Asianet Suvarna News Asianet Suvarna News

ಎಲ್ಲಿ ಹೋದರು ಕಿರಿಕ್ ಪಾರ್ಟಿ, ಕೊಹ್ಲಿ ಮೊದಲು ಪೆರೇರಾ, ಆಫ್ರಿದಿ ವಿರುದ್ದ ಕಿತ್ತಾಡಿದ್ದ ನವೀನ್ ಉಲ್ ಹಕ್!

ಆಪ್ಘಾನಿಸ್ತಾನ ವೇಗಿ ನವೀನ್ ಉಲ್ ಹಕ್ ಕಿರಿಕ್ ಪಾರ್ಟಿ. ಯಾವುದೇ ಟೂರ್ನಿಯಾಗಲಿ ಅಲ್ಲೊಂದು ಕಿರಿಕ್ ಮಾಡದೇ ಬಂದಿಲ್ಲ. ಇದೀಗ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಜೊತೆ ಕಿತ್ತಾಡಿಕೊಂಡಿದ್ದಾರೆ. ಇಷ್ಟೇ ಅಲ್ಲ ಗಂಭೀರ್ ಹಾಗೂ ಕೊಹ್ಲಿ ಜೊತೆಗಿನ ಜಟಾಪಟಿಗೂ ಇದೇ ನವೀನ್ ಉಲ್ ಹಕ್ ಕಾರಣರಾಗಿದ್ದಾರೆ. ಈತ ಕೊಹ್ಲಿಗೂ ಮೊದಲು ತಿಸರಾ ಪರೇರಾ, ಆಮೀರ್, ಶಾಹಿದ್ ಆಫ್ರಿದಿ ಸೇರಿ ಹಲವರ ಜೊತೆ ಲೀಗ್ ಟೂರ್ನಿಯಲ್ಲಿ ಕಿತ್ತಾಡಿಕೊಂಡಿದ್ದಾನೆ.

IPL 2023 Virat Kohli to shahid afridi Afghan cricketer Naveen Ul haq controversies ckm
Author
First Published May 2, 2023, 3:41 PM IST

ಲಖನೌ(ಮೇ.02):  ಲಖನೌ ಹಾಗೂ ಆರ್‌ಸಿಬಿ ಪಂದ್ಯದ ನಡುವಿನ ಮೈದಾದನಲ್ಲಿನ ಕಿತ್ತಾಟ ಮುಗಿದರೂ, ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದಿದೆ. ಲಖನೌ ಸೂಪರ್ ಜೈಂಟ್ಸ್ ವೇಗಿ  ನವೀನ್ ಉಲ್ ಹಕ್‌ನಿಂದ ಆರಂಭಗೊಂಡ ಜಪಾಪಟಿ ಹೊತ್ತಿ ಉರಿದಿದೆ. ಅಸಭ್ಯ ಪದ ಬಳಸಿದ ಕಾರಣಕ್ಕೆ ಕೆರಳಿದ ವಿರಾಟ್ ಕೊಹ್ಲಿ ನೇರಾನೇರಾ ತಿರುಗೇಟು ನೀಡಿದ್ದರು. ಇಲ್ಲಿಂದ ಆರಂಭಗೊಂಡು ಗೌತಮ್ ಗಂಭೀರ್ ವಿರುದ್ಧದ ಕಿರಿಕ್ ವರೆಗೂ ಕಿತ್ತಾಟ ನಡೆದಿದೆ. ಇದೀಗ ನವೀನ್ ಉಲ್ ಹಕ್ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚಿಗೆ ತುಪ್ಪ ಸುರಿದಿದ್ದಾರೆ. ನವೀನ್ ಉಲ್ ಹಕ್ ತಮ್ಮ ಪ್ರದರ್ಶನಕ್ಕೆ ಗಮನಕೊಡುವುದಕ್ಕಿಂತ ಕಿರಿಕ್ ಮಾಡಿದ್ದೇ ಹೆಚ್ಚು. ವಿನಾ ಕಾರಣ ತೆಗೆದು ಕಿರಿಕ್ ಮಾಡುವುದು ನವೀನ್ ಉಲ್ ಹಕ್‌ಗೆ ಸಾಮಾನ್ಯವಾಗಿದೆ. ತನ್ನ ಬೌಲಿಂಗ್‌ನಲ್ಲಿ ಯಾರಾದರೂ ಬೌಂಡರಿ ಸಿಕ್ಸರ್ ಸಿಡಿಸಿದರೆ ಅವರ ವಿರುದ್ಧ ದ್ವೇಷ ಸಾಧಿಸುವುದೇ ಈತನ ಕೆಲಸವಾಗಿದೆ. ಕೊಹ್ಲಿಗಿಂತ ಮೊದಲು ಹಲವು ಕ್ರಿಕೆಟಿಗರ ವಿರುದ್ಧ ಕಿರಿಕ್ ಮಾಡಿಕೊಂಡಿದ್ದಾನೆ.

