Asianet Suvarna News Asianet Suvarna News

ಮುಂಬೈ ಇಂಡಿಯನ್ಸ್ ಸೈನ್ಯದಲ್ಲಿ ಎಲ್ಲವೂ ಸರಿ ಇಲ್ವಾ..? ರೋಹಿತ್ ಪರ ಬ್ಯಾಟ್ ಬೀಸಿದ್ರಾ ಪೊಲಾರ್ಡ್..?

IPLನಲ್ಲಿ ಹಾರ್ದಿಕ್ ಪಾಂಡ್ಯಗೆ  ಮುಂಬೈ ಇಂಡಿಯನ್ಸ್ ತಂಡದ ನಾಯಕನ ಪಟ್ಟ ಕಟ್ಟಲಾಗಿದೆ. ಇನ್ಮೇಲೆ ಮುಂಬೈ ತಂಡದಲ್ಲಿ ಹಾರ್ದಿಕ್ ಯುಗ ಆರಂಭ ವಾಗಲಿದೆ. ಆದ್ರೆ, ಈ ನಡುವೆ ಮತ್ತೊಂದೆಡೆ ರೋಹಿತ್ ಶರ್ಮಾರನ್ನ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದನ್ನ ರೋಹಿತ್ ಅಭಿಮಾನಿಗಳಿಂದ ಸಹಿಸಲು ಆಗುತ್ತಿಲ್ಲ.

IPL 2024 Kieron Pollard Cryptic Post Triggers Mumbai Indians Fans kvn
Author
First Published Jan 8, 2024, 3:03 PM IST

ಬೆಂಗಳೂರು(ಜ.08) IPLನಲ್ಲಿ ಹಾರ್ದಿಕ್ ಪಾಂಡ್ಯ, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆದ ನಂತರ ಏನಾಗ್ತಿದೆ ಅನ್ನೋದೆ ಅರ್ಥವಾಗ್ತಿಲ್ಲ. ಈಗ ತಂಡದ ಕೋಚ್ ಫ್ರಾಂಚೈಸಿ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ಇದ್ರಿಂದ 5 ಬಾರಿ ಚಾಂಪಿಯನ್ಸ್ ತಂಡದಲ್ಲಿ ಎಲ್ಲವೂ ಸರಿ ಇಲ್ವಾ..? ಅನ್ನೋ ಪ್ರಶ್ನೆ ಮೂಡಿದೆ. ಅಷ್ಟಕ್ಕೂ ಮುಂಬೈ ಪಾಳಯಲ್ಲಿ ಮತ್ತೇನಾಯ್ತು ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಏನಾಗ್ತಿದೆ..? 

IPLನಲ್ಲಿ ಹಾರ್ದಿಕ್ ಪಾಂಡ್ಯಗೆ  ಮುಂಬೈ ಇಂಡಿಯನ್ಸ್ ತಂಡದ ನಾಯಕನ ಪಟ್ಟ ಕಟ್ಟಲಾಗಿದೆ. ಇನ್ಮೇಲೆ ಮುಂಬೈ ತಂಡದಲ್ಲಿ ಹಾರ್ದಿಕ್ ಯುಗ ಆರಂಭ ವಾಗಲಿದೆ. ಆದ್ರೆ, ಈ ನಡುವೆ ಮತ್ತೊಂದೆಡೆ ರೋಹಿತ್ ಶರ್ಮಾರನ್ನ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದನ್ನ ರೋಹಿತ್ ಅಭಿಮಾನಿಗಳಿಂದ ಸಹಿಸಲು ಆಗುತ್ತಿಲ್ಲ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿರುದ್ಧ ಹಿಟ್‌ಮ್ಯಾನ್ ಫ್ಯಾನ್ಸ್  ತಿರುಗಿ ಬಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ಇಂಡಿಯನ್ಸ್ನ UNFOLLOW ಮಾಡ್ತಿದ್ದಾರೆ. 

IPL 2024 ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್‌...! ಸರ್ಜರಿಯಿಂದಾಗಿ ಟೂರ್ನಿಯಿಂದಲೇ ಔಟ್?

ಇನ್ನು ಹಾರ್ದಿಕ್‌ಗೆ ನಾಯಕನಾಗಿ ಮಾಡಿದ್ದಕ್ಕೆ ಅಭಿಮಾನಿಗಳು ಮಾತ್ರ ಅಲ್ಲ. ಮುಂಬೈ ತಂಡದ ಆಟಗಾರರೂ ಫ್ರಾಂಚೈಸಿಯ ನಡೆಯಿಂದ ಮುನಿಸಿ ಕೊಂಡಿದ್ರು. ಸೋಷಿಯಲ್ ಮೀಡಿಯಾದಲ್ಲಿ ಇನ್ಡೈರೆಕ್ಟಾಗಿ ಅಸಮಾಧಾನ ಹೊರಹಾಕಿದ್ರು. ಆದ್ರೀಗ, ಮುಂಬೈ ತಂಡದ ಕೋಚ್ಗೂ ಹಾರ್ದಿಕ್ ಕೈಗೆ ನಾಯಕತ್ವ ನೀಡಿರೋದು ಇಷ್ಟವಿಲ್ವಾ..? ಅನ್ನೋ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ, ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೀರನ್ ಪೋಲಾರ್ಡ್ ಮಾಡಿರೋ ಈ ಪೋಸ್ಟ್..!! 

