Asianet Suvarna News Asianet Suvarna News

ವಿರಾಟ್ ಕೊಹ್ಲಿ ಪವರ್‌ಪ್ಲೇ ಬಳಿಕ ನಿಧಾನಗತಿ ಬ್ಯಾಟಿಂಗ್ ಮಾಡೋದೇಕೆ..? ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್

ಆರ್ಸಿಬಿ 9 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯವನ್ನ ಗೆದ್ದಿರಬಹುದು. ಆದ್ರೆ ಕೊಹ್ಲಿ ಮಾತ್ರ ಪ್ರತಿ ಪಂದ್ಯದಲ್ಲೂ ರನ್ ಹೊಳೆ ಹರಿಸಿದ್ದಾರೆ. ಕಿಂಗ್ ಕೊಹ್ಲಿ 9 ಮ್ಯಚ್‌ಗಳಿಂದ 430 ರನ್ ಹೊಡೆಯ ಮೂಲಕ ಆರೆಂಜ್ ಕ್ಯಾಪ್ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. 145.76ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ, 1 ಶತಕ, 3 ಅರ್ಧಶತಕ ಬಾರಿಸಿದ್ದಾರೆ.

IPL 2024 Aaron Finch reveals Viral Kohli slow batting strategy kvn
Author
First Published Apr 27, 2024, 1:08 PM IST

ಬೆಂಗಳೂರು(ಏ.27): ಆರ್‌ಸಿಬಿ ತಂಡ ಕೊನೆಗೂ ಸೋಲಿನ ಸುಳಿಯಿಂದ ಹೊರಬಂದಿದೆ. ವಿರಾಟ್ ಕೊಹ್ಲಿ ಮತ್ತೊಂದು ಹಾಫ್ ಸೆಂಚುರಿ ಬಾರಿಸಿದ್ದಾರೆ. ದಾಖಲೆಯನ್ನೂ ನಿರ್ಮಿಸಿದ್ದಾರೆ. ಆದ್ರೂ ಟ್ರೋಲ್ ಆಗ್ತಿದ್ದಾರೆ. ಕಿಂಗ್ ಕೊಹ್ಲಿ ವಿರುದ್ಧ ಗವಾಸ್ಕರ್ ವಾಗ್ದಾಳಿ ನಡೆಸಿದ್ದಾರೆ. ಹಾಗಾದ್ರೆ ಕೊಹ್ಲಿ ಟ್ರೋಲ್ ಆಗ್ತಿರೋದು ಯಾಕೆ ಅನ್ನೋದನ್ನ ನೋಡೋಣ ಬನ್ನಿ.

ವಿರಾಟ್ ಕೊಹ್ಲಿ ನಿಧಾನಗತಿ ಬ್ಯಾಟಿಂಗ್ ಟ್ರೋಲ್..!

ವಿರಾಟ್ ಕೊಹ್ಲಿ. ಸದ್ಯ ಐಪಿಎಲ್ನಲ್ಲಿ ರನ್ ಕಿಂಗ್. ಹೌದು, ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಸರದಾರ. ಅಷ್ಟು ಮಾತ್ರವಲ್ಲ. ಈ ಸಲದ ಐಪಿಎಲ್ನಲ್ಲೂ ಕಿಂಗ್ ಕೊಹ್ಲಿಯೇ ರನ್ ಸರದಾರ. ಸದ್ಯ ಅವರ ಬಳಿಯೇ ಆರೆಂಜ್ ಕ್ಯಾಪ್ ಇರೋದು. ಆರ್ಸಿಬಿ 9 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯವನ್ನ ಗೆದ್ದಿರಬಹುದು. ಆದ್ರೆ ಕೊಹ್ಲಿ ಮಾತ್ರ ಪ್ರತಿ ಪಂದ್ಯದಲ್ಲೂ ರನ್ ಹೊಳೆ ಹರಿಸಿದ್ದಾರೆ. ಕಿಂಗ್ ಕೊಹ್ಲಿ 9 ಮ್ಯಚ್‌ಗಳಿಂದ 430 ರನ್ ಹೊಡೆಯ ಮೂಲಕ ಆರೆಂಜ್ ಕ್ಯಾಪ್ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. 145.76ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ, 1 ಶತಕ, 3 ಅರ್ಧಶತಕ ಬಾರಿಸಿದ್ದಾರೆ. 

