ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಡೆಲ್ಲಿ ಈ ಪಂದ್ಯದಲ್ಲಿ ಸುಧಾರಿತ ಬೌಲಿಂಗ್‌ ಪ್ರದರ್ಶನ ತೋರಬೇಕಿದೆ. ಸದ್ಯ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮತ್ತೊಂದೆಡೆ ಲಖನೌ ಆರಂಭಿಕ ಸೋಲಿನ ಬಳಿಕ ಸತತ 3 ಪಂದ್ಯಗಳನ್ನು ಗೆದ್ದಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 

ಲಖನೌ(ಏ.12): ಐಪಿಎಲ್‌ 17ನೇ ಆವೃತ್ತಿಯಲ್ಲಿ ಕಳಪೆ ಆರಂಭ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್‌, ಶುಕ್ರವಾರ ಬಲಿಷ್ಠ ಲಖನೌ ಸೂಪರ್‌ ಜೈಂಟ್ಸ್‌ ಸವಾಲನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಡೆಲ್ಲಿ ಈ ಪಂದ್ಯದಲ್ಲಿ ಸುಧಾರಿತ ಬೌಲಿಂಗ್‌ ಪ್ರದರ್ಶನ ತೋರಬೇಕಿದೆ. ಸದ್ಯ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮತ್ತೊಂದೆಡೆ ಲಖನೌ ಆರಂಭಿಕ ಸೋಲಿನ ಬಳಿಕ ಸತತ 3 ಪಂದ್ಯಗಳನ್ನು ಗೆದ್ದಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 

ಪ್ರಚಂಡ ವೇಗಿ ಮಯಾಂಕ್‌ ಯಾದವ್‌ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಆದರೂ ಲಖನೌ ಬೌಲಿಂಗ್‌ ಪಡೆ ಬಲಿಷ್ಠವಾಗಿಯೇ ಇದೆ. ನಾಯಕ ಕೆ.ಎಲ್‌.ರಾಹುಲ್‌ ದೊಡ್ಡ ಇನ್ನಿಂಗ್ಸ್‌ ಆಡಲು ಕಾಯುತ್ತಿದ್ದು, ಅಭಿಮಾನಿಗಳೂ ಅವರ ಮೇಲೆ ಭಾರಿ ನಿರೀಕ್ಷೆ ಇರಿಸಿದ್ದಾರೆ. ಲಖನೌ ತಂಡದ ಪರ ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋನಿಸ್ ಉತ್ತಮ ಲಯದಲ್ಲಿದ್ದಾರೆ. ಇನ್ನು ದೇವದತ್ ಪಡಿಕ್ಕಲ್ ಲಯಕ್ಕೆ ಮರಳಬೇಕಿದೆ. ಇನ್ನು ನಿಕೋಲಸ್ ಪೂರನ್ ಅವರನ್ನು ನಿಯಂತ್ರಿಸಬೇಕಾದ ಸವಾಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಿದೆ. ಲಖನೌ ಪರ ಬೌಲಿಂಗ್‌ನಲ್ಲಿ ಯಶ್ ಠಾಕೂರ್, ರವಿ ಬಿಷ್ಣೋಯಿ, ನವೀನ್ ಉಲ್ ಹಕ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. 

IPL 2024 ಸೂರ್ಯ-ಕಿಶನ್ ಆರ್ಭಟಕ್ಕೆ ತತ್ತರಿಸಿದ ಆರ್‌ಸಿಬಿ, ಫಾಫ್ ಪಡೆಗೆ ಹೀನಾಯ ಸೋಲು..!

ಇನ್ನೊಂದೆಡೆ ರಿಷಭ್‌ ಪಂತ್‌, ಡೇವಿಡ್‌ ವಾರ್ನರ್‌ ಮೇಲೆ ಭಾರಿ ಒತ್ತಡವಿದ್ದು, ಡೆಲ್ಲಿಯ ಅದೃಷ್ಟ ಬದಲಾಗಬೇಕಿದ್ದರೆ ಈ ಇಬ್ಬರು ತಾರಾ ಆಟಗಾರರು ಮಿಂಚಲೇಬೇಕು. ಇದರ ಜತೆಗೆ ಪೃಥ್ವಿ ಶಾ, ಟ್ರಿಸ್ಟಿನ್ ಸ್ಟಬ್ಸ್ ಹಾಗೂ ಅಭಿಷೇಕ್ ಪೋರೆಲ್ ಅಬ್ಬರಿಸಬೇಕಿದೆ. ಇನ್ನುಳಿದಂತೆ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಏನ್ರಿಚ್ ನೋಕಿಯಾಗೆ ಇಂದು ವಿಶ್ರಾಂತಿ ಸಿಗುವ ಸಾಧ್ಯತೆಯಿದೆ. ಖಲೀಲ್ ಅಹಮ್ಮದ್, ಇಶಾಂತ್ ಶರ್ಮಾ ಹಾಗೂ ಅಕ್ಷರ್ ಪಟೇಲ್ ಜಬಾಬ್ದಾರಿಯುತ ಬೌಲಿಂಗ್ ಪ್ರದರ್ಶನ ತೋರಬೇಕಿದೆ. 

ಒಟ್ಟು ಮುಖಾಮುಖಿ: 03

ಲಖನೌ: 03

ಡೆಲ್ಲಿ: 00

ಸಂಭವನೀಯ ಆಟಗಾರರ ಪಟ್ಟಿ

ಲಖನೌ: ಕ್ವಿಂಟನ್ ಡಿ ಕಾಕ್‌, ಕೆ ಎಲ್ ರಾಹುಲ್‌ (ನಾಯಕ), ದೇವದತ್ ಪಡಿಕ್ಕಲ್‌, ಮಾರ್ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರನ್‌, ಆಯುಸ್ ಬದೋನಿ, ಕೃನಾಲ್‌ ಪಾಂಡ್ಯ, ರವಿ ಬಿಷ್ಣೋಯ್‌, ನವೀನ್‌ ಉಲ್ ಹಕ್, ಯಶ್ ಠಾಕೂರ್, ಎಂ.ಸಿದ್ಧಾರ್ಥ್‌.

ಡೆಲ್ಲಿ: ಪೃಥ್ವಿ ಶಾ, ಡೇವಿಡ್ ವಾರ್ನರ್‌, ಅಭಿಷೇಕ್ ಪೊರೆಲ್‌, ಟ್ರಿಸ್ಟಿನ್ ಸ್ಟಬ್ಸ್‌, ರಿಷಭ್ ಪಂತ್‌ (ನಾಯಕ), ಅಕ್ಷರ್‌ ಪಟೇಲ್, ಲಲಿತ್‌ ಯಾದವ್, ಕುಶಾಗ್ರ, ಜೇ ರಿಚರ್ಡ್‌ಸನ್‌, ಇಶಾಂತ್‌ ಶರ್ಮಾ, ಖಲೀಲ್‌ ಅಹಮ್ಮದ್, ರಸಿಕ್ ಧಾರ್.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