'Boys Becomming Men' ಕೂತುಹಲ ಸೃಷ್ಟಿಸಿದ ಗಂಭೀರ ಪೋಸ್ಟ್; ಏನಿದರ ಒಳಗುಟ್ಟು?
Gautam Gambhir Post: 'Boys Becoming Men' ಗಂಭೀರ ಪೋಸ್ಟ್ನ ಒಳಗುಟ್ಟೇನು? ನ್ಯೂಜಿಲೆಂಡ್ ವಿರುದ್ಧದ ರೋಮಾಂಚಕ T20I ಗೆಲುವಿನ ನಂತರ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ 'Boys Becoming Men' ಎಂದು ಪೋಸ್ಟ್ ಮಾಡಿದ್ದು ಏಕೆ? ಗಂಭೀರ್ ಪೋಸ್ಟ್ನ ಸಂಪೂರ್ಣ ಮಾಹಿತಿ ಇಲ್ಲಿದೆ.

ಕ್ರೈಸ್ಟ್ಚರ್ಚ್ನಲ್ಲಿ ಟೀಂ ಇಂಡಿಯಾ ಗೆಲುವು!
ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 180 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಮ್ಯಾಚ್ನ್ನು 4 ವಿಕೆಟ್ಗಳಿಂದ ವಿಜಯ ಸಾಧಿಸಿದೆ.
ಕಳಪೆ ಆರಂಭ!
ನ್ಯೂಜಿಲೆಂಡ್ ನೀಡಿದ್ದ 181 ರನ್ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಪ್ರಾರಂಭದಲ್ಲಿ ಕಳಪೆ ಆರಂಭವನ್ನೇ ಪಡೆಯಿತು. ಸಂಜು ಸ್ಯಾಮ್ಸನ್ 14 ರನ್ಗಳಿಗೆ ಮತ್ತು ಅಭಿಷೇಕ್ ಶರ್ಮಾ 27 ರನ್ಗಳಿಗೆ ಔಟಾದರು. ನಂತರ ವೈಭವ್ ಸೂರ್ಯವಂಶಿ ಮೈದಾನಕ್ಕೆ ಬಂದರು, ಆದರೆ ಅವರು ಕೇವಲ 4 ರನ್ಗಳಿಗೆ ಔಟಾದರು.
ಕಾಣದ ಜವಾಬ್ದಾರಿ ಆಟ!
ನಂತರ, ನಾಯಕ ಶ್ರೇಯಸ್ ಅಯ್ಯರ್ ಕೂಡ 7 ರನ್ ಗಳಿಸಿ ಔಟಾದರು. ಅದಾದ ನಂತರ, ಬಂದ ಅಕ್ಷರ್ ಪಟೇಲ್ ಕೂಡ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರಿಂದಾಗಿ, ಟೀಮ್ ಇಂಡಿಯಾ 70 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ, ಟೀಮ್ ಇಂಡಿಯಾದ ಇನ್ನಿಂಗ್ಸ್ ಸಂಪೂರ್ಣವಾಗಿ ತೆಲೆಕೆಳಗಾಗುವಂತೆ ನಿರ್ಮಾಣವಾಯಿತು.
ಕೈ ಹಿಡಿದ ತಿಲಕ್ ವರ್ಮಾ!
ಆ ಸಮಯದಲ್ಲಿ, ತಿಲಕ್ ವರ್ಮಾ ನಮನ್ ಧೀರ್ ಜೊತೆಗೆ ಮೈದಾನಕ್ಕೆ ಬಂದರು. ಸಂಪೂರ್ಣ ಜವಾಬ್ದಾರಿ ಈ ಇಬ್ಬರು ಆಟಗಾರರ ಮೇಲಿತ್ತು. ಆದರೆ ನಂತರ ನಮನ್ ಧೀರ್ 17 ಎಸೆತಗಳಲ್ಲಿ 31 ರನ್ಗೆ ಔಟಾದರು. ಅವರ ನಂತರ, ನಿತೀಶ್ ರೆಡ್ಡಿ ಮೈದಾನಕ್ಕೆ ಬಂದರು. ರೆಡ್ಡಿ ಮೈದಾನಕ್ಕೆ ಬಂದಾಗ, ಭಾರತ 15 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿತ್ತು. ಆದ್ದರಿಂದ, ಇಲ್ಲಿಂದ ಪಂದ್ಯ ಗೆಲ್ಲುವುದು ಅಸಾಧ್ಯವಾಗಿತ್ತು. ಏಕೆಂದರೆ ಮುಂದಿನ 5 ಓವರ್ಗಳಲ್ಲಿ ಭಾರತಕ್ಕೆ 78 ರನ್ ಬೇಕಾದ ಕಾರಣ ಇದು ದಡ ಸೇರದ ದೋಣಿಯಂತಾಗಿದ್ದಂತು ನಿಜ.
ಮೊಡಿ ಮಾಡಿದ ತಿಲಕ, ರೆಡ್ಡಿ, ಜೋಡಿ!
ಆ ಸಮಯದಲ್ಲಿ, ತೆಲುಗು ಬಾಯ್ಸ್ ಜೋಡಿ ತಿಲಕ್ ಮತ್ತು ನಿತೀಶ್ ಮೊದಲ ಎರಡು ಓವರ್ಗಳಲ್ಲಿ 22 ರನ್ ಗಳಿಸಿದರು. ಆ ನಂತರ, ಕೊನೆಯ ಮೂರು ಓವರ್ಗಳಲ್ಲಿ 46 ರನ್ಗಳು ಬೇಕಾಗಿದ್ದವು, ಆ ಸಮಯದಲ್ಲಿ ತಿಲಕ್ ವರ್ಮಾ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ 18 ನೇ ಓವರ್ನಲ್ಲಿ 17 ರನ್ಗಳನ್ನು ಮತ್ತು ನಂತರ 19 ನೇ ಓವರ್ನಲ್ಲಿ 18 ರನ್ಗಳನ್ನು ಗಳಿಸಿದರು. ಈಗ, ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾಗೆ 11 ರನ್ಗಳ ಅಗತ್ಯವಿತ್ತು. ಕೊನೆಯ ಓವರ್ನಲ್ಲಿ ಒಂದು ಎಸೆತ ಬಾಕಿ ಉಳಿಸಿ 4 ವಿಕೆಟ್ಗಳಿಂದ ಪಂದ್ಯ ಗೆದ್ದಿತು.
ಹೃದಯ ಗೆದ್ದ ಗಂಭೀರ್ ಪೋಸ್ಟ್
ಈ ಗೆಲುವಿನ ನಂತರ, ಗೌತಮ್ ಗಂಭೀರ್ ಅವರು X ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು 'ಹುಡುಗರು ಪುರುಷರಾಗುತ್ತಿದ್ದಾರೆ 'Boys Becomming Men' ಎಂದು ಹೇಳುತ್ತಾರೆ, ಅಂದರೆ ಹುಡುಗರು ಈಗ ಬೆಳೆದಿದ್ದಾರೆ ಎಂದರ್ಥ. ಗಂಭೀರ್ ಅವರ ಈ ಪೋಸ್ಟ್ ಎಲ್ಲಾ ಭಾರತೀಯರ ಹೃದಯಗಳನ್ನು ಗೆದ್ದಿದೆ. ಅಲ್ಲದೇ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 2-0 ಮುನ್ನಡೆ ಸಾಧಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.