ನವೀನ್ ಉಲ್ ಹಕ್‌ಗೆ ವಿವಾದ ಸೃಷ್ಟಿಸುವುದು, ಕಿರಿಕ್ ಮಾಡುವುದು ಹೊಸದೇನಲ್ಲ. ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಕಿರಿಕ್ ಮಾಡಿ ಅಭಿಮಾನಿಗಳು ಮಾತ್ರವಲ್ಲ ಆಯೋಜಕರ ಕೆಂಗಣ್ಣಿಗೆ ಗುರಿಯಾಗಿದ್ದರು. ನವೀನ್ ಎಸೆತದಲ್ಲಿ ಶಾಹಿದ್ ಆಫ್ರಿದಿ ಬೌಂಡರಿ ಸಿಡಿಸಿದ್ದರು. ಇದರಿಂದ ನವೀನ್ ಉಲ್ ಹಕ್ ಪಿತ್ತ ನೆತ್ತಿಗೇರಿತ್ತು. ಆಫ್ರಿದಿ ವಿರುದ್ಧ ಅಸಭ್ಯ ಪದ ಬಳಕೆ ಮಾಡಿದ್ದರು. ನವೀನ್ ಉಲ್ ಹಕ್ ಬಳಸುವ ಪದಗಳು ಬೆಂಕಿ ಚೆಂಡುಗಳಂತಿರುತ್ತದೆ ಅನ್ನೋದಕ್ಕೆ ಈ ಹಿಂದಿನ ಎಲ್ಲಾ ಘಟನೆಗಳೇ ಸಾಕ್ಷಿ. ನವೀನ್ ಉಲ್ ಹಕ್ ಮಾತಿನಿಂದ ಕೆರಳಿದ ಶಾಹೀದ್ ಆಫ್ರಿದಿ, ನೇರವಾಗಿ ತಿರುಗೇಟು ನೀಡಿದ್ದರು. ಮಗನೇ ನೀನು ಹುಟ್ಟುವ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾನು ಸೆಂಚುರಿ ಸಿಡಿಸಿದ್ದೇನೆ ಎಂದಿದ್ದರು. ಈ ಪಂದ್ಯದ ಬಳಿಕ ಶೇಕ್‌ಹ್ಯಾಂಡ್ ವೇಳೆ ನವೀನ್ ಉಲ್ ಹಕ್, ಕೊಹ್ಲಿಗೆ ಮಾಡಿದ ರೀತಿಯಲ್ಲೇ ಆಫ್ರಿದಿ ಕೈತಳ್ಳಿದ್ದರು.

IPL 2023 ಕೊಹ್ಲಿ ಗಂಭೀರ್ ನಡುವಿನ ಕಿತ್ತಾಟಕ್ಕೆ ಕಾರಣ ಬಹಿರಂಗ? ಪಂದ್ಯದಲ್ಲಿ ನಡೆದಿತ್ತು ಜಟಾಪಟಿ!

ಇಷ್ಟಕ್ಕೆ ನವೀನ್ ಉಲ್ ಹಕ್ ರಂಪಾಟ ಮುಗಿದಿಲ್ಲ. ಕೊಹ್ಲಿ ಜೊತೆಗಿನ ಜಟಾಪಟಿ ಬಳಿಕ ಇನ್‌ಸ್ಟಾಗ್ರಾಂನಲ್ಲಿ ತಿರುಗೇಟು ನೀಡುವ ಪ್ರಯತ್ನ ನವೀನ್ ಉಲ್ ಹಕ್ ಮಾಡಿದ್ದಾರೆ. ಇದೇ ರೀತಿ ಅಂದು ಆಫ್ರಿದಿಗೆ ತಿರುಗೇಟು ನೀಡಿದ್ದರು. ಪಂದ್ಯದ ಬಳಿಕ ಆಫ್ರಿದಿ, ಉಲ್ ಹಕ್‌ಗೆ ಕಿವಿಮಾತು ಹೇಳಿದ್ದರು. ಕ್ರೀಡಾಸ್ಪೂರ್ತಿಯಿಂದ ಕ್ರಿಕೆಟ್ ಆಡಿ. ಆದರೆ ಅಸಭ್ಯ ಪದಗಳನ್ನು ಬಳಸಬೇಡಿ. ನನಗೆ ಆಫ್ಘಾನಿಸ್ತಾನ ಕ್ರಿಕೆಟ್‌ನಲ್ಲಿ ಹಲವು ಉತ್ತಮ ಗೆಳೆಯರಿದ್ದಾರೆ. ಆತ್ಮೀಯರಿದ್ದಾರೆ. ಪ್ರತಿಸ್ಪರ್ಧಿಯನ್ನು ಗೌರವಿಸುವುದು ಕಲಿಯಿರಿ. ಇದು ಕ್ರೀಡೆಯ ಮೂಲಭೂತ ಕರ್ತವ್ಯ ಎಂದು ಆಫ್ರಿದಿ ಸಲಹೆ ನೀಡಿದ್ದರು.