ಮುಂಬೈ ಫ್ರಾಂಚೈಸಿ ಮೇಲೆ ಮುನಿಸಿಕೊಂಡ್ರಾ ಪೊಲಾರ್ಡ್..? 

ಯೆಸ್, ಮುಂಬೈ ಇಂಡಿಯನ್ ಬ್ಯಾಟಿಂಗ್ ಕೋಚ್ ಆಗಿರೋ ಪೋಲಾರ್ಡ್ ಇಂತದೊಂದು ಪೋಸ್ಟ್ ಮಾಡಿದ್ದಾರೆ. ಮಳೆ ನಿಂತ ಮೇಲೆ ಪ್ರತಿಯೊಬ್ಬರಿಗೂ ಕೊಡೆ ಭಾರವಾಗುತ್ತೆ, ಅದೇ ರೀತಿ ಅವಶ್ಯಕತೆ ಮುಗಿದ ಮೇಲೆ ನಿಷ್ಠೆಗೂ ಅದೇ ಗತಿ ಅಂತ ಪೋಲಾರ್ಡ್ ಬರೆದುಕೊಂಡಿದ್ದಾರೆ. 

ಆಘ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ, ರೋಹಿತ್-ಕೊಹ್ಲಿ ವಾಪಸ್!

ಪೋಲಾರ್ಡ್ ಇಂತಹದೊಂದು ಸಾಲುಗಳನ್ನ ಪೋಸ್ಟ್ ಮಾಡಲು ಕಾರಣ ಏನು ಅನ್ನೋದೆ ಈಗ ಬಿಗ್ ಕ್ವಶೆನ್ ಮಾರ್ಕ್ ಆಗಿದೆ. ಇದನ್ನ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಹಾರ್ದಿಕ್ ಪಾಂಡ್ಯಗೆ ಲಿಂಕ್ ಮಾಡ್ತಿದ್ದಾರೆ. ಪಾಂಡ್ಯಗೆ ಕ್ಯಾಪ್ಟನ್ಸಿ ನೀಡಿದ್ದು ಪೋಲಾರ್ಡ್ಗೆ ಇಷ್ಟವಿಲ್ಲ. ಮಹತ್ವದ ನಿರ್ಧಾರ ಕೈಗೊಳ್ಳೋ ಮೊದಲು ಪೋಲಾರ್ಡ್ರನ್ನ ಸಂಪರ್ಕಿಸಿಲ್ಲ. ಹೀಗಾಗಿ ಪಾಂಡ್ಯ ಮುಂಬೈ ಫ್ರಾಂಚೈಸಿ ವಿರುದ್ಧ ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ. 

ಪಾಂಡ್ಯ ನಾಯಕರಾಗಿದ್ದು ಯಾರಿಗೂ ಇಷ್ಟ ಇಲ್ವಾ..? 

ಯೆಸ್, ಪಾಂಡ್ಯ ಮುಂಬೈ ಕ್ಯಾಪ್ಟನ್ ಆದ್ಮೇಲೆ ತಂಡಕ್ಕೆ ಸಂಬಂಧ ಪಟ್ಟವರಲ್ಲಿ ಒಬ್ಬರಲ್ಲ. ಒಬ್ಬರು ಅಸಮಾಧಾನ ಹೊರಹಾಕ್ತಿದ್ದಾರೆ.  ಈ ಹಿಂದೆ ಸೂರ್ಯಕುಮಾರ್ ಕೂಡ ಇಂತಹದ್ದೇ ಪೋಸ್ಟ್ ಶೇರ್ ಮಾಡಿದ್ರು. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾರ್ಟ್ ಬ್ರೇಕ್ ಎಮೋಜಿ ಹಾಕಿದ್ರು. ಬುಮ್ರಾ ಕೂಡ ಕೆಲವೊಮ್ಮೆ ಮೌನವೂ ಅತ್ಯುತ್ತಮ ಉತ್ತರ ಅಂತ ಬರೆದುಕೊಂಡಿದ್ರು. ಜೊತೆಗೆ ಮುಂಬೈ ಇಂಡಿಯನ್ಸ್ ಟ್ವಿಟರ್ ಮತ್ತು ಇನ್ಸ್ಟಾ ಖಾತೆಯನ್ನು ಅನ್ಫಾಲೋ ಮಾಡಿದ್ರು. 

ಇದೆಲ್ಲಾ ನೋಡಿದ್ರೆ ಮುಂಬೈ ಇಂಡಿಯನ್ಸ್ ಪಾಳಾಯದಲ್ಲಿ ಎಲ್ಲವೂ ಸರಿ ಇಲ್ವಾ..? 5 ಬಾರಿ ಚಾಂಪಿಯನ್ಸ್ ತಂಡದಲ್ಲಿ ಏನಾಗ್ತಿದೆ ಅಂತ ಫ್ಯಾನ್ಸ್ ಟೆನ್ಷನ್ ಮಾಡಿಕೊಂಡಿರೋದಂತೂ ಸುಳ್ಳಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Follow Us:
Download App:
  • android
  • ios