ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರಿಷಬ್ ಪಂತ್ ನಿರ್ಗಮಿಸಿದ ಬಳಿಕ ಇದೀಗ ನಾಯಕನ ಹುಡುಕಾಟ ಜೋರಾಗಿದೆ. ಇದರ ನಡುವೆ ಕೆಎಲ್ ರಾಹುಲ್‌ಗೆ ನಾಯಕತ್ವ ವಹಿಸಿಕೊಳ್ಳುವಂತೆ ಡಿಸಿ ಸೂಚಿಸಿತ್ತು. ಆದರೆ ಕೆಎಲ್ ರಾಹುಲ್ ನಾಯಕತ್ವ ನಿರಾಕರಿಸಿದ್ದಾರೆ.

ನವದೆಹಲಿ(ಮಾ.11) ಚಾಂಪಿಯನ್ಸ್ ಟ್ರೋಫಿ ಮುಗಿದ ಬೆನ್ನಲ್ಲೇ ಇದೀಗ ಐಪಿಎಲ್ ಕಳೆಗಟ್ಟಿದೆ. ತಂಡಗಳು ಅಂತಿಮ ಹಂತದ ತಯಾರಿ ಮಾಡಿಕೊಳ್ಳುತ್ತಿದೆ. ಈ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕತ್ವದ ಸಮಸ್ಯೆ ಎದುರಾಗಿದೆ. ರಿಷಬ್ ಪಂತ್ ನಿರ್ಗಮನದ ಕಾರಣದಿಂದ ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂಪಾಯಿ ನೀಡಿ ಕೆಎಲ್ ರಾಹುಲ್‌ ಖರೀದಿ ಮಾಡಿತ್ತು. ಪಂಜಾಬ್ ಕಿಂಗ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ರಾಹುಲ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ ಇದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಆಯ್ಕೆಯಲ್ಲಿದೆ. ಮೊದಲ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಲು ನಿರಾಕರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್ಮೆಂಟ್ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳುವಂತೆ ಕೆಎಲ್ ರಾಹುಲ್ ಬಳಿ ಮನವಿ ಮಾಡಿಕೊಂಡಿತ್ತು. ಆದರೆ ರಾಹುಲ್ ಮನವಿಯನ್ನು ನಿರಾಕರಿಸಿದ್ದಾರೆ. ತಾನೊಬ್ಬ ಆಟಗಾರನಾಗಿ ತಂಡಕ್ಕೆ ನೆರವಾಗುವುದಾಗಿ ರಾಹುಲ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಅಳಿಯ ಕೆ ಎಲ್ ರಾಹುಲ್ ಆಟವನ್ನು 4 ಪದಗಳಲ್ಲಿ ಬಣ್ಣಿಸಿದ ಮಾವ ಸುನಿಲ್ ಶೆಟ್ಟಿ!

ಕೆಎಲ್ ರಾಹುಲ್ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಕ್ಸ್ ಹಾಗೂ ಲಖನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇನ್ನು ಟೀಂ ಇಂಡಯಾದಲ್ಲಿ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಮಹತ್ವದ ಪಂದ್ಯದಲ್ಲಿ ಕೆಎಲ್ ರಾಹುಲ್ ತಂಡಕ್ಕೆ ನೆರವಾಗಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಕೂಡ ಸೇರಿದ.

ರಾಹುಲ್ ನಾಯಕತ್ವ ನಿರಾಕರಿಸಿದ ಕಾರಣ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನ ಹುಡುಕಾಟ ನಡೆಸುತ್ತಿದೆ. ಈ ಪೈಕಿ 2019ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿರುವ ಅಕ್ಸರ್ ಪಟೇಲ್‌ಗೆ ನಾಯಕತ್ವ ಜವಾಬ್ದಾರಿ ನೀಡಲು ಮುಂದಾಗಿದೆ. ಟೀಂ ಇಂಡಿಯಾದಲ್ಲೂ ಪ್ರಮುಖ ಸ್ಥಾನ ನಿರ್ವಹಿಸುತ್ತಿರುವ ಅಕ್ಸರ್ ಪಟೇಲ್ ಡೆಲ್ಲಿ ತಂಡಕ್ಕೆ ನಾಯಕನಾಗುವುದು ಬಹುತೇಕ ಖಚಿತಗೊಂಡಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

2025ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಪಂದ್ಯವನ್ನು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಮಾರ್ಚ್ 24 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದೆ. ಬಳಿಕ ಮಾರ್ಚ್ 17 ರಂದು ವಿಶಾಖ ಪಟ್ಟಣಕ್ಕೆ ತಲುಪಲಿದೆ.

ಕೆ.ಎಲ್. ರಾಹುಲ್ ಯಾವಾಗ ಅಪ್ಪ ಆಗ್ತಾರೆ? ಮಗಳು ಆಥಿಯಾಳ ಸತ್ಯ ರಿವೀಲ್ ಮಾಡಿದ ಸುನೀಲ್ ಶೆಟ್ಟಿ!