2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಒಂದೇ ಓವರ್‌ನ ಸತತ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸಿದ್ದ ಯುವರಾಜ್‌, ಈ ಬಾರಿ ಅಮೆರಿಕದಾದ್ಯಂತ ಟೂರ್ನಿಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಐಸಿಸಿ ತಿಳಿಸಿದೆ.

ದುಬೈ(ಏ.27): ಮುಂಬರುವ ಬಹುನಿರೀಕ್ಷಿತ ಟಿ20 ವಿಶ್ವಕಪ್‌ಗೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಜೂ.1ರಿಂದ 29ರ ವರೆಗೆ ನಡೆಯಲಿರುವ ಟೂರ್ನಿಗೆ ಐಸಿಸಿ ಈಗಾಗಲೇ ವಿಶ್ವದ ವೇಗದ ಓಟಗಾರ, ಜಮೈಕಾದ ಉಸೇನ್‌ ಬೋಲ್ಟ್‌ ಅವರನ್ನು ರಾಯಭಾರಿಯನ್ನಾಗಿ ಘೋಷಿಸಿತ್ತು. 

2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಒಂದೇ ಓವರ್‌ನ ಸತತ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸಿದ್ದ ಯುವರಾಜ್‌, ಈ ಬಾರಿ ಅಮೆರಿಕದಾದ್ಯಂತ ಟೂರ್ನಿಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಐಸಿಸಿ ತಿಳಿಸಿದೆ. ‘ಒಂದು ಓವರ್‌ನ ಆರು ಸಿಕ್ಸರ್‌ ಸೇರಿದಂತೆ ಟಿ20 ವಿಶ್ವಕಪ್‌ನಲ್ಲಿ ನನ್ನ ಅಚ್ಚುಮೆಚ್ಚಿನ ಕ್ರಿಕೆಟ್‌ ನೆನಪುಗಳಿಗೆ. ಹೀಗಾಗಿ ಈ ಬಾರಿ ವಿಶ್ವಕಪ್‌ನ ಭಾಗವಾಗುವುದು ತುಂಬಾ ವಿಶೇಷ’ ಎಂದು ಯುವರಾಜ್‌ ಪ್ರತಿಕ್ರಿಯಿಸಿದ್ದಾರೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯು ಜೂನ್ 01ರಿಂದ ಜೂನ್ 29ರ ವರೆಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಜಂಟಿ ಸಹಭಾಗಿತ್ವದಲ್ಲಿ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಯುಎಸ್‌ಎ ತಂಡವು ಕೆನಡಾ ತಂಡವನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು 9 ವಿವಿಧ ಸ್ಟೇಡಿಯಂಗಳಲ್ಲಿ ಒಟ್ಟು 55 ಪಂದ್ಯಗಳನ್ನು ಆಡಲಿವೆ. ಫೈನಲ್ ಪಂದ್ಯವು ಜೂನ್ 29ರಂದು ಬಾರ್ಬಡಾಸ್‌ನಲ್ಲಿ ನಡೆಯಲಿದೆ.

Scroll to load tweet…

2024ರ ಟಿ20 ವಿಶ್ವಕಪ್‌ಗೆ ಉಸೇನ್‌ ಬೋಲ್ಟ್‌ ರಾಯಭಾರಿ

ದುಬೈ: ಜೂ.1ರಿಂದ 29ರ ವರೆಗೂ ವೆಸ್ಟ್‌ಇಂಡೀಸ್‌ ಹಾಗೂ ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ವಿಶ್ವದ ವೇಗದ ಓಟಗಾರ, ಜಮೈಕಾದ ಉಸೇನ್‌ ಬೋಲ್ಟ್‌ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಬುಧವಾರ ಈ ವಿಷಯವನ್ನು ಪ್ರಕಟಿಸಿದೆ.

‘ಟಿ20 ವಿಶ್ವಕಪ್‌ನ ರಾಯಭಾರಿಯಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಐಸಿಸಿಗೆ ಧನ್ಯವಾದ ಹೇಳುತ್ತೇನೆ. ಕ್ರಿಕೆಟ್‌ ನನ್ನ ಜೀವನದ ಒಂದು ಭಾಗ. ನಾನು ಬಹಳ ಇಷ್ಟಪಡುವ ಕ್ರೀಡೆ. ಕ್ರಿಕೆಟ್‌ ಆಟಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ’ ಎಂದು ಬೋಲ್ಟ್‌ ಹೇಳಿದ್ದಾರೆ. ಕೆರಿಬಿಯನ್‌ ದ್ವೀಪ ರಾಷ್ಟ್ರಗಳು ಹಾಗೂ ಅಮೆರಿಕದಲ್ಲಿ ಬೋಲ್ಟ್‌ ವಿಶ್ವಕಪ್‌ ಬಗ್ಗೆ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ಐಸಿಸಿ ತಿಳಿಸಿದೆ.

IPL 2024 ರಾಜಸ್ಥಾನ ರಾಯಲ್ಸ್ ಸವಾಲಿಗೆ ಲಖನೌ ಸೂಪರ್ ಜೈಂಟ್ಸ್

Scroll to load tweet…

ಬೋಲ್ಟ್‌ ಒಲಿಂಪಿಕ್ಸ್‌ನಲ್ಲಿ 8, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 11 ಚಿನ್ನದ ಪದಕ ಗೆದ್ದಿದ್ದಾರೆ. 2009ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೋಲ್ಟ್‌ 9.58 ಸೆಕೆಂಡ್‌ಗಳಲ್ಲಿ 100 ಮೀ. ಓಟ ಪೂರ್ತಿಗೊಳಿಸಿ ವಿಶ್ವ ದಾಖಲೆ ಬರೆದಿದ್ದರು.

4ನೇ ಟಿ20 ಸೋತ ಪಾಕ್‌: ಕಿವೀಸ್‌ಗೆ ಸರಣಿ ಮುನ್ನಡೆ

ಲಾಹೋರ್: ಪಾಕಿಸ್ತಾನ ವಿರುದ್ಧ 4ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ 4 ರನ್‌ ಗೆಲುವು ಸಾಧಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌, ಟಿಮ್‌ ರಾಬಿನ್ಸನ್‌(51) ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 178 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕ್‌ 8 ವಿಕೆಟ್‌ಗೆ 174 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆ ಓವರ್‌ಗೆ 18, ಕೊನೆ ಎಸೆತದಲ್ಲಿ 6 ರನ್‌ ಬೇಕಿದ್ದಾಗ ಜೇಮ್ಸ್‌ ನೀಶಮ್‌ ಕಿವೀಸ್‌ಗೆ ಗೆಲುವು ತಂದುಕೊಟ್ಟರು. ಫಾಖರ್‌ ಜಮಾನ್‌(61) ಹೋರಾಟ ವ್ಯರ್ಥವಾಯಿತು.