ಆಘ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ, ರೋಹಿತ್-ಕೊಹ್ಲಿ ವಾಪಸ್!

ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಟಿ20 ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಜನವರಿ 11 ರಿಂದ ಭಾರತ ಆತಿಥ್ಯವಹಿಸುತ್ತಿರುವ ಈ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಇಷ್ಟೇ ಅಲ್ಲ ವಿರಾಟ್ ಕೊಹ್ಲಿ ಕೂಡ ತಂಡಕ್ಕೆ ಮರಳಿದ್ದಾರೆ.

BCCI announces Team India squad for Afghanistan T20I series Rohit sharma to lead team ckm

ಮುಂಬೈ(ಜ.07) ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಬಿಸಿಸಿಐ ಆಯ್ಕೆ ಸಮಿತಿ ತಂಡ ಪ್ರಕಟಿಸಿದೆ. ಟಿ20 ಸರಣಿಯಿಂದ ದೂರ ಉಳಿದಿದ್ದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇದೀಗ ಆಫ್ಘಾನಿಸ್ತಾನ ವಿರುದ್ಧದ ಸರಣಿಗೆ ವಾಪಸ್ ಆಗಿದ್ದಾರೆ. ಮೂರು ಪಂದ್ಯದ ಸರಣಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡದಲ್ಲಿರುವ ಸೂಚನೆ ನೀಡಿದ್ದಾರೆ. ಆದರೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿದೆ.

ಆಫ್ಘಾನಿಸ್ತಾನ ವಿರುದ್ದ ಟಿ20 ಸರಣಿಗೆ ಭಾರತ ತಂಡ ಪ್ರಕಟ
 ರೋಹಿತ್ ಶರ್ಮಾ(ನಾಯಕ), ಶುಬಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿ ಬಿಶ್ನೋಯ್, ಕುಲ್ದೀಪ್ ಯಾದವ್ ಅರ್ಶದೀಪ್ ಸಿಂಗ್, ಅವೇಶ್ ಖಾನ್, ಮುಕೇಶ್ ಕುಮಾರ್  

5 ತಿಂಗಳ ಮುಂಚೆಯೇ ವಿಶ್ವಕಪ್ ಆತಿಥ್ಯಕ್ಕೆ ಅಮೇರಿಕಾ ಸಿದ್ಧ..! USA ನಲ್ಲಿ ರಾರಾಜಿಸುತ್ತಿವೆ ಕೊಹ್ಲಿ ಕಟೌಟ್..!

ಐಸಿಸಿ ವಿಶ್ವಕಪ್ ಟೂರ್ನಿ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಶ್ರಾಂತ ಪಡೆದಿದ್ದರು. ಇದೇ ವೇಳೆ ಟಿ20 ಸರಣಿಯಿಂದ ಇಬ್ಬರು ದಿಗ್ಗಜರು ದೂರ ಉಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಮಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಕೊಹ್ಲಿ ಹಾಗೂ ರೋಹಿತ್ ಪಾಲ್ಗೊಳ್ಳುತ್ತಿಲ್ಲ ಅನ್ನೋ ವರದಿ ಹರಿದಾಡಿತ್ತು. ಆದರೆ ಈ ಎಲ್ಲಾ ಊಹಾಪೋಗಳಿಗೆ ಇದೀಗ ತೆರೆ ಬಿದ್ದಿದೆ. ಕೊಹ್ಲಿ ಹಾಗೂ ರೋಹಿತ್ ತಂಡಕ್ಕೆ ಮರಳುವ ಮೂಲಕ ಅಭಿಮಾನಿಗಳ ಆತಂಕ ದೂರ ಮಾಡಿದ್ದಾರೆ.  2022ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ ಬಳಿಕ ರೋಹಿತ್ ಹಾಗೂ ಕೊಹ್ಲಿ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ.

ಸಂಜ್ ಸ್ಯಾಮ್ಸನ್ ಹಾಗೂ ಶುಬಮನ್ ಗಿಲ್ ಟಿ20 ಮಾದರಿಗೆ ಮರಳಿದ್ದಾರೆ. ಶ್ರೇಯಸ್ ಅಯ್ಯರ್‌ಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಮುಖ್ಯವಾಗಿ ಕನ್ನಡಿಗ ಕೆಎಲ್ ರಾಹುಲ್ ತಂಡಕ್ಕೆ ಆಯ್ಕೆಯಾಗಿಲ್ಲ. ಇನ್ನು ಇಂಜುರಿಯಾಗಿರುವ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಚೇತರಿಸಿಕೊಂಡಿಲ್ಲ. ಹೀಗಾಗಿ ಇಬ್ಬರೂ ಆಟಗಾರರು ಅಲಭ್ಯರಾಗಿದ್ದಾರೆ.

ICC Test Rankings: ಕೇಪ್‌ಟೌನ್ ಟೆಸ್ಟ್ ಗೆದ್ದರೂ 2ನೇ ಸ್ಥಾನಕ್ಕೆ ಕುಸಿದ ಭಾರತ

ಭಾರತ ಹಾಗೂ ಆಫ್ಘಾನಿಸ್ತಾನ ವಿರುದ್ದ ಮೂರು ಪಂದ್ಯಗಳ ಟಿ20 ಸರಣಿ ಜನವರಿ 11ರಿಂದ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಜನವರಿ 14 ರಂದು ಎರಡನೇ ಪಂದ್ಯಕ್ಕೆ ಇಂದೋರ್ ಆತಿಥ್ಯವಹಿಸಲಿದೆ. ಇನ್ನು ಜನವರಿ 17 ರಂದ ನಡೆಯಲಿರುವ 3ನೇ ಹಾಗೂ ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. 

 

Latest Videos
Follow Us:
Download App:
  • android
  • ios