ಪಾಕಿಸ್ತಾನ ವೇಗಿ ಮೊಹಮ್ಮದ್ ಬೌಲಿಂಗ್ ಮಾಡುತ್ತಿದ್ದ ವೇಳೆಯೂ ನವೀನ್ ಉಲ್ ಹಕ್ ಕಿರಿಕ್ ಮಾಡಿದ್ದಾನೆ. ಆಮೀರ್ ಬೆಂಕಿ ಚೆಂಡಿಗೆ ರನ್ ಗಳಿಸಲು ಪರದಾಡಿದ ನವೀನ್ ಉಲ್ ಹಕ್ ಸ್ಲೆಡ್ಜಿಂಗ್ ಮೂಲಕ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದರು. 

IPL 2023 ಮೈದಾನದಲ್ಲೇ ಕಿತ್ತಾಡಿದ ಕೊಹ್ಲಿ-ಗಂಭೀರ್‌ಗೆ ಪಂದ್ಯದ ಶೇ.100 ರಷ್ಟು ದಂಡ!

ಶ್ರೀಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಿಸರಾ ಪರೇರಾ ಜೊತೆಗೂ ನವೀನ್ ಉಲ್ ಹಕ್ ಕಿರಿಕ್ ಮಾಡಿಕೊಂಡಿದ್ದಾರೆ. ನವೀನ್ ಉಲ್ ಹಕ್ ಎಸೆತದಲ್ಲಿ ಪರೇರಾ ಬೌಂಡರಿ ಸಿಡಿಸಿದ್ದರು. ಇದರಿಂದ ಹಕ್ ಆಕ್ರೋಶ ಹೆಚ್ಚಾಯಿತು. ಬಳಿಕ ಪ್ರತಿ ಎಸೆತಕ್ಕೂ ಸ್ಲೆಡ್ಜಿಂಗ್ ಆರಂಭಿಸಿದ ನವೀನ್ ಉಲ್ ಹಕ್‌ಗೆ ಬ್ಯಾಟ್ ಮೂಲಕ ಪರೇರಾ ಉತ್ತರ ನೀಡಿದ್ದರು. ಒಂದು ಎಸೆತದಲ್ಲಿ 2 ರನ್‌ಗಾಗಿ ರನ್ನಪ್ ಮಾಡುತ್ತಿದ್ದ ವೇಳೆ ನವೀನ್ ಉಲ್ ಹಕ್ ಪರೇರಾಗೆ ಅಡ್ಡ ಬಂದು ಡಿಕ್ಕಿ ಹೊಡೆದಿದ್ದಾರೆ. ರನ್ ಪೂರೈಸಿದ ಬಳಿಕ ಬಂದ ಪರೇರಾ ಇದ್ಯಾವ ರೀತೀಯ ಕ್ರಿಕೆಟ್ ಎಂದು ಪ್ರಶ್ನಿಸಿದ್ದಾರೆ. ಮಾತನಾಡಲು ಯಾವುದೇ ಪದಗಳೇ ಇಲ್ಲದಿದ್ದರೂ ನವೀನ್ ಉಲ್ ಹಕ್ ಕಿರಿಕ್ ಮಾಡಿಕೊಂಡಿದ್ದಾನೆ. ಬಳಿಕ ಅಂಪೈರ್ ಮದ್ಯಪ್ರವೇಶಿಸಿ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ. 

ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ನವೀನ್ ಉಲ್ ಹಕ್ ಹಲವು ಬಾರಿ ಕಿರಿಕ್ ಮಾಡಿಕೊಂಡಿದ್ದಾನೆ. ಇದೀಗ ವಿರಾಟ್ ಕೊಹ್ಲಿ ಜೊತೆ ಕಿರಿಕ್ ಮಾಡಿ ಮತ್ತೆ ಸುದ್ದಿಯಾಗಿದ್ದಾನೆ.


 

Follow Us:
Download App:
  • android
  • ios