ಐಸಿಸಿ ಟಿ20 ವಿಶ್ವಕಪ್‌ಗೆ ಸಿಕ್ಸರ್ ಕಿಂಗ್ ಯುವರಾಜ್‌ ಸಿಂಗ್ ರಾಯಭಾರಿ..!

ವಿರಾಟ್ ಕೊಹ್ಲಿ ಇದೀಗ IPL ಇತಿಹಾಸದಲ್ಲಿ 10 ಸೀಸನ್‌ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ  ಸುರೇಶ್ ರೈನಾ ಹೆಸರಿನಲ್ಲಿತ್ತು. ಮಿಸ್ಟರ್ IPL ಖ್ಯಾತಿಯ ರೈನಾ 9 ಸೀಸನ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಇದಲ್ಲದೇ ವಿರಾಟ್ ಐಪಿಎಲ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 4 ಸಾವಿರ ರನ್ ಪೂರೈಸಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ 4 ಸಾವಿರ ರನ್ ಗಳಿಸಿದ 4ನೇ ಆರಂಭಿಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಪವರ್ ಪ್ಲೇ ಬಳಿಕ ಪವರ್ ಕಳೆದುಕೊಳ್ಳುವ ಕೊಹ್ಲಿ..!

ವಿರಾಟ್ ಕೊಹ್ಲಿ ಈ ಸೀಸನ್ನಲ್ಲಿ 9 ಪಂದ್ಯಗಳಿಂದ 145ರ ಸ್ಟ್ರೈಕ್ರೇಟ್ನಲ್ಲಿ 430 ರನ್ ಹೊಡೆದಿರಬಹುದು. ಆದ್ರೆ, ಮೊನ್ನೆ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ನಿಧಾನಗತಿ ಬ್ಯಾಟಿಂಗ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. 43 ಬಾಲ್ನಲ್ಲಿ 4 ಬೌಂಡ್ರಿ, 1 ಸಿಕ್ಸರ್ ಸಹಿತ 51 ರನ್ ಬಾರಿಸಿದ್ರು. 118ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದು ಈಗ ವೈರಲ್ ಆಗ್ತಿದೆ. ಕೊಹ್ಲಿ ಸ್ಲೋ ಬ್ಯಾಟಿಂಗ್ನಿಂದಲೇ ಆರ್‌ಸಿಬಿ ಕಡಿಮೆ ರನ್ ಗಳಿಸಿದ್ದು. ವಿರಾಟ್ ವೇಗವಾಗಿ ಬ್ಯಾಟಿಂಗ್ ಮಾಡಿದ್ರೆ 250 ರನ್ ಹೊಡೆಯಬಹುದಿತ್ತು ಅಂತ ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ.

ಕೆಕೆಆರ್ ಎದುರು 262 ರನ್‌ ಚೇಸ್‌: ಪಂಜಾಬ್ ಟಿ20 ವಿಶ್ವದಾಖಲೆ!

