸುತ್ತೇನೆ. ಡಿಸೆಂಬರ್ನಲ್ಲಿ ಫಿಟ್ನೆಸ್ ಚೆಕ್ಅಪ್ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ವೈದ್ಯರ ಮೇಲೆ ಒತ್ತಡ ಎಂದ ಧೋನಿ
ವೈದ್ಯರ ಮೇಲೆ ಹೆಚ್ಚಿನ ಒತ್ತಡವಿದೆ. ಹಳೇ ವಾಹನ ರಸ್ತೆಯಲ್ಲಿ ಚಲಿಸುತ್ತದೋ ಇಲ್ಲವೋ ಅನ್ನೋದು ವೈದ್ಯರು ಹೇಳಬೇಕು. ಚಲಿಸುತ್ತದೆ ಎಂದು ಸುಮ್ಮನೆ ಹೇಳಲು ಸಾಧ್ಯವಿಲ್ಲ.ಹೀಗಾಗಿ ಎಲ್ಲಾ ಒತ್ತಡ ವೈದ್ಯರ ಮೇಲಿದೆ. ಐಪಿಎಲ್ ಟೂರ್ನಿಗೆ ನನ್ನ ದೇಹ ಸಜ್ಜಾಗಿದೆಯಾ, ಮತ್ತೊಂದು ಐಪಿಎಲ್ ಆಡುವಷ್ಟು ಫಿಟ್ ಆಗಿದ್ದೇನಾ ಅನ್ನೋದು ವೈದ್ಯರ ಪರೀಕ್ಷೆಯಲ್ಲಿ ಗೊತ್ತಾಗಲಿದೆ ಎಂದು ಧೋನಿ ಹೇಳಿದ್ದಾರೆ. ಈ ಮೂಲಕ ತಾವು ಮಾನಸಿಕವಾಗಿ ಫಿಟ್ ಆಗಿರುವ ಸೂಚನೆಯನ್ನು ನೀಡಿದ್ದಾರೆ.
ಸಂಕಷ್ಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್
ಎಂಎಸ್ ಧೋನಿ ಡಿಸೆಂಬರ್ನಲ್ಲಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಧೋನಿ ಹಾಗೂ ಚೆನ್ನೈ ಫ್ರಾಂಚೈಸಿ ನಡುವಿನ ಸಂಬಂಧ ಹಳಸಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ಧೋನಿ ನಿರ್ಧಾರ ಈ ಮಾತಿಗೆ ಪುಷ್ಟಿ ನೀಡಿದೆ. ನವೆಂಬರ್ 15ರೊಳಗೆ ತಂಡದ ಲಿಸ್ಟ್ ಪ್ರಕಟ ಮಾಡಬೇಕಿದೆ. ಧೋನಿ ರಿಟೇನ್ ಮಾಡಬೇಕಾ, ಅಥವಾ ಉಳಿಸಿಕೊಳ್ಳಬೇಕಾ ಅನ್ನೋ ಗೊಂದಲ ಹೆಚ್ಚಾಗಿದೆ. ಇತ್ತ ಧೋನಿ ಡಿಸೆಂಬರ್ನಲ್ಲಿ ಅನೌನ್ಸ್ ಮಾಡುವುದಾಗಿ ಹೇಳಿರುವುದು ಸಿಎಸ್ಕೆ ಫ್ರಾಂಚೈಸಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಜಹೀರ್ ಖಾನ್ ಕೋಚ್, ಹಲವು ಬದಲಾವಣೆ
ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಕೆಲ ಸೀಸನ್ ತೀವ್ರ ನಿರಾಸೆ ಅನುಭವಿಸಿದೆ. ಹೀಗಾಗಿ ಹಲವು ಬದಲಾವಣೆ ಮಾಡಲಾಗಿದೆ. ಮಾಜಿ ವೇಗಿ ಜಹೀರ್ ಖಾನ್ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಜಹೀರ್ ನೇಮಕ ಹಿಂದೆ ಎಂಎಸ್ ಧೋನಿ ಸಲಹೆ ಪ್ರಮುಖವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಲಾಗುತ್ತಿದೆ.ಇದೀಗ ಜಹೀರ್ ಖಾನ್ ಮಾರ್ಗದರ್ಶನದಲ್ಲಿ ಸಿಎಸ್ಕೆ ಹಲವು ಮಹತ್ತರ ಬದಲಾವಣೆ ಮಾಡಲು ಮುಂದಾಗಿದೆ. ಹೀಗಾಗಿ ರಿಟೇನ್ ಆಟಗಾರರ ಲಿಸ್ಟ್ ಇದೀಗ ತೀವ್ರ ತಲೆನೋವಿನಿಂದ ಕೂಡಿದೆ.