ಈ ಪಂದ್ಯದಲ್ಲಿ ಕೊಹ್ಲಿ 43 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 51 ರನ್ ಬಾರಿಸಿದರು. ಆದರೆ ಪವರ್‌ಪ್ಲೇ ನಂತರ ಕೊಹ್ಲಿ ತುಂಬಾ ನಿಧಾನವಾಗಿ ಬ್ಯಾಟ್ ಮಾಡಿದರು. ಈ ಅವಧಿಯಲ್ಲಿ ಕೊಹ್ಲಿಗೆ 1 ಬೌಂಡರಿ ಕೂಡ ಹೊಡೆಯಲು ಸಾಧ್ಯವಾಗಲಿಲ್ಲ. ಪವರ್‌ಪ್ಲೇಯಲ್ಲಿ ವಿರಾಟ್ 18 ಎಸೆತಗಳಲ್ಲಿ 32 ರನ್ ಬಾರಿಸಿದ್ದರು. ಬಳಿಕ 25 ಬಾಲ್ನಲ್ಲಿ 19 ರನ್ ಗಳಿಸಿದ್ರು. ಒಂದೊಂದು ರನ್ ಗಳಿಸಲು ಪರದಾಡಿದ್ರು. ಕೊಹ್ಲಿ ವೇಗವಾಗಿ ರನ್ ಗಳಿಸಬಹುದಿತ್ತು ಅಂತ ಸುನಿಲ್ ಗವಾಸ್ಕರ್ ಹೇಳೋ ಮೂಲಕ ಟೀಕೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಬೆನ್ನಿಗೆ ನಿಂತ ಫಿಂಚ್

ಯೆಸ್, ಕೊಹ್ಲಿಯ ನಿಧಾನಗತಿ ಬ್ಯಾಟಿಂಗ್ ಕಾರಣವನ್ನು ಆರೋನ್ ಫಿಂಚ್ ತಿಳಿಸಿದ್ದಾರೆ. ಜೊತೆಗೆ ವಿರಾಟ್ ಬೆನ್ನಿಗೆ ನಿಂತಿದ್ದಾರೆ. ಆರಂಭದಲ್ಲಿ ಕೊಹ್ಲಿ ಉತ್ತಮವಾಗಿ ಆಡಿದ್ದರು. ಆದರೆ, ಪವರ್‌ಪ್ಲೇ ಬಳಿಕ ಅವರು 25 ಬಾಲ್ಗಳಲ್ಲಿ 19 ರನ್ ಸಿಡಿಸಿದರು. ಎದುರಿದ್ದ ರಜತ್ ಪಾಟಿದಾರ್ ಅಬ್ಬರದ ಆಟ ಆಡುತ್ತಿದ್ದರು ಎಂಬುದನ್ನು ಗಮನಿಸಬೇಕು. ಕೊಹ್ಲಿ ರನ್ ನೋಡಿ ನೀವು ಕಡಿಮೆ ಆಯಿತು ಎನ್ನಬಹುದು. ಆದರೆ, ಪಾರ್ಟ್ನರ್ಶಿಪ್ ನೋಡಿದಾಗ ನಿಜಕ್ಕೂ ಇದು ಕೆಲಸ ಮಾಡಿದೆ ಎನಿಸುತ್ತದೆ. ಪಾಟಿದಾರ್‌ಗೆ ಸ್ಟ್ರೈಕ್ ನೀಡುತ್ತಾ ಕೊಹ್ಲಿ ಒಳ್ಳೆಯ ಕೆಲಸ ಮಾಡಿದರು ಎಂದು ಫಿಂಚ್ ಹೇಳಿದ್ದಾರೆ.

ಒಟ್ನಲ್ಲಿ ವಿರಾಟ್ ಕೊಹ್ಲಿಯ ಸ್ಟ್ರೈಕ್ರೇಟ್ ಬಾರಿ ಸದ್ದು ಮಾಡ್ತಿದೆ. ಒಂದು ಪಂದ್ಯದಲ್ಲಿ ಉತ್ತಮವಾಗಿರುವ ಸ್ಟ್ರೈಕ್ರೇಟ್ ಮತ್ತೊಂದು ಪಂದ್ಯದಲ್ಲಿ ಕುಸಿದು ಬೀಳ್ತಿದೆ. ನಿಜಕ್ಕೂ ಕೊಹ್ಲಿ 150ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ರೆ ಟಿ20 ವಿಶ್ವಕಪ್ ದೃಷ್ಟಿಯಿಂದ ಉತ್ತಮ. 

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios